ಆಸ್ತಿ ತೆರಿಗೆ ಹೆಚ್ಚಳಕ್ಕೆ ಪುರಸಭೆ ನಿರ್ಧಾರ
ರೋಣ: ಸರ್ಕಾರಿ ಅಧಿನಿಯಮ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಮನೆ ಮತ್ತು ವಾಣಿಜ್ಯ ಅಂಗಡಿಗಳ ಆಸ್ತಿ ತೆರಿಗೆ (ಕರ ವಸೂಲಿ)ಯಲ್ಲಿ ಹೆಚ್ಚಳ ಮಾಡಬೇಕು ಎಂಬ ನಿಯಮದ ಸುತ್ತೋಲೆ ಬಂದಿದ್ದರಿಂದ ಶೇ. 7ರಷ್ಟಿದ್ದ ಮನೆ ಕರ(ತೆರಿಗೆ)ವನ್ನು ಶೇ. 15ಕ್ಕೆ, ಶೇ. 8ರಷ್ಟಿದ್ದ ವಾಣಿಜ್ಯ ಅಂಗಡಿಗಳ ಕರ (ತೆರಿಗೆ)ವನ್ನು ಶೇ. 17ಕ್ಕೆ ಹೆಚ್ಚಿಸುವಲ್ಲಿ ಗುರುವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು.
ಕರ ಹೆಚ್ಚಳ ಕುರಿತು ಪ್ರಭಾರಿ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಅವರು ಸಭೆಯ ಒಪ್ಪಿಗೆ ಪಡೆಯಲು ಸರ್ಕಾರದಿಂದ ಬಂದಿರುವ ಸುತ್ತೋಲೆ ಓದಿ ಹೇಳಿದರು. ಆಗ ಸದಸ್ಯರಾದ ಗದಿಗೆಪ್ಪ ಕಿರೇಸೂರ, ಶಿವಪ್ಪ ಕರಲಿಂಗಣ್ಣವರ, ಅಜ್ಜಪ್ಪ ರಡ್ಡೇರ, ಶಫೀಕ್ ಮೂಗನೂರ ಮಾತನಾಡಿ, 4 ವರ್ಷಗಳಿಂದ ಈವರೆಗೂ ಮಳೆ ಕೊರತೆಯಿದ್ದು, ಕರ ಹೆಚ್ಚಳವಾದಲ್ಲಿ ಜನತೆಗೆ ತೊಂದರೆಯಾಗುತ್ತದೆ. ಈ ವರ್ಷ ಬೇಡ ಎಂದರು. ಪ್ರಭಾರಿ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ ಆಸ್ತಿ ತೆರಿಗೆ ಶೇ. 15ರಿಂದ 30ರಷ್ಟು ಕಡ್ಡಾಯವಾಗಿ ಕರ ಹೆಚ್ಚಳ ಮಾಡಬೇಕು ಎಂಬ ಆದೇಶವಿದೆ ಎಂದರು. ಆಗ ಸಭೆಯಲ್ಲಿದ್ದ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರು ಮನೆ ಕರವನ್ನು ಶೇ. 15ಕ್ಕೆ ಮತ್ತು ವಾಣಿಜ್ಯ ಅಂಗಡಿಗಳ ಕರವನ್ನು ಶೇ. 17ಕ್ಕೆ ಹಚ್ಚಿಸುವಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು.
ಸಭೆ ಪ್ರಾರಂಭದಲ್ಲಿ 2014ರ ಜನವರಿಯಿಂದ ಎಪ್ರಿಲ್‌ವರೆಗಿನ ಪುರಸಭೆಯಲ್ಲಿನ ಖರ್ಚು-ವೆಚ್ಚದ ಕುರಿತು ಚರ್ಚೆ ನಡೆಯಿತು. ಈ ವೇಳೆ ಪದೇ ಪದೇ ಗಟಾರ ಸ್ವಚ್ಛತೆಗೆ ಜೆಸಿಬಿ ಯಂತ್ರ ಬಳಕೆಗಾಗಿ ಲಕ್ಷಾಂತರ ರು.ಗಳ ಖರ್ಚಾದ ಕುರಿತು ಮತ್ತು ನೀರಿನ ಹೆಸರಿನಲ್ಲಿ ಮೋಟಾರ ದುರಸ್ತಿ ಕುರಿತು ಲಕ್ಷಾಂತರ ರು.ಗಳ ಖರ್ಚಾಗಿದ್ದ ಕುರಿತು ಹಾಗೂ ಕಸ ವಿಲೇವಾರಿಗಾಗಿ ಪ್ರತಿ ತಿಂಗಳು ನೂರಾರು ಲೀಟರ್ ಡೀಸೆಲ್ ಬಳಕೆ ಕುರಿತು ಸದಸ್ಯ ಗದಿಗೆಪ್ಪ ಕಿರೇಸೂರ ಪ್ರಶ್ನಿಸಿ, ಇಷ್ಟೇಲ್ಲ ಖರ್ಚು ಹಾಕಿರುವುದನ್ನು ನೋಡಿದಲ್ಲಿ ವಾರ್ಡ್‌ಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿರಬೇಕಲ್ಲ, ಅನಾವಶ್ಯಕ ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ರು.ಗಳನ್ನು ಖರ್ಚು ಹಾಕಲಾಗಿದ್ದು, ಕಳೆದ ಜ. 21ರಂದು ನಡೆದ ಸಭೆಯಿಂದ ಇಲ್ಲಿವರೆಗೂ ಕೋಟಿ ಗೂ ಹೆಚ್ಚು ಹಣ ಖರ್ಚಾಗಿದೆ. ಈ ಕುರಿತು ಲೋಕಾಯುಕ್ತ ತನಿಖೆ ಕೈಗೊಂಡಲ್ಲಿ ವಸ್ತುಸ್ಥಿತಿ ಹೊರ ಬೀಳುತ್ತದೆ. ಇಲ್ಲವಾದಲ್ಲಿ ಪುರಸಭೆ ಅನುದಾನ ಅನಾವಶ್ಯಕ ಪೋಲಾಗುವುದು. ವಾರ್ಡ್‌ವಾರು ಜೆಸಿಬಿ ಬಳಕೆ, ಡೀಸೆಲ್ ಬಳಕೆ ಕುರಿತು ಸಂಪೂರ್ಣ ಲಿಖಿತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಪುರಸಭೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್ ಬಂದೊಬಸ್ತ್‌ನೊಂದಿಗೆ ಸಾಮಾನ್ಯ ಸಭೆ ನಡೆಯಿತು. ಈ ಕುರಿತು ಸದಸ್ಯರಲ್ಲಿ ಪರಸ್ಪರ ತೀವ್ರ ಕೂತೂಹಲ ಮತ್ತು ಹಲವು ರೀತಿಯ ಚರ್ಚೆಗಳು ನಡೆದಿದ್ದು ಕಂಡು ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

