ಗದಗ

ಬೆಟಗೇರಿ ವೆಂಕಟೇಶ್ವರ ದೇವಸ್ಥಾನಕ್ಕೆ ಕಳಸಾರೋಹಣ

Published On :

ಗದಗ: ಯುವಕರು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಸಚಿನ್ ಪಾಟೀಲ ಹೇಳಿದರು.
ಶನಿವಾರ ಬೆಟಗೇರಿಯ ರಂಗಾವಧೂತ ನಗರದ ವೆಂಕಟೇಶ್ವರ ಟ್ರಸ್ಟ್ ಕಮಿಟಿ ಆಯೋಜಿಸಿದ್ದ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಯುವಕರು ಸಂಘಟನಾತ್ಮಕ ಜಾಗೃತಿ ಹೊಂದಿ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ರಾಮಣ್ಣ ರಾಂಪುರ ಮಾತನಾಡಿದರು. ನಗರಸಭೆ ಸದಸ್ಯ ಶ್ರೀನಿವಾಸ ಕರಿ ಮಾತನಾಡಿ, ಸಮಾಜದ ರಚನಾತ್ಮಕ ಕಾರ್ಯಗಳಿಗೆ ನಗರಸಭೆ ಸೌಲಭ್ಯ ಸಹಾಯ ಸಹಕಾರ ನೀಡುವ ಭರವಸೆ ನೀಡಿದರು. ಬೆಟಗೇರಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೆಂಕಟೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜು ಗೌಡರ ಅಧ್ಯಕ್ಷತೆ ವಹಿಸಿದ್ದರು. ಅನಂತ ದೇಶಪಾಂಡೆ, ಶ್ರೀನಿವಾಸ, ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಜೋತಿಕುಮಾರ ರಾಯಚೂರ, ಹನುಮಂತ ರಾಂಪುರ, ಗಿರಿಧರ ರಾಂಪುರ, ರಾಮಚಂದ್ರ ರಾಂಪುರ, ವೆಂಕಟೇಶ ಬಳ್ಳಾರಿ, ಅಣ್ಣಪ್ಪ ರಾಂಪುರ, ಮಂಜುನಾಥ ಗೌಡರ, ಮಾರುತಿ ರಾಂಪುರ, ಮಲ್ಲೇಶಪ್ಪ ರಾಂಪುರ, ಕುಮಾರ ಗೌಡರ, ರಾಘು ಗೌಡರ, ರಾಘು ವಿ. ರಾಂಪುರ, ನಾಗರಾಜ ರಾಂಪುರ  ಇದ್ದರು. ನಾಗರಾಜ ಚನ್ನಪ್ಪಗೌಡರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.