ಗದಗ

ಪಕ್ಷದ ಕಚೇರಿಯಲ್ಲ, ಪ್ರವಾಸಿ ಮಂದಿರ ಉದ್ಘಾಟನೆ: ಜಗಲಿ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಮಾ. 17
ಇಬ್ಬರು ಮಾಜಿ ಶಾಸಕರು ಹಾಗೂ ಪಟ್ಟಣದ ಗಣ್ಯರ ಗಮನಕ್ಕೆ ತಾರದೆ ತರಾತುರಿಯಲ್ಲಿ ಭಾನುವಾರ ಪಟ್ಟಣದ ಪ್ರವಾಸಿ ಮಂದಿರ ಉದ್ಘಾಟಿಸುವ ಅಗತ್ಯವೇನಿತ್ತು ಎಂದು ತಾಪಂ ಸದಸ್ಯ ಚೆನ್ನಪ್ಪ ಜಗಲಿ ಪ್ರಶ್ನಿಸಿದ್ದಾರೆ.
ಪ್ರವಾಸಿ ಮಂದಿರ ಉದ್ಘಾಟನೆ ವೇಳೆ ಉಂಟಾದ ಗೊಂದಲದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಉದ್ಧಟತನದ ವರ್ತನೆ ಬಿಡದಿದ್ದಲ್ಲಿ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ. ತಮ್ಮ ಹಿಂಬಾಲಕರನ್ನು ಮಾತ್ರ ಕರೆದು ಪ್ರವಾಸಿ ಮಂದಿರ ಉದ್ಘಾಟನೆ ಮಾಡಲು ಅದೇನು ಬಿಜೆಪಿ ಕಚೇರಿಯೇ ಎಂದು ಪ್ರಶ್ನಿಸಿದರು.
ಶಾಸಕರು ಎಸ್ಟಿಮೇಟ್ ಹಾಗೂ ವರ್ಕ್ ಆರ್ಡರ್ ಇಲ್ಲದೆ ತಾಲೂಕಿನ ಹಲವು ಕಾಮಗಾರಿಗಳನ್ನು ಮಾಡಿಸುತ್ತಿರುವುದು ಸರಿಯಲ್ಲ. ಕದ್ದು ಮುಚ್ಚಿ ಪ್ರವಾಸಿ ಮಂದಿರದ ಉದ್ಘಾಟನೆ ಮಾಡಿದ ಕ್ರಮ ಸರಿಯಲ್ಲ. ಪ್ರವಾಸಿ ಮಂದಿರದ ಉದ್ಘಾಟನೆಯ ಅಡಿಗಲ್ಲಿನಲ್ಲಿ ಹೆಸರಿರುವ ಬಹುತೇಕರಿಗೆ ಉದ್ಘಾಟನೆಯ ವಿಷಯ ಗೊತ್ತಿಲ್ಲ. ಹಾಗಾಗಿ ಬಹುತೇಕರು ಕಾರ್ಯಕ್ರಮಕ್ಕೆ ಬಂದಿಲ್ಲ. ಅಲ್ಲದೆ ಲಕ್ಷ್ಮೇಶ್ವರದ ಬಗ್ಗೆ ಶಾಸಕರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಶಾಸಕರ ಬೆಂಬಲಿಗರು ಬೇರೆ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ದಾದಾಪೀರ ಮುಚ್ಚಾಲೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.