ಗದಗ

ಸವಾಲುಗಳನ್ನು ಮೆಟ್ಟಿ ನಿಲ್ಲಿ

Published On :

ಗಜೇಂದ್ರಗಡ: ಜಾಗತಿಕ ಮಟ್ಟದ ಸ್ಪರ್ಧಾ ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಬೆಳಸಿಕೊಳ್ಳಲು ಬಣಜಿಗ ಸಮುದಾಯ ಮುಂದಾಗುವುದರ ಜತೆ ಶೈಕ್ಷಣಿಕ ಪ್ರಗತಿಗೆ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಅವರು ಸ್ಥಳೀಯ ಮೈಸೂರು ಮಠದಲ್ಲಿ ಸಂಜೆ ನಡೆದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಬಣಜಿಗ ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳಾಗಿ, ವ್ಯವಹಾರದಲ್ಲಿ ಜಾಣರೆನಿಕೊಂಡ ಬಣಜಿಗರ ವೈಭವಯುತ ಇತಿಹಾಸ ಮತ್ತೆ ಮರುಕಳಿಸಲು ಸಂಘಟನೆ ಬಲಗೊಳ್ಳಬೇಕಾಗಿದೆ ಎಂದರು. ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿಯವರನ್ನು ಸಮುದಾಯವ ವತಿಯಿಂದ ಸನ್ಮಾನಿಸಲಾಯಿತು.
ಡಾ. ಬಿ.ವಿ. ಕಂಬಳ್ಯಾಳ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಕ್ಕ ಅಂಗಡಿ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಸದಸ್ಯೆ ವಿಜಯಲಕ್ಷ್ಮಿ ಚಟ್ಟೇರ, ಬಸವರಾಜ ಗಣವಾರಿ, ಅರುಣಕುಮಾರ ಕತ್ತಿಶೆಟ್ಟರ, ಬಸವರಾಜ ಬಳ್ಳೊಳ್ಳಿ, ಎಂ.ವಿ. ಗೊಂಗಡಶೆಟ್ಟಿ ಭಾಗವಹಿಸಿದ್ದರು. ಮಹಾಂತೇಶ ಮಾಳಗಿ, ಎಸ್.ವಿ. ಅಂಗಡಿ, ಶರಣಬಸವ ಮೆಣಸಿನಕಾಯಿ, ಜಗದೀಶ ದುದ್ಗಿ, ಮುತ್ತಣ್ಣ ಸಂಗಳದ, ಶಿವರುದ್ರಪ್ಪ ಸಂಕನೂರ, ಬಸವರಾಜ ಮತ್ತಿಕಟ್ಟಿ, ಬಿ.ಆರ್. ಅಂಗಡಿ, ವಿಜಯಕುಮಾರ ಅಂಗಡಿ, ರೇವಣಪ್ಪ ಮಾಳಗಿ, ವೀರೇಶ ನಂದಿಹಾಳ, ಸಂತೋಷ ಸಂಕನೂರ, ಮುತ್ತಣ್ಣ ಚೆಟ್ಟೇರ, ವೀರೇಶ ನಿಡಶೇಶಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.