ಗದಗ

ಬದುಕು ಕಮಲದ ಎಲೆ ಮೇಲಿನ ಬಿಂದುವಿನಂತೆ: ಶ್ರೀ

Published On :

ಹೊನ್ನಾವರ: ನಮ್ಮ ಬದುಕು ಸ್ಥಿರವಲ್ಲ, ಶಾಶ್ವತವಲ್ಲ. ಅದು ಕಮಲದ ಎಲೆಯ ಮೇಲಿನ ಬಿಂದುವಿನಂತೆ. ಕಮಲದ ಎಲೆಯ ಮೇಲೆ ಹೇಗೆ ನೀರಿನ ಬಿಂದು ಹೊಳೆಯುತ್ತದೆಯೋ ಹಾಗೆ ನಮ್ಮ ಬದುಕು ಕೂಡ ಹೊಳಪುಳ್ಳದ್ದು ಎಂದು ಭಾವಿಸುತ್ತೇವೆ. ಆದರೆ, ಅದು ಸತ್ಯವಲ್ಲ ಮಿಥ್ಯ. ಲೋಕ- ಶೋಕ ಅಕ್ಷರದಲ್ಲಿ ಮಾತ್ರ ವ್ಯತ್ಯಾಸ. ಆದರೆ ಅರ್ಥದಲ್ಲಿ ವ್ಯತ್ಯಾಸವಿಲ್ಲ. ಲೋಕದಲ್ಲಿ ಶೋಕವಿದೆ. ಶೋಕನಾಶವಾಗಬೇಕಾದರೆ ಗೋವಿಂದನನ್ನು ಭಜಿಸು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಿಳಿಸಿದರು.
ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ಶ್ರೀಗಳು ಕೈಗೊಂಡ ಚಾತುರ್ಮಾಸ್ಯ ಆಚರಣೆಯ ಮಂಗಳವಾದಂದು ಹರಿಕಂತ್ರ ಸಮಾಜದವರು ವಿಶೇಷ ಸೇವೆ ಸಲ್ಲಿಸಿ, ಸಮಾಜದ ಉನ್ನತಿಗಾಗಿ ಪ್ರಾರ್ಥಿಸಿ ವಿಶೇಷಯಾಗ ನಡೆಸಿದರು. ಹರಿಕಂತ್ರ ಸಮಾಜದವರಿಗೆ ಆರ್ಶೀಚನ ನೀಡಿದರು. ಶ್ರೀಗಳು ಸಮಾಜದಲ್ಲಿ ಸಾತ್ವಿಕತೆ ನೆಲೆಗೊಳ್ಳಲಿ, ದೇವ ಹಾಗೂ ಗುರುಭಕ್ತಿ ಸಮಾಜದ ಪ್ರತಿಯೊಬ್ಬರಲ್ಲಿ ವೃದ್ಧಿಗೊಳ್ಳಲಿ, ಸಮಾಜದ ಸರ್ವರಿಗೂ ಶ್ರೇಯಸ್ಸುಂಟಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಸುಮಾರು ಹರಿಕಾಂತ ಸಮಾಜ ಬಾಂಧವರು ಶ್ರೀಗಳಿಂದ ವಿಶೇಷ ಅನುಗ್ರಹ ಪಡೆದರು. ಶ್ರೀಗಳವರ 39ನೇ ವರ್ಧಂತ್ಯುತ್ಸವದ ನಿಮಿತ್ತ ಶ್ರೀಗಳಿಗೆ ಭಕ್ತಾದಿಗಳು 39 ಕಲ್ಪವೃಕ್ಷ 39 ದೀಪ ಹಾಗೂ ಹೂವಿನ ಹಾಸಿನ ಸ್ವಾಗತ ನೀಡಿದ್ದು ಎಲ್ಲರ ಗಮನಸೆಳೆಯಿತು. ಭಾರತಿ ಪ್ರಕಾಶನದಿಂದ ಮುದ್ರಣಗೊಂಡ ವಿದ್ವಾನ್ ನರಸಿಂಹ ಭಟ್ಟ ಬಡಗು ರಚಿಸಿದ ಶ್ರೀ ತ್ರೋಟಕಾಚಾರ್ಯ ಎನ್ನುವ ಗ್ರಂಥವನ್ನು ಶ್ರೀಗಳವರು ಲೋಕಾರ್ಪಣೆ ಗೊಳಿಸಿದರು. ಪುಸ್ತಕ ಪ್ರಾಯೋಜಕರಾದ ಆರ್.ಎಸ್. ಭಾಗ್ವತ್, ದಂಪತಿಗಳು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಕುಮಟಾದಲ್ಲಿ ನಡೆದ ಜನಜನನಿ ಕಾರ್ಯಕ್ರಮದ ಮುದ್ರಿತ ಪ್ರತಿ ನಂದಿನಿ ಸಿಡಿಯನ್ನು ಶ್ರೀ ಹೊರನಾಡು ಶ್ರೀಕ್ಷೇತ್ರದ ಧರ್ಮಕರ್ತರಾದ ಶ್ರೀಭೀಮೇಶ್ವರ ಜೋಶಿ ಲೋಕಾರ್ಪಣೆಗೊಳಿಸಿದರು. ಶ್ರೀಗಳ 39ನೇ ವರ್ಧಂತ್ಯುತ್ಸವದ ಸವಿನೆನಪಿಗಾಗಿ ಒಂದು ಲಕ್ಷರು.ವನ್ನು ಕೋಲ್ಕತ್ತಾದ ಉಷಾ ಅಗರವಾಲ್ ಶ್ರೀಮಠದ ಸಹಾಯ ನಿಧಿಗೆ ನೀಡಿದರು. ಅನಂತರಾಮ ಕುಟುಂಬದವರು ಚಾತುರ್ಮಾಸ್ಯಕ್ಕಾಗಿ ವಿಶೇಷ ಕಾಣಿಕೆ ಹಾಗೂ ಸುವಸ್ತುವನ್ನು ಸಮರ್ಪಿಸಿದರು.
ಗುರುಭಕ್ತರ ಸಹಕಾರದೊಂದಿಗೆ ವರ್ಷಾ ದಿನೇಶ ಭಂಡಾರಿ ಅವರಿಗೆ ಸಹಾಯ ನೀಡಲಾಯಿತು. ಶ್ರೀ ಆಂಜನೆಯನ ಸನ್ನಿಧಿಯಲ್ಲಿ ಸಂಕಲ್ಪಿತವಾದ ಎಂಟು ದಿನದ ಕಣಜ ಹಾಗೂ ಅಖಂಡ ಭಜನಾ ಸೇವೆಯಲ್ಲಿ ಪ್ರಥಮ ದಿನವಾದ ಮಂಗಳವಾರ ಕುಮಟಾ ಮಂಡಲದಿಂದ ಬಾಳೆ ಹಣ್ಣಿನ ಕಣಜ ಸೇವೆ ನಡೆಯಿತು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.