ಸ್ವಾಭಿಮಾನಿ ದೃಷ್ಟಿ ಬೆಳೆಸಿದ ರಾಜೀವ್ ದಿಕ್ಷೀತ್
ಗದಗ: ವಿದೇಶಿ ವ್ಯಾಮೋಹ, ಅಂಧಾನುಕರಣೆ ತೈಜಿಸಿ ಸ್ವಾಭಿಮಾನಿ ದೃಷ್ಟಿ ಬೆಳೆಸುವ ನಿಟ್ಟಿನಲ್ಲಿ ರಾಜೀವ ದಿಕ್ಷೀತ್ ಯಶಸ್ವಿಯಾದದ್ದು ಆಂದೋಲನಗಳ ಸಂಘಟನೆಗಳಿಗೆ ಅನುವಾಗಿದೆ ಎಂದು ಸಾಹಿತಿ, ಪರಿಸರ ಹೋರಾಟಗಾರ ರವೀಂದ್ರ ಕೊಪ್ಪರ ಅಭಿಪ್ರಾಯಪಟ್ಟರು.
ಅವರು ಶನಿವಾರ ನಗರದ ಭೂಮರಡ್ಡಿ ವೃತ್ತದ ಹತ್ತಿರದ ಪತಂಜಲಿ ಚಿಕಿತ್ಸಾಲಯದಲ್ಲಿ ಪತಂಜಲಿ ಚಿಕಾತ್ಸಾಲಯ ಆಯೋಜಿಸಿದ್ದ ರಾಜೀವ್ ದಿಕ್ಷೀತ್ ಅವರ 46ನೇ ಜಯಂತ್ಯುತ್ಸವ ಹಾಗೂ 3ನೇ ವರ್ಷದ ಪುಣ್ಯತಿಥಿ ಅಂಗವಾಗಿ ನೆನಹು ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮತನ ಗುರುತಿಸುವುದೇ ಸ್ವದೇಶಿ ಅಂದೋಲನದ ನಿಜವಾದ ಗುರಿ ಎಂದು ತಿಳಿದಿದ್ದ ದಿಕ್ಷೀತ್, ವಸಹಾತುದಾರರ ಕರಿ ಛಾಯೆಯಿಂದ ಹೊರಬಂದು ನಿಜವಾದ ಸ್ವಾತಂತ್ರ್ಯವನ್ನು ಪಡೆಯುವುದು, ವಿದೇಶಿ ವಿನಿಮಯ ಉಳಿಸುವುದರಿಂದ ರಾಷ್ಟ್ರವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮಾತ್ರವಲ್ಲದೇ ವಿದೇಶಿ ಕಂಪನಿಗಳ ಅನುಭೋಗಿ ಸರಕುಗಳಿಂದಾಗುತ್ತಿರುವ ಆರೋಗ್ಯದ ಹಾನಿ ಹಾಗೂ ನಮ್ಮ ಮಾನಸಿಕತೆಯ ಮೇಲಾಗುತ್ತಿರುವ ದೂರಗಾಮಿ ಅಪಾಯಗಳನ್ನು ತಪ್ಪಿಸುವಂತೆ ವ್ಯಾಪಕವಾಗಿ ಜನಜಾಗೃತಿ ಮಾಡುತ್ತಾ ನಮ್ಮ ಸರ್ಕಾರ ಮಾಡುತ್ತಿರುವ ಅಪಚಾರಗಳನ್ನು ಜನಮನಕ್ಕೆ ಅರಿಕೆ ಮಾಡಿಕೊಟ್ಟಿದ್ದು ರಾಜೀವರ ಮಹತ್ತರ ಸಾಧನೆ ಎಂದರು. ಸಾನ್ನಿಧ್ಯವಹಿಸಿದ್ದ ರೋಣ ಗುಲಗಂಜಿ ಮಠದ ಗುರುಪಾದದೇವರು ಮಾತನಾಡಿದರು. ವಿದ್ಯಾದಾನ ಸಮಿತಿ ಕಾಲೇಜಿನ ಉಪನ್ಯಾಸಕ ದತ್ತಪ್ರಸನ್ನ ಪಾಟೀಲ ಅವರು ರಾಜೀವ ದಿಕ್ಷೀತ್ರ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ ಗುರುಗಳನ್ನು ಸನ್ಮಾನಿಸಲಾಯಿತು. ಪ್ರವೀಣ ಬನ್ಸಾಲಿ, ನೀಲಪ್ಪಗೌಡ ದಾನಪ್ಪಗೌಡ್ರ, ಜಸ್ವಿರ್ಸಿಂಗ್ ಕೌಸಾಲ, ಎಂ.ಡಿ. ಪಾಟಿಲ, ಐ.ವೈ. ಅಂಗಡಿ, ವಿಶ್ವನಾಥ ಶೀರಿ, ಗಿರೀಶ ಪಂಥರ, ಆನಂದ ಶೇಠ, ಪ್ರಶಾಂತ ಪಾಲನಕರ, ಮಂಜುನಾಥ ಪೋತ್ನೆಕಲ್, ಭೀಮಣ್ಣ ಸತ್ಯಪ್ಪನವರ, ಮಹೇಶ ರೋಖಡೆ, ಡಾ. ಐಹೊಳೆ, ಅಶೋಕ ಕುಲಕರ್ಣಿ, ಡಾ. ಮತ್ತಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಪದ್ಮಾವತಿ ಮರಿಬಸಣ್ಣವರ ಪ್ರಾರ್ಥಿಸಿದರು. ಗಿರೀಶ ಪಂಥರ ಸ್ವಾಗತಿಸಿದರು. ಸುಮಾ ಕರಿಗಾರ ನಿರೂಪಿಸಿದರು. ದೀಪಾ ಪೂಜಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

