ಶಾಸನಗಳು ಸಾಮಾಜಿಕ ಮೌಲ್ಯ ಬಿಂಬಿಸುತ್ತವೆ
ಹುಲಕೋಟಿ: ಶಾಸನಗಳು ಇತಿಹಾಸವನ್ನು ಕಟ್ಟುವುದರ ಜತೆಗೆ ಜೀವನ ಮೌಲ್ಯಗಳನ್ನು ಯಥಾವತ್ತಾಗಿ ಬಿಂಬಿಸುವ ಸಾಧನಗಳಾಗಿವೆ ಎಂದು ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಪದವಿ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ. ಎಂ.ಎಸ್. ನರೇಗಲ್ಲ ಹೇಳಿದರು.
ಅವರು ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಲಕೋಟಿಯಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ದ ಅಡಿಯಲ್ಲಿ ಶಾಸನಗಳಲ್ಲಿ ವೀರತ್ವ ಕುರಿತು ಉಪನ್ಯಾಸ ನೀಡಿದರು. ಶಾಸನಗಳು ಐತಿಹಾಸಿಕ ಸತ್ಯ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಮತ್ತು ವೀರ, ತ್ಯಾಗ, ಬಲಿದಾನ, ದಾನ, ಪರಧರ್ಮ ಸಹಿಷ್ಣುತೆ, ಮೊದಲಾದ ಮೌಲ್ಯಗಳನ್ನು ಸಾರುತ್ತವೆ ಎಂದರು.
ಪ್ರಾಚಾರ್ಯ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಾಪಕ ಪ್ರೊ. ಅಣ್ಣಪ್ಪ ರೊಟ್ಟಿಗವಾಡ ಉಪನ್ಯಾಸ ನೀಡಿದರು. ವಾಣಿಜ್ಯಶಾಸ್ತ್ರ ಅಧ್ಯಾಪಕ ಪ್ರೊ. ಆನಿ ಮಾತನಾಡಿದರು.
ಪ್ರೊ. ಸವಿತಾ ಪಾಟೀಲ ಮಾತನಾಡಿ, ಸಂವಾದಕ್ಕೆ ತೆರೆ ಎಳೆದರು. ಉಪನ್ಯಾಸದಲ್ಲಿ ಪ್ರಾಧ್ಯಾಪಕ ಪ್ರೊ. ಸವಿತಾ ಪಾಟೀಲ, ಪ್ರೊ. ರಂಜನಾ ಭಂಡಾರೆ, ಬಿ.ವೈ. ಆಲೂರ, ಪ್ರೊ. ನವೀನ ತಿರ್ಲಾಪುರ, ಪ್ರೊ. ಎಂ. ಶ್ವೇತಾ, ಪ್ರೊ. ಲೀಲಾ ಹರ್ಲಾಪುರ, ಪ್ರೊ. ಮಲ್ಲಿಕಾರ್ಜುನ ಅಂಗಡಿ, ಪ್ರೊ. ವಸಂತಾ, ಪ್ರೊ. ವಿಜಯಲಕ್ಷ್ಮಿ ಬೆಳ್ಳಿಕಟ್ಟಿ ಪಾಲ್ಗೊಂಡಿದ್ದರು. ಕಾಲೇಜಿನ ಸರ್ವ ವಿದ್ಯಾರ್ಥಿಗಳು ಸಂವಾದದಲ್ಲಿ ಉತ್ಸಾಹದಿಂದ ಭಾಗವಹಿಸಿ ಉಪನ್ಯಾಸಕ್ಕೆ ಕಳೆ ತಂದರು.
ಬಸವರಾಜ ಗೂರನವರ ಸ್ವಾಗತಿಸಿದರು. ಚನ್ನಮ್ಮ ಹೂಗಾರ ನಿರೂಪಿಸಿದರು. ಭಾರತಿ ಯರಗುಪ್ಪಿ ವಂದಿಸಿದರು.
ಮಕ್ಕಳಿಗೆ ಪೂರಕ ಶಿಕ್ಷಣ ಅವಶ್ಯ
ಪ್ರೌಢಶಾಲೆ ವಾರ್ಷಿಕೋತ್ಸವದಲ್ಲಿ ತೋಂಟದಾರ್ಯ ಶ್ರೀ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 10
ಶಿಕ್ಷಣವೆನ್ನುವುದು ನಮ್ಮನ್ನು ಅತ್ಯಂತ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಮಕ್ಕಳಿಗೂ ಪೂರಕ ಶಿಕ್ಷಣವನ್ನು ನೀಡುವುದು ಅತಿ ಅವಶ್ಯವಾಗಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಶನಿವಾರ ರಾತ್ರಿ ಮುಂಡರಗಿ ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಮಿತಿಯ ಜ. ತೋಂಟದಾರ್ಯ ಪ್ರೌಢಶಾಲೆಯ 2012-13ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಬೆಳ್ಳಿ ಹಬ್ಬದ ಅಂಗವಾಗಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಿಕ್ಷಕ ದಿ. ಎಂ.ಬಿ.ಪೂಜಾರ ಅವರ ಪುತ್ಥಳಿ ಅನಾವರಣ ನೆರವೇರಿಸಿ ಮಾತನಾಡಿದರು.
ಮಕ್ಕಳ ಭಾವನೆಗಳಿಗೆ ಇಂಬುಕೊಡುವ ಕೆಲಸವನ್ನು ದಿ. ಎಂ.ಬಿ. ಪೂಜಾರ ಗುರುಗಳು ಮಾಡಿದ್ದಾರೆ. ಇಂದಿನ ಮಕ್ಕಳು ಪೂಜಾರ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿಗೆ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಧೈರ್ಯದಿಂದ ಸ್ವ ರಕ್ಷಣೆ ಮಾಡಿಕೊಂಡು ಧೈರ್ಯದಿಂದ ಮುನ್ನುಗ್ಗಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ್ದ ಜ. ತೋಂಟದಾರ್ಯ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಪ್ರಾ. ಎಸ್.ಎಸ್. ಹರ್ಲಾಪುರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಿ.ಜಿ. ಹಿರೇಮಠ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನೂತನ ಕಟ್ಟಡಕ್ಕೆ ರು. 1 ಲಕ್ಷ ದಾನ ಮಾಡಿದ ನಿವೃತ್ತ ಶಿಕ್ಷಕಿ ಎಸ್.ಪಿ. ಮೇಗಲಮನಿಯವರನ್ನು ಶ್ರೀಗಳು ಸನ್ಮಾನಿಸಿದರು.
ಸಿ.ಬಿ. ಚೆನ್ನಳ್ಳಿ, ಸಿ.ಡಿ. ಪಾಟೀಲ, ಕೆ.ಆರ್. ಈಳಿಗೇರ, ಬಸವಂತಪ್ಪ ಮುದ್ದಿ, ಎ.ಆರ್. ಬಂಡೆಣ್ಣವರ, ಎನ್.ಎಸ್. ಶೇಡದ, ಬಿ.ಎಸ್. ಸೂಡಿ, ಪಿ.ಜಿ. ಹಿರೇಮಠ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಕೆ.ಎ. ಹಿರೇಮಠ ಸ್ವಾಗತಿಸಿದರು. ಎನ್.ಎಸ್. ಅಲ್ಲಿಪುರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

