ಜಿಪಂ ಉಪಾಧ್ಯಕ್ಷರಾಗಿ ರಮೇಶ ಮುಂದಿನಮನಿ ಮರು ಆಯ್ಕೆ
ಗದಗ: ಸ್ಥಳೀಯ ಜಿಪಂ ಉಪಾಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ರಮೇಶ ಮುಂದಿನಮನಿ ಮರು ಆಯ್ಕೆಯಾಗಿದ್ದಾರೆ. ತಮ್ಮ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ರಮೇಶ ಅವಿರೋಧ ಆಯ್ಕೆಯಾದರು. ಬಿಜೆಪಿಯ 12, ಕಾಂಗ್ರೆಸ್ನ 6 ಸೇರಿದಂತೆ ಒಟ್ಟು 18 ಸದಸ್ಯ ಬಲದ ಗದಗ ಜಿಪಂನಲ್ಲಿ ಎರಡನೇ ಅವಧಿಯಲ್ಲಿ ಸತತ ಎರಡು ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಮೇಶ ಮುಂದಿನಮನಿ ಮೊದಲಿಗರಾದರು. ಎರಡನೇ ಅವಧಿಯ 20 ತಿಂಗಳ ಅವಧಿಗೆ ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿತ್ತು. ಬಿಜೆಪಿ ಮುಖಂಡರ ಒಪ್ಪದದಂತೆ 10 ತಿಂಗಳಿನ 2 ಅವಧಿ ರಚಿಸಲಾಗಿತ್ತು. 10 ತಿಂಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ರಮೇಶ ಮುಂದಿನಮನಿ, ಇನ್ನುಳಿದ 10 ತಿಂಗಳಿಗೂ ಅವರೇ ಉಪಾಧ್ಯಕ್ಷರಾಗಿ ಮರು ಆಯ್ಕೆಯಾದರು. ಎಸ್ಸಿಗೆ ಮೀಸಲಿದ್ದ ಶಿಗ್ಲಿ ಜಿಪಂ ಕ್ಷೇತ್ರಕ್ಕೆ ಬಿಜೆಪಿ ಸದಸ್ಯೆ ನಿರ್ಮಲಾ ಬರದೂರ ಬಾಕಿ 10 ತಿಂಗಳ ಅವಧಿಗೆ ಉಪಾಧ್ಯಕ್ಷರಾಗಲಿದ್ದಾರೆಂಬ ನಿರೀಕ್ಷೆ ರಾಜಕೀಯ ಬೆಳವಣಿಯಿಂದ ಹುಸಿಯಾಯಿತು. ಜಿಲ್ಲಾಡಳಿತ ಭವನದ ಜಿಪಂ ಸಭಾಭವನದಲ್ಲಿ ಚುನಾವಣೆ ಪ್ರಕ್ರಿಯೆ ಬಳಿಕ ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಅವರು ರಮೇಶ ಮುಂದಿನಮನಿ ಉಪಾಧ್ಯಕ್ಷರಾಗಿದ್ದಾರೆಂದು ಘೋಷಿಸಿದರು. ಬಿಜೆಪಿಯ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಸದಸ್ಯೆ ನಿರ್ಮಲಾ ಬರದೂರ ಗೈರು ಹಾಜರಾತಿ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಹೊರಗೆಡವಿತು. ಕಾಂಗ್ರೆಸ್ ಸದಸ್ಯ ಆರ್.ಬಿ. ಬಸವರಡ್ಡೇರ ಭಾಗವಹಿಸಿದ್ದು ವಿಶೇಷವಾಗಿತ್ತು. ಡಿಸಿ ಎನ್.ಎಸ್. ಪ್ರಸನ್ನಕುಮಾರ, ಸಿಇಒ ವೀರಣ್ಣ ತುರಮರಿ, ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಬೀರಪ್ಪ ಬಂಡಿ, ಹೇಮಗಿರೀಶ ಹಾವಿನಾಳ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

