ಗುಟ್ಕಾ ನಿಷೇಧ ಆದೇಶಕಟ್ಟುನಿಟ್ಟಾಗಿ ಜಾರಿಗೊಳಿಸಿ
ಗದಗ: ಜಿಲ್ಲೆಯಲ್ಲಿ ತಂಬಾಕು ಮಿಶ್ರಿತ ಗುಟ್ಕಾ ಮತ್ತು ಪಾನ್ಮಸಾಲಗಳನ್ನು ನಿಷೇಧಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ್ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಟಿ. ಶರಣಪ್ಪ ಮಾತನಾಡಿ, ತಂಬಾಕು ಮತ್ತು ನಿಕೋಟಿನ ಫಟಕಾಂಶಗಳನ್ನೊಳಗೊಂಡ ಗುಟ್ಕಾ ಪಾನ್ಮಸಾಲ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಪ್ರಕಾರ ಗುಟ್ಕಾ ಮತ್ತು ಪಾನ್ಮಸಾಲ್ ನಿಷೇಧಿಸಿದ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸುವ ಕುರಿತು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸಮೀಕ್ಷಾಧಿಕಾರಿಗಳು ಮತ್ತು ಅಂಕಿತ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಲ್ಲಿ ಸಮಾವೇಶ
ಗದಗ: ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪ್ರೊತ್ಸಾಹಧನ, ಆರೋಗ್ಯ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಆ. 26ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಟೌನ್ಹಾಲ್ನಲ್ಲಿ ಆಶಾ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಸಂಘಟಿಸಲಾಗಿದೆ. ಈ ಸಮಾವೇಶಕ್ಕೆ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕವಿಯತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ, ಮಹಿಳಾ ಹೋರಾಟಗಾರ್ತಿ ಮೀರಾ ನಾಯಕ್, ಚಂದ್ರಕಲಾ ನಂದಾವರ ಹಾಗೂ ಆಲ್ ಇಂಡಿಯಾ ಯುಟಿಯುಸಿಯ ರಾಜ್ಯಾಧ್ಯಕ್ಷ ಕೆ. ರಾಧಾಕೃಷ್ಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಇಂದು ಚಿಂತನಗೋಷ್ಠಿ
ಗದಗ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಹಿರಿಯ ಕಲಾವಿದರು ಹಾಗೂ ಉಪನ್ಯಾಸಕರಿಂದ ಕಲಾನುಭವ ಚಿಂತನ ಗೋಷ್ಠಿಯನ್ನು ನಗರದ ವಿಜಯ ಕಲಾಮಂದಿರ ಸಂಸ್ಥೆಯಲ್ಲಿ ಆ. 23ರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಉಪನ್ಯಾಸಕರಾಗಿ ಬೆಂಗಳೂರಿನ ಬಿ.ಜಿ.ಎಸ್. ಪ್ರೌಢಶಾಲೆಯ ಶಿಕ್ಷಕ ಮಂಜುನಾಥ ವಾಲಿ ಆಗಮಿಸಲಿದ್ದು, ಆಸಕ್ತರು ಪಾಲ್ಗೊಳ್ಳುವಂತೆ ಕಲಾಮಂದಿರದ ಪ್ರಾಚಾರ್ಯರು ತಿಳಿಸಿದ್ದಾರೆ.
ಇಂದು ಮೂರ್ತಿ ಪ್ರತಿಷ್ಠಾಪನೆ
ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ವೆಂಕಟೇಶ್ವರ ದೇವಸ್ಥಾನ ಹಾಗೂ ವೆಂಕಟೇಶ್ವರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವು ಆ. 23 ಬೆಳಗ್ಗೆ 9.25ಕ್ಕೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪರಿಹಾರ ಹಣಕ್ಕಾಗಿ ಕಾರು, ಪೀಠೋಪಕರಣ ಜಪ್ತಿ
ಗದಗ: ಅಪಘಾತದಲ್ಲಿ ಮೃತಪಟ್ಟ ಕುಂಟುಂಬವೊಂದಕ್ಕೆ ಪರಿಹಾರ ನೀಡದ ಕಾರಣ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ಘಟಕಕ್ಕೆ ಸಂಬಂಧಿಸಿದ ಇಂಡಿಕಾ ಕಾರು, ಪೀಠೋಪಕರಣಗಳನ್ನು ಗುರುವಾರ ಜಪ್ತಿ ಮಾಡಲಾಯಿತು.
ಮುಂಡರಗಿ ಎಸ್.ಎಸ್. ಪಾಟೀಲ ನಗರದಲ್ಲಿ 2009ರಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದ ಫಕ್ಕೀರಪ್ಪ ಗುಗ್ಗರಿ ಮೃತಪಟ್ಟಿದ್ದರು. ಈ ಸಂಬಂಧ 2010ರಲ್ಲಿ ಮೃತ ಕುಟುಂಬಕ್ಕೆ ರು. 6 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿತ್ತು. ರು. 6 ಲಕ್ಷದಲ್ಲಿ ರು. 2 ಲಕ್ಷ ಪರಿಹಾರ ನೀಡಿತ್ತು. ಅದರಿಂದ ನ್ಯಾಯಾಲಯಕ್ಕೆ ಕಾಯಿಸಿದ್ದರ ಪರಿಣಾಮ ಬಾಕಿ ರು. 4 ಲಕ್ಷಕ್ಕಾಗಿ ಇಲಾಖೆಗೆ ಸಂಬಂಧಿಸಿದ ಸಾಮಗ್ರಿಯನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.
2010ರ ಮತ್ತೊಂದು ಅಪಘಾತದಲ್ಲಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಯಲ್ಲಪ್ಪ ಕರಿ ಎಂಬುವವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಗಾಯಾಳು 2010 ರಲ್ಲಿ ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ ನ್ಯಾಯಾಲಯ ಕೆಎಸ್ಆರ್ಟಿಸಿಯು ರು. 1.90 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. 2010ರಿಂದ ಇಲ್ಲಿಯವರೆಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಪರಿಹಾರ ನೀಡದೇ ಇರದ ಕಾರಣ ನ್ಯಾಯಾಲಯವು ಗುರುವಾರ ಕೆಎಸ್ಆರ್ಟಿಸಿಯಲ್ಲಿನ ವಸ್ತುಗಳ ಜಪ್ತಿಗೆ ಆದೇಶಿಸಿದ್ದು, ಗುರುವಾರ ಯಲ್ಲಪ್ಪ ಗುಗ್ಗರಿ ಅವರು ನ್ಯಾಯವಾದಿಗಳೊಂದಿಗೆ ಆಗಮಿಸಿ ಕೆಎಸ್ಆರ್ಟಿಸಿಗೆ ಆಗಮಿಸಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಆರ್.ಜಿ. ಕಲ್ಲೂರ, ಸಿ.ಆರ್. ವಡಕಣ್ಣವರ, ಸಿ.ಆರ್. ಚಕ್ರಣ್ಣವರ, ಗಾಯಾಳು ಯಲ್ಲಪ್ಪ ಕರಿ ಹಾಗೂ ಮೃತರ ಕುಟುಂಬದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

