ಗದಗ

ಇಂದು ಜಾತ್ರಾ ಮಹೋತ್ಸವ

Published On :

ಲಕ್ಷ್ಮೇಶ್ವರ:  ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ  ಮಾ. 10,11 ರಂದು ಪ್ರತಿ ವರ್ಷದಂತೆ ಈ ವರ್ಷವೂ ಬಾಳೇಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಹಾಗೂ ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುತ್ತವೆ. ಭಾನುವಾರ ಬೆಳಗ್ಗೆ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಗದ್ದುಗೆಗೆ ಮಹಾ ರುದ್ರಾಭಿಷೇಕ, 9 ಘಂಟೆಗೆ ಶಿವಧೀಕ್ಷೆ ಅಯ್ಯಾಚಾರ ನಡೆಯುವುದು. ಸಂಜೆ ಜಗದ್ಗುರು ಪಂಡಿತಾರಾಧ್ಯ ಹಾಗೂ ವಿಶ್ವಾರಾಧ್ಯರ ಜಯಂತಿ ನಿಮಿತ್ತ ರಥೋತ್ಸವ ಜರುಗುತ್ತದೆ. ರಾತ್ರಿ ಗಂಗಾಧರ ಜಗದ್ಗುರುಗಳ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆಯ ವಿಶೇಷ ಪೂಜೆ ತೀರ್ಥ ಪ್ರಸಾದ ಜರುಗುವುದು.
ಸೋಮವಾರ ಬೆಳಗ್ಗೆ ಅಮಾವಾಸ್ಯೆ ಪೂಜೆ ನಂತರ 12 ಘಂಟೆಗೆ ಸುಲ್ತಾನಪುರದ ಭಕ್ತ ಮಂಡಳಿಯವರು ತಮ್ಮ ಗ್ರಾಮದಿಂದ ವಿಶ್ವಶಕ್ತಿಯ ಭಾವಚಿತ್ರದ ಮೆರವಣಿಗೆಯನ್ನು ಮುಕ್ತಿಮಂದಿರದವರೆಗೂ ಸಂಪ್ರದಾಯದಂತೆ ನೆರವೇರಿಸುವರು. ಮ. 3 ಗಂಟೆಗೆ ಗಂಗಾಧರ ಜಗದ್ಗುರುಗಳ ಮೂರ್ತಿಯ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. ನಂತರ ಕಡುಬಿನ ಕಾಳಗ ಜರುಗುವುದು. ಸಂಜೆ 5.30ಕ್ಕೆ ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಸಮಾರಂಭ ಜರುಗುವುದು. ಅಧ್ಯಕ್ಷತೆಯನ್ನು ಕಲಾದಗಿಯ ಚಂದ್ರಶೇಖರ ಶ್ರೀ ವಹಿಸುವರು. ವಿವಿಧ ಮಠಾಧೀಶರು, ರಾಜಕೀಯ ಧುರೀಣರು, ವಿದ್ವಾಂಸರು ಆಗಮಿಸುವರು. ರಾತ್ರಿ ಉಪನ್ಯಾಸ, ಸಂಗೀತ, ಸನ್ಮಾನ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಚಿದಾನಂದಪ್ಪ ಉಳ್ಳಾಗಡ್ಡಿ ನಿಧನ
ಮುಂಡರಗಿ:  ಪಟ್ಟಣದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಚಿದಾನಂದಪ್ಪ ತಿಪ್ಪಣ್ಣ ಉಳ್ಳಾಗಡ್ಡಿ (70) ಶುಕ್ರವಾರ ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು.
ಸಂತಾಪ: ಜ.ಡಾ. ತೋಂಟದ ಸಿದ್ದಲಿಂಗ ಶ್ರೀಗಳು, ಜ.ಡಾ. ಅನ್ನದಾನೀಶ್ವರ ಶ್ರೀಗಳು, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಡಿ.ಜಿ. ಹಿರೇಮಠ, ಸಿ.ಎಸ್. ಅರಸನಾಳ, ಅಶೋಕ ಹಂದ್ರಾಳ, ನಿಂಗು ಸೊಲಗಿ, ಮಂಜುನಾಥ ಇಟಗಿ, ಶಿವು ನವಲಗುಂದ, ಆನಂದ ರಾಮೇನಳ್ಳಿ, ದೇವಪ್ಪ ಇಟಗಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.