ಸ್ಪರ್ಧಾ ಮನೋಭಾವ ಬೆಳೆಸಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 9
ಶಿಕ್ಷಕರು ಆಧುನಿಕ ಅಧ್ಯಯನದ ಜ್ಞಾನ ಸಂಪಾದಿಸಿ, ಮಕ್ಕಳಿಗೆ ಬೋಧಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡುವಂತೆ ಮಾರ್ಗದರ್ಶನ ನೀಡುವ ಗುರುತರ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಮೈಸೂರು ಸಂಸ್ಥಾನ ಮಠದ ಜ. ವಿಜಯಮಹಾಂತ ಶ್ರೀ ಹೇಳಿದರು.
ಈಚೆಗೆ ಅವರು ಸ್ಥಳೀಯ ವಿಜಯಮಹಾಂತೇಶ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆದ ಪಠ್ಯಾಧಾರಿತ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಶಿಕ್ಷಣ ಅವಶ್ಯ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಮಹತ್ವ ತಿಳಿಸಬೇಕು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಓದಿನ ಕಡೆಗೆ ಹೆಚ್ಚು ತೊಡಗಿಸಿಕೊಂಡು, ಬೌದ್ಧಿಕಮಟ್ಟ ವೃದ್ಧಿಸಿಕೊಂಡು ರಾಷ್ಟ್ರದ ಧೀಮಂತ ನಾಯಕತ್ವದ ಗುಣ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಉಪನ್ಯಾಸಕ ಎಸ್.ಎಸ್. ನರೇಗಲ್ಲ ಮಾತನಾಡಿ, ಆಧುನಿಕ ಜನತ್ತಿನಲ್ಲಿ ವಿಜ್ಞಾನದ ಮಹತ್ವ ಹಿರಿದಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಂಡು ಕಠಿಣ ಪರಿಶ್ರಮದ ಮೂಲಕ ತಮ್ಮಲ್ಲಿನ ಪ್ರತಿಭಾ ಕೌಶಲ್ಯ ಪ್ರದರ್ಶಿಸಿ, ವಿಜ್ಞಾನದ ಪ್ರಗತಿಗೆ ಶ್ರಮಿಸಿ ವಿಶ್ವಕ್ಕೆ ಮಾದರಿಯಾಗುವಂತ ಪ್ರಜೆಯಾಗಿ ಎಂದರು. ಕೆಜಿಎಂಎಸ್ ಮೇಲುಸ್ತುವಾರಿ ಅಧ್ಯಕ್ಷ ಟಿ.ಡಿ. ಶಿಂಗ್ರಿ, ಅಗಸ್ತ್ಯ ಫೌಂಡೇಶನ್ನ ಮುಖ್ಯಸ್ಥ ಸಂತೋಷ ಬಿ.ಎಸ್.ಎಸ್ ಗ್ಯಾನಯ್ಯನಮಠ ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಹಳ್ಳದ ಸ್ವಾಗತಿಸಿದರು. ಬಿ.ಎಸ್. ಬಸನಗೌಡರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

