ಗದಗ

ಕಸಾಪದಿಂದ ಪರಿಷತ್ ಸದಸ್ಯ ಸಂಕನೂರಗೆ ಸನ್ಮಾನ

Published On :

ಗದಗ: ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿದ ಪ್ರಾ. ಎಸ್.ವಿ. ಸಂಕನೂರ ಯುವ ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ನಿವಾರಣೆಗಾಗಿ ಶ್ರಮಿಸಬೇಕೆಂದು ಗದಗ ತಾಲೂಕು ಕಸಾಪದ ಕಿಶೋರಬಾಬು ನಾಗರಕಟ್ಟಿ ಹೇಳಿದರು. ಅವರು ಈಚೆಗೆ ಪಶ್ಚಿಮ ಪದವೀಧರರ ಮತಕ್ಷೇತ್ರದಿಂದ ಆಯ್ಕೆಯಾದ ಪ್ರಾ. ಎಸ್.ವಿ. ಸಂಕನೂರ ಅವರನ್ನು ಗದಗ ತಾಲೂಕು ಕಸಾಪದಿಂದ ಸನ್ಮಾನಿಸಿ, ಮಾತನಾಡಿದರು. ಕಸಾಪದ ಆಜೀವ ಸದಸ್ಯರಾದ ಪ್ರಾ. ಸಂಕನೂರ ಅವರು ಸಾಹಿತ್ತಿಕ ಕಾರ್ಯಕ್ರಮಗಳಿಗೆ ಹಲವಾರು ವರ್ಷಗಳಿಂದ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿ ಸಹಾಯ ಸಹಕಾರ ಇವರಿಂದ ದೊರೆಯಲಿ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಕವಿತಾ ದಂಡಿನ, ಶರಣು ಗೋಗೇರಿ, ಪ್ರಭು ಗಂಜಿಹಾಳ, ಖಜಾಂಜಿ ಪ್ರಾ. ಬಿ.ಜಿ. ಹಿರೇಮಠ, ದತ್ತಪ್ರಸನ್ನ ಪಾಟೀಲ, ಪ್ರಾ. ಬಿ.ಎಸ್. ರಾಠೋಡ, ಎಸ್.ಐ. ಮೇಟಿ, ಜಿಲ್ಲಾ ಕಸಾಪ ಸಲಹಾ ಮಂಡಳಿ ಸದಸ್ಯ ಪ್ರಾ. ಕೆ.ಎಚ್. ಬೇಲೂರು, ಜಿ.ಎಸ್. ಯತ್ನಟ್ಟಿ, ಹನುಮಂತ ಮೇಟಿ, ಪ್ರಾ. ಎಸ್.ಎಚ್. ಕಾಳೆ ಉಪಸ್ಥಿತರಿದ್ದರು.

ಉಚಿತ ನೋಟ್‌ಬುಕ್ ವಿತರಣೆ ನಾಳೆ
ಲಕ್ಷ್ಮೇಶ್ವರ: ಪಟ್ಟಣದ ಗುರಪ್ಪ ಶಿದ್ರಾಮಪ್ಪ ಪಿಳ್ಳಿ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷದಂತೆ ಉಚಿತ ನೋಟ್‌ಬುಕ್‌ಗಳ ವಿತರಣೆ ಹಾಗೂ ಸನ್ಮಾನ ಸಮಾರಂಭ ಜುಲೈ 1ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಸಿ.ಎಸ್. ಪಿಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ತಿಬಣದಲ್ಲಿ ಏರ್ಪಡಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಎ.ಸಿ. ಪಿಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವೈದ್ಯ ಬಾಬುರಾವ್ ಕುಲಕರ್ಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕ್ಷೇತ್ರ ಸಮನ್ವಯಾಧಿಕಾರಿ ಜೆ.ಬಿ. ಗುಡಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಟಿ. ಲೋಹಾರ, ಬಿ.ಬಿ. ಹುಬ್ಬಳ್ಳಿ, ಬಿ.ಜಿ. ಆಕಳವಾಡಿ, ವಿ.ಪಿ. ಮನಸೂರ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಸಂಘಟಿಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.