ಇಂದು ಪಾದಯಾತ್ರೆ ಮೂಲಕ ಮತ ಯಾಚನೆ
ಶಿರಹಟ್ಟಿ: ಶಿರಹಟ್ಟಿ ಪಪಂನ 16 ವಾರ್ಡ್ಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪಾದಯಾತ್ರೆ ಮೂಲಕ ಸೋಮವಾರ ಸಂಜೆ 4ಕ್ಕೆ ಮತ ಯಾಚನೆ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ ಮತ ಯಾಚನೆಯ ನೇತೃತ್ವ ವಹಿಸಲಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಘಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬೈಕ್ ರ್ಯಾಲಿ
ಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಚಾರಾರ್ಥ ಗದಗ-ಬೆಟಗೇರಿ ನಗರದ ಮುಖ್ಯ ಬೀದಿಗಳಲ್ಲಿ ಗದಗ ವಿಧಾನಸಭಾ ಯುವ ಕಾಂಗ್ರೆಸ್ ಪಕ್ಷದ ಪರವಾಗಿ ಬೃಹತ್ ಬೈಕ್ ರ್ಯಾಲಿಯನ್ನು ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸ್ಥಳೀಯ ಕಾಟನ್ ಸೇಲ್ ಸೊಸೈಟಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಆರಂಭವಾಗುವ ರ್ಯಾಲಿಯಲ್ಲಿ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು, ಕಾಂಗ್ರೆಸ್ ಪಕ್ಷದ ಧ್ವಜದೊಂದಿಗೆ ನಗರ ಸಂಚಾರ ಆರಂಭಿಸಲಿವೆ. ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಯುವ ಕಾಂಗ್ರೆಸ್ನ ಅಧ್ಯಕ್ಷ ರವಿಕುಮಾರ ರಡ್ಡಿ ಹಾಗೂ ಉಪಾಧ್ಯಕ್ಷ ಅಶೋಕ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ನಿಡಗುಂದಿಕೊಪ್ಪ ಜಾತ್ರೆ
ನರೇಗಲ್ಲ: ಮಾ. 4 ಮತ್ತು 5ರಂದು ಸಮೀಪದ ನಿಡಗುಂದಿಕೊಪ್ಪದ ಶಿವಯೋಗ ಮಂದಿರದ ಶಾಖಾಮಠದ ಜಾತ್ರಾ ಮಹೋತ್ಸವ ಮಾ. 4 ಮತ್ತು 5ರಂದು ನೆರವೇರಲಿದೆ. ಮಾ. 4ರಂದು ಬೆಳಗ್ಗೆ 6 ಗಂಟೆಗೆ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಮಹಾರುದ್ರಾಭಿಷೇಕ, 11 ಗಂಟೆಗೆ ಲಿಂ. ಕುಮಾರೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರದಲ್ಲಿ ಕ್ಯಾನ್ಸರ್, ಮೂತ್ರಪಿಂಡ, ಪಾರ್ಶ್ವವಾಯು, ಅಸ್ತಮಾ ಮತ್ತು ಮೂಲವ್ಯಾಧಿ ರೋಗಿಗಳಿಗೆ ನೆಲ್ಲೂರಿನ ಡಾ ಮಹಾಂತೇಶ ಹಿರೇಮಠ ಮತ್ತು ಡಾ ಬಸವರಾಜ ಹಿರೇಮಠರಿಂದ ಔಷಧಿ ವಿತರಣೆ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಕುಮಾರೇಶ್ವರ ಸಂಸ್ಮರಣಾ ಸಭೆಯಲ್ಲಿ ನಾಡಿನ ವಿದ್ವಾಂಸರು, ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ. ಸಾನ್ನಿಧ್ಯವನ್ನು ಸಿದ್ದೇಶ್ವರ ಶ್ರೀಗಳು ವಹಿಸುವರು. ಮಾಜಿ ಶಾಸಕ ಜಿ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷ ಜಗದೀಶ ಕರಡಿ ಆಗಮಿಸುವರು. ಡಾ ಎಸ್.ಜಿ. ಗುರಿಕಾರ ಮತ್ತು ಅಶೋಕ ಬೇವಿನಕಟ್ಟಿ ಅವರಿಗೆ ಶ್ರೀರಕ್ಷೆ ಪ್ರದಾನ ನಡೆಯಲಿದೆ. ಮಾ. 5ರಂದು ಬೆಳಗ್ಗೆ 9 ಗಂಟೆಗೆ ಸಿದ್ದೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 5ಕ್ಕೆ ಕುಮಾರೇಶ್ವರ ಮಹಾರಥೋತ್ಸವ. 7 ಗಂಟೆಗೆ ಧರ್ಮೋತ್ತೇಜಕ ಸಭೆ. ಸಾನ್ನಿಧ್ಯವನ್ನು ಹಾಲಕೆರೆಯ ಅಭಿನವ ಅನ್ನದಾನ ಶ್ರೀಗಳು ವಹಿಸುವರು. ಸಚಿವ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರೊ ಎಸ್.ವಿ. ಸಂಕನೂರ, ಬಿ.ಎಂ. ಸಜ್ಜನರ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಪಾಲ್ಗೊಳ್ಳಲಿದ್ದಾರೆಂದು ಶಿವಬಸವ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

