ಗದಗ

ಕ್ರೀಡಾ ಕ್ಷೇತ್ರಕ್ಕೆ ಗದಗ ಜಿಲ್ಲೆ ಕೊಡುಗೆ ಅಪಾರ

Published On :

ಗದಗ: ಗದಗ ಜಿಲ್ಲೆಯು ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಉತ್ತಮ ಕ್ರೀಡಾಪಟುಗಳನ್ನು ಹೊರಹೊಮ್ಮಿಸಿ ಹಲವಾರು ಕ್ರೀಡಾ ಪಂದ್ಯಾವಳಿಗಳನ್ನು ಉತ್ತಮವಾಗಿ ಸಂಘಟಿಸಿ, ನಾಡಿನಲ್ಲಿ ತನ್ನದೇಯಾದ ಖ್ಯಾತಿ ಹೊಂದಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ ಹೇಳಿದರು.
ಅವರು ಶನಿವಾರ ಬೆಟಗೇರಿ ಕೆಎಸ್‌ಆರ್‌ಟಿಸಿ ಡಿಪೋದ ಎದುರಿನ ರಾಜ್ಯ ಹೆದ್ದಾರಿಯಲ್ಲಿ ಓಲಂಪಿಕ್ ಸ್ಪೋರ್ಟ್ಸ್ ಕ್ಲಬ್ ಗದಗ, ಗದಗ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಶಿಯೇಶನ್ ಇವರ ಆಶ್ರಯದಲ್ಲಿ ನಡೆದ 8ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಕ್ರೀಡಾಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯ. ಕ್ರೀಡೆಯು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಸೋಲು, ಗೆಲುವನ್ನು ಲೆಕ್ಕಿಸದೇ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡೆಯನ್ನು ಪ್ರೋತ್ಸಾಹಿಸಬೇಕಿದೆ. ಗದಗ ಭಾಗದಲ್ಲಿರುವ ಸೀಮಿತ ಅವಕಾಶಗಳ ಮಧ್ಯದಲ್ಲಿಯೇ ಕಳೆದ 2 ದಶಕದಿಂದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕ್ರೀಡಾಪಟುಗಳು ಭಾಗವಹಿಸಿ ನಗರದ ಖ್ಯಾತಿ ಹೆಚ್ಚಿಸಿದ್ದಾರೆ ಎಂದರು.
ಕಮಾಂಡರ್ ವಿ. ಸೋಮಣ್ಣ ಮಾತನಾಡಿ, ಎಲ್ಲ ಸ್ಪರ್ಧಾಳುಗಳಿಗೆ ಶುಭ ಕೋರಿದರು. ಸಂಜೀವ ದೇಸಾಯಿ ಮಾತನಾಡಿದರು. ರಾಜ್ಯದ ಸೈಕ್ಲಿಂಗ್ ಸಂಸ್ಥೆಯ ಉಪಾಧ್ಯಕ್ಷ ಜಿ.ವಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕುರ್ಣಿ, ಅಂತಾ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಪಟು ರಾಜೇಸಾಬ ಅತ್ತಾರ, ಏಕಲವ್ಯ ಪ್ರಶಸ್ತಿ ವಿಜೇತ ಶ್ರೀಧರ ಸವಣೂರ, ಅಂತಾರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಡಾ. ಸಂಜೀವ ಜೋಶಿ, ಯುವಜನ ಸೇವಾ ಕ್ರೀಡಾ ಇಲಾಖೆ ಗದಗ ಅಧಿಕಾರಿ ಕೆ. ಶಂಕರ, ಸಿಪಿಐ ಆರ್.ಎಸ್. ಬೆಂತೂರ, ಚನ್ನಪ್ಪ ಜಗಲಿ, ರಾಜ್ಯ ಸೈಕ್ಲಿಂಗ್ ಅಸೋಶಿಯೇಶನ್‌ನ ರವಿ ಮರಿಲಿಂಗಣ್ಣವರ, ಪಿಎಸ್‌ಐ ಪ್ರಸಾದ ಕವರಿ, ಬಸವರಾಜ, ಎನ್. ಲಕ್ಷ್ಮಣ, ರಾಜ್ಯ ಸೈಕ್ಲಿಂಗ್ ಸಂಸ್ಥೆ ಉಪಾಧ್ಯಕ್ಷರು ಇದ್ದರು. ಓಲಂಪಿಕ್ ಜಿಲ್ಲಾ ಸಂಸ್ಥೆ ಅಧ್ಯಕ್ಷ ಡಾ. ಗುರುಪ್ರಸಾದ ಸ್ವಾಗತಿಸಿ, ವೈ.ಕೆ. ಚೌಡಾಪುರ ನಿರೂಪಿಸಿದರು. ಶ್ಯಾಮ್‌ಸನ್ ಡಾನ್ ವಂದಿಸಿದರು.
ಕ್ರೀಡಾಕೂಟದಲ್ಲಿ ರಾಜ್ಯದ ಬೇರೇ ಬೇರೆ ಜಿಲ್ಲೆಗಳಿಂದ ಸೈಕ್ಲಿಂಗ್ ಕ್ರೀಡಾಪಟುಗಳು ಆಗಮಿಸಿದ್ದಾರೆ. 8 ಪಂದ್ಯಾವಳಿಯಲ್ಲಿ ಬಿಜಾಪುರ-9, ಬಾಗಲಕೋಟ-21, ಬೆಂಗಳೂರು-10, ಗದಗ-12, ಬೆಳಗಾವಿ-6, ಮೈಸೂರ-5, ಬೀದರ-1, ತುಮಕೂರ-1, ಕ್ರೀಡಾ ನಿಲಯ ಬಿಜಾಪುರ-36, ಕ್ರೀಡಾ ನಿಲಯ ಬಾಗಲಕೋಟ-23, ಕ್ರೀಡಾನಿಲಯ ಗದಗ-4, ಕ್ರೀಡಾಶಾಲೆ ಚಂದರಗಿ-8 ಸೈಕ್ಲಿಂಗ್ ಪಟುಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.