ಗದಗ

ಸಂಗೀತಕ್ಕೆ ಔಷಧಿ ಸಮಾನ ಗುಣವಿದೆ: ಶ್ರೀಗಳು

Published On :

ಲಕ್ಷ್ಮೇಶ್ವರ: ಸಂಗೀತಕ್ಕೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಸಂಗೀತ ಬ್ರಹ್ಮ ವಿದ್ಯೆಗೆ ಸಮಾನವಾದ ವಿದ್ಯೆಯಾಗಿದೆ ಎಂದು ಜಮಖಂಡಿಯ ಓಲೆಮಠದ ಚನ್ನಬಸವ ಶ್ರೀಗಳು ಹೇಳಿದರು. ಸಮೀಪದ ಬಾಲೆಹೊಸೂರಿನ ದಿಂಗಾಲೇಶ್ವರಮಠ ಹಾಗೂ ದಾಸೋಹ ಮನೆಯ ಉದ್ಘಾಟನೆಯ ನಿಮಿತ್ತವಾಗಿ ಹಮ್ಮಿಕೊಂಡಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶರಣ ರಾಗದ ಸಂಕಣ್ಣನ ಕುರಿತು ಮಾತನಾಡಿ, ಅಪಾರವಾದ ಸಂಗೀತ ಜ್ಞಾನ ಹೊಂದಿದ್ದ ರಾಗದ ಸಂಕಣ್ಣ ನಿಗರ್ವಿಯಾಗಿದ್ದ. ತನ್ನ ರಾಗಕ್ಕೆ ಮೆಚ್ಚಿ ನೀಡುವ ಹಣ ಮತ್ತು ಕಾಣಿಕೆಯನ್ನು ಶರಣ ದಾಸೋಹಕ್ಕೆ ನೀಡುತ್ತಿದ್ದರು ಎಂದರು. ಸದಾಶಿವಪೇಟೆಯ ಗದಗೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು.


ಬಸವ ಜಯಂತಿ ಶತಮಾನೋತ್ಸವ: ಪೂರ್ವಭಾವಿ ಸಭೆ


ನರೇಗಲ್ಲ: ಸ್ಥಳೀಯ ಬಸವೇಶ್ವರ ಎಂಜಿನಿಯರಿಂಗ್ ಇಂಡಸ್ಟ್ರಿಯಲ್ಲಿ ಈಚೆಗೆ ಬಸವ ಜಯಂತಿ ಶತಮಾನೋತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಮಾತನಾಡಿ, ಮೇ 2ರಂದು ನಡೆವ ಬಸವಣ್ಣನವರ ಜಯಂತಿ ಶತಮಾನೋತ್ಸವವನ್ನು ಊರಿನ ಪ್ರತಿಯೊಬ್ಬ ಸಮಾಜದ ಗುರುಹಿರಿಯರು ಕೈಜೋಡಿಸಿ ವಿಜೃಂಭಣೆಯಿಂದ ನಡೆಸೋಣ ಎಂದರು. ಸಭೆ ಸಂಚಾಲಕ ಸಿ.ಜಿ. ಹುಡೆದಗಡ್ಡಿ ಮಾತನಾಡಿದರು. ಜಿ.ವಿ. ಬೆಲ್ಲದ ಮಾತನಾಡಿದರು. ಉಮೇಶ ಸಂಗನಾಳಮಠ, ಗಂಗಾಧರ ಕೊಟಗಿ, ಅಣ್ಣಪ್ಪ ಜೊಳದ, ಬಸನಗೌಡ ಕಲ್ಲೂರ, ಪಡಿಯಪ್ಪ ಮಾಸ್ತರ, ಕಲ್ಲಪ್ಪ ಕುಷ್ಟಗಿ, ಶಿದ್ದಪ್ಪ ರಾಗಿ, ಸಂಗಪ್ಪ ದಿಂಡೂರ, ಪ್ರಭು ನಾಡಗೌಡ್ರ ಹಾಗೂ ಈಶ್ವರ ಬೆಟಗೇರಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.