ಬೆಲೆ ಏರಿಕೆ ಖಂಡಿಸಿ ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜ. 9
ಅಡುಗೆ ಅನಿಲ, ಅಟೋ ಗ್ಯಾಸ್ ದರ ಹೆಚ್ಚಳಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಗದಗ ಶಹರ ಬಿಜೆಪಿಯ ಮಹಿಳಾ ಮೋರ್ಚಾದಿಂದ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಮಧ್ಯದಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಜರುಗಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಶಹರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ, ಕೇಂದ್ರ ಸರ್ಕಾರ ಮುನ್ಸೂಚನೆ ನೀಡದೇ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೊಳ್ಳುವಂತೆ ಅಟೋ ಗ್ಯಾಸ್ ದರವನ್ನು 11.10 ಏರಿಕೆ ಮಾಡಿದೆ. ಮತ್ತೊಂದಡೆ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಕೂಡ ದುಬಾರಿಯಾಗಿದ್ದು, ಪ್ರತಿ ಸಿಲಿಂಡರ್ ರು. 220 ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದ ಅಟೋ ಗ್ಯಾಸ್ ಬೆಲೆ ಏರಿಕೆಯಿಂದಾಗಿ ಅಟೋ ಚಾಲಕರು ನಷ್ಟದಲ್ಲಿ ಅಟೋ ಓಡಿಸುವ ಸ್ಥಿತಿ ಎದುರಾಗಿದೆ.
ಇದುವರೆಗೂ ತಮ್ಮ ಹೊಟ್ಟೆಪಾಡಿಗಾಗಿ ಅಲ್ಪ ಸ್ವಲ್ಪ ಲಾಭ ಗಳಿಸಿ ಜೀವನ ಸಾಗಿಸುತ್ತಿದ್ದ ಅಟೋ ಚಾಲಕರು ಸಂಕಷ್ಟ ಅನಭವಿಸುವಂತಾಗಿದೆ. ಇನ್ಮುಂದೆ ಯಾವುದೇ ಅಟೋ ಚಾಲಕರು ನೆಮ್ಮದಿಯಿಂದ ಜೀವನ ಸಾಗಿಸುವುದು ದುಸ್ತರವಾಗುವ ಮೂಲಕ ನಷ್ಟದತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ. ಅದಕ್ಕಾಗಿ ಅಟೋ ಚಾಲಕರು ಹಾಗೂ ಮಾಲೀಕರು ದಂಗೆ ಎದ್ದು ಶಾಂತತೆ ಕದಡುವುದಕ್ಕಿಂತ ಮೊದಲು ಕೇಂದ್ರ ಸರ್ಕಾರ ಎಚ್ಚೆತ್ತು ಬೆಲೆ ಏರಿಕೆ ದರ ಹಿಂಪಡೆಯಬೇಕು ಎಂದರು.
ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಜರುಗಿಸಲಾಯಿತು. ಈ ಸಂದರ್ಭ ಶಾರದಾ ಸಜ್ಜನರ, ಸರೋಜಾ ಸಿರಿ, ಜಯಶ್ರೀ ಉಗಲಾಟದ, ಕಮಲಾಬಾಯಿ ಪೂಜಾರ, ಪದ್ಮಾ ಯುಗಪಲ್ಲಿ, ಕಮಲಾಕ್ಷಿ ಗೊಂದಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಅರವಿಂದ ಹುಲ್ಲೂರ, ಮೋಹನ ಮಾಳಶೆಟ್ಟಿ, ಶ್ರೀಕಾಂತ ಖಟನಟೆ, ಮಾಧವ ಗಣಾಚಾರಿ, ಶ್ರೀನಿವಾಸ ಹುಬ್ಬಳ್ಳಿ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಈಶಣ್ಣ ಮುನವಳ್ಳಿ, ಶ್ರೀನಿವಾಸ ಭಾಂಡಗೆ, ಸುಧೀರ್ ಕಾಟಿಗರ, ಹನುಮಂತಪ್ಪ ಅಳವುಂಡಿ, ವಿನಾಯಕ ಹಬೀಬ, ಗಂಗಾಧರ ಹಬೀಬ, ನಂದೀಶ ಮಠದ, ಶಹರ ಪ್ರಧಾನ ಕಾರ್ಯದರ್ಶಿ ಸಿದ್ರಾಮೇಶ ಹಿರೇಮಠ, ಶಹರ ಉಪಾಧ್ಯಕ್ಷ ಸುರೇಶ ಚಿತ್ತರಗಿ, ಬಸಯ್ಯ ಹಿರೇಮಠ, ಶರಣು ಮುಧೋಳ, ಪ್ರೀತಮ ಹಿರೇಮಠ, ನಾಗರಾಜ ಖೋಡೆ, ಕುಮಾರ ಬನ್ನಿದಿನಿ, ಪವನ ಬಾಕಳೆ, ದತ್ತು ಬೆಳದಡಿ, ವಿನೋದ ಬ್ಯಾಡಗಿ, ಸಂತೋಷ ಕಬಾಡರ, ನಂದೀಶ ಮಠದ, ಸೋಮು ಧರ್ಮದಾಸ, ಅಜಯ ಮುನವಳ್ಳಿ, ರಾಜು ಗುಡಿಸಾಗರ, ಪರಶುರಾಮ ಮಿಸ್ಕಿನ್, ಕಿರಣ ಕಲಾಲ, ವೆಂಕಟೇಶ ಹಬೀಬ, ಕಿಶನ ಹಬೀಬ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

