ಗದಗ

ಸುದ್ದಿ ಸಂಕ್ಷೇಪ

Published On :

ಪಿಂಚಣಿ ಅದಾಲತ್: 150 ಪ್ರಕರಣ ಇತ್ಯರ್ಥ
ನರೇಗಲ್ಲ: ಮಂಗಳವಾರ ಸ್ಥಳೀಯ ಗಾಂಧಿ ಭವನದಲ್ಲಿ ಉಪವಿಭಾಗಾಧಿಕಾರಿ ಐ.ಜೆ. ಗದ್ಯಾಳ ಅಧ್ಯಕ್ಷತೆಯಲ್ಲಿ ನರೇಗಲ್ಲ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಯಿತು. ವಿವಿಧ ಬಗೆಯ 150 ಪಿಂಚಣಿ ಪ್ರಕರಣಗಳು ಈ ಅದಾಲತ್‌ನಲ್ಲಿ ಇತ್ಯರ್ಥಗೊಂಡವು. ಸ್ಥಳದಲ್ಲಿ ಪರಿಶೀಲಿಸಿ ಪಿಂಚಣಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ಉಪವಿಭಾಗಾಧಿಕಾರಿ ಗದ್ಯಾಳ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಎ.ಎ. ಕಂಬಾಳಿಮಠ, ನರೇಗಲ್ಲ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಎಂ.ಬಿ. ಹೊಸಕೇರಿ, ರೋಣ ಪ್ರಭಾರಿ ಉಪ ಖಜನಾಧಿಕಾರಿ ಆರ್.ಎನ್. ಜೋಗೇರ, ಸಕಾಲ ಜಿಲ್ಲಾ ಸಮಾಲೋಚನಾಧಿಕಾರಿ ಪ್ರಶಾಂತ ಚಿಕನಾಳ ಹಾಜರಿದ್ದು ಸಹಕಾರ ನೀಡಿದರು.
ಪಿಂಚಣಿ ಅದಾಲತ್ ಮುಂದೂಡಿಕೆ
ಗದಗ: ಜಿಲ್ಲೆಯ ಶಿರಹಟ್ಟಿಯಲ್ಲಿ ಜು. 25ರಂದು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಇರುವುದರಿಂದ ಜು. 25ರ ಬೆಳಗ್ಗೆ 10ಕ್ಕೆ ಕೊಣ್ಣೂರಿನ ಗ್ರಾಪಂದಲ್ಲಿ ನಿಗದಿಯಾಗಿದ್ದ ಪಿಂಚಣಿ ಅದಾಲತ್‌ನ್ನು ಜು. 31ಕ್ಕೆ ಮುಂದೂಡಲಾಗಿದೆ. ಜು. 31ರಂದು ನರಗುಂದದ ಹಳೇ ತಹಸೀಲ್ದಾರ್ ಕಚೇರಿಯಲ್ಲಿ ಬೆಳಗ್ಗೆ 10ಕ್ಕೆ ಪಿಂಚಣಿ ಅದಾಲತ್ ನಡೆಯಲಿದೆ. ನರಗುಂದ ಹೋಬಳಿ ಗ್ರಾಮಸ್ಥರು ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲ ಭತ್ಯೆ, ವಿಧವಾ ವೇತನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಬಹುದು. ಅರ್ಹರು ದಾಖಲೆಗಳೊಂದಿಗೆ ಹಾಜರಾದಲ್ಲಿ ಸ್ಥಳದಲ್ಲಿ ವಿವಿಧ ವೇತನ ಮಂಜೂರಾಗಿಸುವುದಾಗಿ ನರಗುಂದ ತಹಸೀಲ್ದಾರ್ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.