ಗದಗ

ರೋಣ: ಕಸದ ರಾಶಿ ತೆರವು

Published On :

ಕನ್ನಡಪ್ರಭ ವಾರ್ತೆ, ರೋಣ, ಜ. 22
ಪಟ್ಟಣದಲ್ಲಿನ ಕಸ ವಿಲೇವಾರಿ ಮಾಡದೇ ಟ್ರ್ಯಾಕ್ಟರ್‌ನಲ್ಲಿ ಡೀಸೆಲ್ ಇಲ್ಲವೆಂದು ಕಸ ಹೇರಿಕೊಂಡು ನಿಂತಿರುವ ಕುರಿತು ಹಾಗೂ ಪಟ್ಟಣದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಕಸದ ರಾಶಿಗಳು ಬಿದ್ದು, ಜನತೆ ಎದುರಿಸುತ್ತಿರುವ ಸಮಸ್ಯೆ ಮತ್ತು ಪುರಸಭೆ ನಿರ್ಲಕ್ಷ್ಯದ ಕುರಿತು ಜ. 21ರಂದು 'ರೋಣ ಪುರಸಭೆ ಈಗ ಕಸ ವಿಲೇವಾರಿ ತಾಣ' ಎಂಬ ಸಚಿತ್ರ ವರದಿಯನ್ನು 'ಕನ್ನಡಪ್ರಭ' ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪುರಸಭೆ ಪಟ್ಟಣದಲ್ಲಿನ ಕಸದ ರಾಶಿಗಳನ್ನು ಸೋಮವಾರವೇ ವಿಲೇವಾರಿ ಮಾಡಿದೆ. 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷೆ ನೀಲವ್ವ ಮಗಳಿ, ಇನ್ನು ಮುಂದೆ ಪಟ್ಟಣದಲ್ಲಿನ ಎಲ್ಲ ಗಟಾರಗಳನ್ನು ಸ್ವಚ್ಛಮಾಡಲಾಗುವುದು. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಗಳನ್ನು ತೆರುವುಗೊಳಿಸಿ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.