ಉತ್ತಮ ಆರೋಗ್ಯ ಹೊಂದಲು ಶೌಚಾಲಯ ನಿರ್ಮಿಸಿಕೊಳ್ಳಿ
ಗದಗ: ಆರೋಗ್ಯ ಹಾಗೂ ಸ್ವಚ್ಛತೆ ದೃಷ್ಟಿಯಿಂದ ಎಲ್ಲ ಕುಟುಂಬಗಳು ಶೌಚಾಲಯ ಹೊಂದಿ, ಅವುಗಳನ್ನು ಬಳಸಬೇಕೆಂದು ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ ಹೇಳಿದರು.
ಶುಕ್ರವಾರ ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಪಂ ವತಿಯಿಂದ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಸ್ವಚ್ಚತಾ ಉತ್ಸವ ನಿಮಿತ್ತ ಜರುಗಿದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಗ್ರಾಮದ ಎಲ್ಲ ಕುಟುಂಬಗಳು ಶೌಚಾಲಯ ಹೊಂದಲು ಯೋಗ್ಯ ಕ್ರಮ ಕೈಗೊಳ್ಳಲಾಗುವುದು. ಬಯಲು ಶೌಚದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಸುರೇಶ ಕಪ್ಪತ್ತನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ: ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಸ್ವಚ್ಚತಾ ಉತ್ಸವದ ನಿಮಿತ್ತ ಗ್ರಾಪಂ ಮಟ್ಟದಲ್ಲಿ ಜರುಗಿದ ಚರ್ಚಾ ಸ್ಪರ್ಧೆಯಲ್ಲಿ ಗ್ರಾಮದ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪಾಪನಾಶಿ, ದೊಡ್ಡತಾಂಡೆಯ ಶಾಲೆ ಸೇರಿದಂತೆ 20ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ, ಬಹುಮಾನ ಪಡೆದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾವೇರಿ ಬ್ರಹ್ಮಾನಂದ ಹುಡೇದ ಪ್ರಥಮ, ಸುನೀಲ ಕುರಡಗಿ ದ್ವಿತೀಯ, ಯಶೋಧಾ ಕುರಡಗಿ ತೃತೀಯ, ಪ್ರೌಢಶಾಲೆ ವಿಭಾಗದಲ್ಲಿ ಆಶಾ ಹರಿವಾಣ ಪ್ರಥಮ, ಹಾಲವ್ವ ನಾಯ್ಕರ ದ್ವಿತೀಯ, ಮಂಜುನಾಥ ಪುರದ ತೃತೀಯ ಸ್ಥಾನ ಪಡೆದರು. ಪಿಡಿಒ ಅಶ್ವಿನಿ ಕುರಡಗಿ, ಗ್ರಾಪಂ ಉಪಾಧ್ಯಕ್ಷೆ ನಾಗವ್ವ ಹುಡೇದ, ಗ್ರಾಪಂ ಸದಸ್ಯ ಮಲ್ಲಪ್ಪ ಹೊಸಳ್ಳಿ, ಮಾಲಾ ಮೇವುಂಡಿ, ಜಿ.ಎಸ್. ಸರಖಾಜಿ, ಅರವಿಂದ್ರಪ್ಪ ಚಿಕ್ರಣ್ಣವರ, ಎಸ್.ಎಚ್.ದಂಡಿಗದಾಸರ, ಎಲ್.ಎಚ್. ಕಟ್ಟಿಮನಿ, ಎಸ್.ಎಂ. ಕಿತ್ತೂರ, ವೀರಣ್ಣ ಅಂಗಡಿ, ಬಿ.ಎಸ್. ಭಜಂತ್ರಿ, ಬಿ.ಎಚ್. ಚಕ್ರಣ್ಣವರ, ಎಸ್.ಎಂ. ಭಿಂಗಿ, ಪಿ.ಎಂ. ಲಿಂಗನಾಯ್ಕರ, ಎಂ.ಎಫ್. ಬಿನ್ನಾಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

