ಗದಗ

ಜಾತಿ ರಾಜಕಾರಣ ನಿಲ್ಲಲಿ: ಉಮಾಶ್ರೀ

Published On :

ರೋಣ: ಜಾತಿ ರಾಜಕಾರಣದಿಂದ ನಾಡಿನ ಜನತೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಜಾತಿ ರಾಜಕಾರಣ ಅಳಿದು ಜನಪರ ರಾಜಕೀಯ ಬರಬೇಕೆಂದು ಚಿತ್ರನಟಿ, ಕಾಂಗ್ರೆಸ್ ನಾಯಕಿ ಉಮಾಶ್ರೀ ಹೇಳಿದರು.  ಈಚೆಗೆ ಅವರು ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ನೀಲಕಂಠೇಶ್ವರ ಜಾತ್ರೆಯ ಅಂಗವಾಗಿ ನಡೆದ ನೂತನ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಹಾಗೂ ನೀಲಕಂಠೇಶ್ವರ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಸ್. ಪಾಟೀಲ್ ಮಾತನಾಡಿ, ತಮ್ಮ ಹಿಂದಿನ ರಾಜಕೀಯ ಜೀವನ ನೆನಪಿಸಿಕೊಂಡರು. ಸಾನ್ನಿಧ್ಯ ವಹಿಸಿದ್ದ ಬಸಯ್ಯ ಸ್ವಾಮಿ ನೀಲಕಂಠಮಠ ಹಾಗೂ ನನ್ನಯ್ಯ ಸ್ವಾಮಿ ಹಿರೇಮಠ ಆಶೀರ್ವಚನ ನೀಡಿದರು.  ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ಐ.ಎಸ್. ಪಾಟೀಲ, ತಾಪಂ ಸದಸ್ಯ ಧರ್ಮಣ್ಣ ಬೂಸಗೌಡ್ರ, ಗಾಯತ್ರಿ ನಾಗನೂರ, ಮಂಜುಳಾ ಹುಲ್ಲಣ್ಣವರ, ವಿ.ಬಿ. ಸೋಮನಕಟ್ಟಿಮಠ, ಗ್ರಾಪಂ ಅಧ್ಯಕ್ಷೆ ದೇವಕ್ಕ ಕುರಿಯವರ, ಸದಸ್ಯ ವಿ.ವಿ. ನೆಲ್ಲೂರಮಠ, ಎಲ್.ವಿ. ಹಣಸಿ, ವಿ.ಆರ್. ಗುಡಿಸಾಗರ, ಬಿ.ಎಸ್. ಕುರಿಯವರ, ಆರ್.ಆರ್. ಕುರಿಯವರ, ಯೂಸೂಫ್ ಇಟಗಿ, ಪರಪ್ಪ ಹೂವಿನಹಾಳ, ಕೆ.ಎಚ್. ನಾಗನೂರ, ಮೇಘರಾಜ ಮೂರನಾಳ, ಆನಂದ ರೋಣದ, ಕೆ.ಎಸ್. ಪ್ಯಾಟಿಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಮುತ್ತು ಹೂವಿನಹಾಳ ಸ್ವಾಗತಿಸಿದರು. ಬಿ.ಎಂ. ಪ್ಯಾಟಿಗೌಡ್ರ ನಿರೂಪಿಸಿದರು. ಸುಭಾಷ ನಾಗನೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.