ಗದಗ

ಯೋಗದಿಂದ ರೋಗಮುಕ್ತ

Published On :

ಗಜೇಂದ್ರಗಡ: ಯೋಗದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಹಕಾರಿಯಾದ ಯೋಗಾಭ್ಯಾಸ ರೂಢಿಸಿಕೊಳ್ಳಿ ಎಂದು ಯೋಗ ಗುರು ವಚನಾನಂದ ಗುರೂಜಿ ಹೇಳಿದರು.
ಅವರು ಭಾನುವಾರ ಸ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಶಾಸಕ ಜಿ.ಎಸ್.ಪಾಟೀಲರ ಮಾತೋಶ್ರೀ ಬಸಮ್ಮಾ ಪಾಟೀಲರ 9ನೇ ಸ್ಮರಣೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ಯೋಗಾಭ್ಯಾಸ ಸಮಾರಂಭದಲ್ಲಿ ಮಾತನಾಡಿದರು.
ಯೋಗ ಕಲಿತವರು ಯೋಗಿಗಳಾಗುತ್ತಾರೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮುನ್ನಡೆಗೆ ಯೋಗದ ಕೊಡುಗೆ ಮಹತ್ತರವಾಗಿದೆ. ಮನುಕುಲಕ್ಕೆ ವರವಾದ ಯೋಗಭ್ಯಾಸ ನಿತ್ಯ ಮಾಡುವುದರಿಂದ ರೋಗಗಳು ದೂರವಾಗುತ್ತವೆ. ಅಲ್ಲದೆ ಸರ್ವ ವ್ಯಸನಗಳಿಗೆ ಮುಕ್ತಿ ಸಿಗುತ್ತದೆ ಎಂದರು.
ಮಿಥುನ್ ಪಾಟೀಲ ಮಾತನಾಡಿ, ಎಲ್ಲ ರೋಗ ರುಜಿನಗಳಿಗೆ ರಾಮ ಬಾಣವಾದ ಯೋಗಾಭ್ಯಾಸ ಮಾಡುವುದು ಸೂಕ್ತ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿದರು. ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಶ್ರೀಧರ ಗಂಜಿಗೌಡ್ರ, ಎಂ.ಎಚ್. ಕೋಲಕಾರ, ಮುರ್ತುಜಾ ಡಾಲಾಯತ್, ಶ್ರೀಕಾಂತ ಅವಧೂತ, ಹಸನ ತಟಗಾರ, ಪಿ.ಟಿ. ದಾನಿ ಮುಂತಾದವರು ಇದ್ದರು. ಪ್ರೊ.  ಎಫ್.ಎಸ್. ಕರಿದುರಗನವರ ನಿರೂಪಿಸಿದರು. ಉಮೇಶ ರಾಠೋಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.