ಇಂದು ದಂತ ತಪಾಸಣೆ ಶಿಬಿರ
ರೋಣ: ಮಲ್ಲಿಕಾರ್ಜುನ ಬೂದಿಹಾಳ ಅಭಿಮಾನಿಗಳ ಸಂಘದ ವತಿಯಿಂದ ಕುಶಾಲ್ ಬೂದಿಹಾಳ್ ಅವರ 4ನೇ ಜನ್ಮದಿನದ ನಿಮಿತ್ತ ಫೆ. 8ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪಟ್ಟಣದ ಸಿದ್ಧಾರೂಢ ಮಠದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಮಲ್ಲಿಕಾರ್ಜುನ ಬೂದಿಹಾಳ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಜೇಂದ್ರಗಡ ಪಟ್ಟಣದ ದಂತ ವೈದ್ಯ ಡಾ ಶ್ರೀಕಾಂತ ಅವರ ನೇತೃತ್ವದ ತಂಡದಿಂದ ಕಂಪ್ಯೂಟರೀಕೃತ ದಂತ ತಪಾಸಣೆ ನಡೆಯಲಿದೆ. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನರ ತುಲಾಭಾರ, 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿವೆ. ಸಂಜೆ 6 ಗಂಟೆಗೆ ಗಜೇಂದ್ರಗಡದ ಚೈತ್ರಾ ಮೆಲೋಡಿಸ್ ತಂಡದಿಂದ ರಸಮಂಜರಿ ಇದೆ. ಕಾರ್ಯಕ್ರಮದಲ್ಲಿ ಹರ್ತಿಯ ಮಹೇಶ ಗುರೂಜಿ. ಡಾ ಎ.ಸಿ. ಹುಲಿ, ಕಲಾವಿದ ಯಮನಪ್ಪ ಚಿತ್ರಗಾರ ಅವರನ್ನು ಸನ್ಮಾನಿಸಲಾಗುವುದು ಎಂದರು. ಜ್ಯೋತಿ ಬೂದಿಹಾಳ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಲೀಲಾ ಚಿತ್ರಗಾರ, ಭಾರತಿ ಮಲಕಸಮುದ್ರಮಠ, ದೊಡ್ಡಬಸಪ್ಪ ನವಲಗುಂದ, ವಿರೂಪಾಕ್ಷಪ್ಪ ಶಿರೋಳ, ಬಿ.ಬಿ. ಮಿಶ್ರಿಕೋಟಿ, ಪ್ರಭು ಕುಲಕರ್ಣಿ, ಮಹಾದೇವಪ್ಪ ನವಲಗುಂದ ಉಪಸ್ಥಿತರಿದ್ದರು.
ಇಂದು ವಾರ್ಷಿಕ ಶಿಬಿರ ಉದ್ಘಾಟನೆ
ನರಗುಂದ: ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2012-13ನೇ ಸಾಲಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಫೆ. 8ರ ಸಂಜೆ 5 ಗಂಟೆಗೆ ತಾಲೂಕಿನ ಅರಿಷಿಣಗೋಡಿ ಪ್ರಾಥಮಿಕ ಶಾಲೆ ಆವರಣದಲ್ಲಿ ನೆರವೇರಲಿದೆ. ಸಿ.ಜೆ. ಕಾಡದೇವರಮಠ, ಶಾಸಕ ಸಿ.ಸಿ. ಪಾಟೀಲ, ಪ್ರಾಚಾರ್ಯೆ ನೀಲಾಂಬಿಕಾ ಪಟ್ಟಣಶಟ್ಟಿ, ಪಿ.ಎಸ್. ಅಣ್ಣಿಗೇರಿ, ಡಾ ಮಲ್ಲಪ್ಪ ಕಮತಗಿ, ಎಚ್.ವಿ. ಮೇಟಿ, ಬಸವರಡ್ಡಿ ರಾಯರಡ್ಡಿ, ಎಚ್.ಆರ್. ಮೇಟಿ, ಶಂಕರಗೌಡ ಪಾಟೀಲ, ಭೀಮರಡ್ಡಿ ಮೇಟಿ, ಭೀಮರಡ್ಡಿ ರಿತ್ತಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಕೆ.ಎಚ್. ಪಾಟೀಲ ಪ್ರಾರ್ಥನಾ ಸಭೆ
ಗದಗ: ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲರ ಪುಣ್ಯಸ್ಮರಣೆ ಅಂಗವಾಗಿ ಫೆ. 9ರಂದು ಬೆಳಗ್ಗೆ 8.30ಕ್ಕೆ ಸ್ಥಳೀಯ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಪ್ರಾರ್ಥನಾ ಸಭೆ ಏರ್ಪಡಿಸಲಾಗಿದೆ. ಕೆ.ಎಚ್. ಪಾಟೀಲರ ಅಭಿಮಾನಿಗಳು ಪಾಲ್ಗೊಳ್ಳುವಂತೆ ಕೆ.ಎಚ್. ಪಾಟೀಲ ಪ್ರತಿಷ್ಠಾನದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

