ಗದಗ

ಪಂಚಮಸಾಲಿ ಸಮಾಜ 2ಎಗೆ ಸೇರಿಸಿ

Published On :

ಗದಗ: ಹಿಂದಿನ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಕೈಕೊಂಡ ಕ್ರಮಗಳು ಇಂದಿನ ಸರ್ಕಾರದಲ್ಲಿ ಸ್ಥಗಿತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ 2ಎಗೆ ಸೇರಿಸುವಂತೆ ಮತ್ತೆ ಚಾಲನೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಬೆಟಗೇರಿ ಪಂಚಮಸಾಲಿ ಘಟಕದಿಂದ ಮುಷ್ಕರ ಕೈಕೊಳ್ಳಲು ಬೆಟಗೇರಿ 1ನೇ ವಾರ್ಡ್‌ನ ಎಸ್.ಎಂ. ಕೃಷ್ಣಾ ನಗರದಲ್ಲಿ ಸೋಮವಾರ ಸೇರಿದ ಮಾಸಿಕ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಕೊಂಡಿತು.
ಸಭೆಯಲ್ಲಿ ಜೂ. 8ರಂದು ಬೆಟಗೇರಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಾ ಪುರಸ್ಕಾರವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯ ವಹಿಸಲು ತೀರ್ಮಾನಿಸಲಾಯಿತು. ಬೆಟಗೇರಿಯ 1ರಿಂದ 10 ವಾರ್ಡ್‌ಗಳ ಪಂಚಮಸಾಲಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಜೂ. 8ರೊಳಗಾಗಿ ಕಾರ್ಯದರ್ಶಿ ಮಹೇಶ ಕರಬಿಷ್ಟಿ ಇವರ ಕೈಯ್ಯಲ್ಲಿ ಕೊಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಸಂಘಟನೆ, ಹೋರಾಟ, ಸಂಘದ ಅವಶ್ಯಕತೆ ಸಹಕಾರಿ ಸಂಘ ಸ್ಥಾಪನೆ ಮೊದಲಾದ ಅಂಶಗಳನ್ನು ಚರ್ಚಿಸಲಾಯಿತು. ಸೋಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಮಹೇಶ ಕರಬಿಷ್ಟಿ ಪ್ರಾಸ್ತಾವಿಕ ಮಾತನಾಡಿದರು. ಬೆಟಗೇರಿ ಘಟಕದ ಅಧ್ಯಕ್ಷ ಕಲ್ಯಾಣಪ್ಪ ಹೋಳಿ, ಜಿಲ್ಲಾಧ್ಯಕ್ಷ ಎಂ. ಬಸಪ್ಪ, ಮಲ್ಲೇಶಪ್ಪ ಬಣಕಾರ, ಎಂ.ಎಸ್. ಮಲ್ಲಾಪುರ, ಎಂ.ಎಸ್. ಪಾಟೀಲ, ಮುತ್ತಣ್ಣ ಹಕಾರಿ, ಎಸ್.ಎ. ರಾಟಿ, ವರಪುತ್ರ ಆರೇರ, ಈಶ್ವರ ಹುನಕುಂಟಿ, ರಾಜು ಕವಳಿಕಾಯಿ, ನಿಂಗನಗೌಡ ಚಿಕ್ಕನಗೌಡ್ರ, ಈರಣ್ಣ ಕಮತರ, ಸಿದ್ದು ಹೊಸಳ್ಳಿ, ಈರಣ್ಣ ಹರ್ತಿ, ಶೇಶಪ್ಪ ನಾಗನಗೌಡ, ಸಿದ್ದಪ್ಪ ಕಾತರಕಿ, ಮಲ್ಲೇಶಪ್ಪ ಪಲ್ಲೇದ, ಶ್ರೀಕಾಂತ ಕಣಗಿನಹಾಳ, ಶಾಂತವ್ವ ಪಾಟೀಲ, ಶಾರದಾ ಕೊಟಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.