ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಎಸ್ಪಿಗೆ ಮನವಿ
ಗದಗ: ಫೆಬ್ರವರಿ ಮೊದಲ ವಾರದಲ್ಲಿ ಸರ್ಕಾರದ ನಿಯಮಾವಳಿಗಳಂತೆ ಪತ್ರಕರ್ತರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಸ್ಪಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಅವರು ಬುಧವಾರ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಗಜೇಂದ್ರಗಡದಲ್ಲಿ ಪತ್ರಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿದ ನಂತರ ಮಾತನಾಡಿದರು. ಹಲ್ಲೆಗೊಳಗಾದ ಪತ್ರಕರ್ತ ಡಿ.ಜಿ. ಮೋಮಿನ್ ಮಾತನಾಡಿ, ಅನಾವಶ್ಯಕವಾಗಿ ಹಲ್ಲೆ ಮಾಡಿರುವುದಲ್ಲದೇ ನನಗೆ ಸಂಬಂಧಿಸದೇ ಇರುವ ವಿಷಯವನ್ನು ಮುಂದಿಟ್ಟುಕೊಂಡು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನನಗೆ ನ್ಯಾಯ ಸಿಗಬೇಕು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಜಗದೀಶ ಕುಲಕರ್ಣಿ, ಅನಂತ ಕಾರ್ಕಳ ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಈ ಪೂರ್ವದಲ್ಲಿ ನರಗುಂದದಲ್ಲಿಯೂ ಇಂತಹ ಪ್ರಕರಣ ವರದಿಯಾಗಿತ್ತು. ಪತ್ರಕರ್ತರು ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್ಪಿ ಡಾ. ಶರಣಪ್ಪ ಸರ್ಕಾರದ ನಿಯಮಗಳ ಅನುಸಾರ ಪ್ರತಿ 3 ತಿಂಗಳಿಗೊಮ್ಮೆ ಪತ್ರಕರ್ತರ ಮೇಲಿನ ದೌರ್ಜನ್ಯ ತಡೆ ಸಮಿತಿ ಸಭೆ ನಡೆಸಲಾಗುವುದು. ನಿರ್ಭಯವಾಗಿ ವರದಿ ಮಾಡಲು ಬೇಕಾದ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಖಾಸಗಿ (ಸ್ಥಳೀಯ) ಸುದ್ದಿವಾಹಿನಿಯ ವರದಿಗಾರನಿಗೂ ಬೆದರಿಕೆ ಪತ್ರ ಬಂದಿರುವ ಕುರಿತು ಮನವಿ ಸಲ್ಲಿಸಲಾಯಿತು.
ಅಜಿತ್ ಹೊಂಬಾಳಿ, ಶಿವಕುಮಾರ ಕುಷ್ಟಗಿ, ಸಂಜೀವ ಪಾಂಡ್ರೆ, ಶಾಂತಕುಮಾರ ಹಂಪಿ, ಬಸವರಾಜ ದಂಡೀನ, ಗಣೇಶ ಪೈ, ಟಿ.ಎನ್. ಬಾಂಡಗೆ, ರಾಘವೇಂದ್ರ ಕುಲಕರ್ಣಿ, ಮಂಜುನಾಥ ರಾಠೋಡ, ರಮೇಶ ಬನ್ಸಾಲಿ, ಅಂಬರೀಶ ಹಿರೇಮಠ, ಸುನೀಲ ತೆಂಬದಮನಿ, ದೇವಪ್ಪ ಲಿಂಗದಾಳ, ಶರತ್ ಮಹೇಂದ್ರಕರ, ವಿನಾಯಕ ಚೌಡಾಪುರ, ಪ್ರಕಾಶ ಗುದ್ದೀನ, ಶಂಕರ ಗುರಿಕಾರ, ಚೆನ್ನಯ್ಯ ಹಿರೇಮಠ, ಪ್ರಭು ಮತ್ತಿಕಟ್ಟಿ, ಕುಲಕರ್ಣಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

