ಪಿಯು ಪರೀಕ್ಷೆ: ನಾಲ್ವರು ವಿದ್ಯಾರ್ಥಿಗಳು ಡಿಬಾರ್
ಗದಗ: ಶುಕ್ರವಾರ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಡಂಬಳದ ಜೆ.ಟಿ. ಪಪೂ ಕಾಲೇಜಿನ-1, ಮುಂಡರಗಿಯ ಜೆಎ ಪಪೂ ಕಾಲೇಜಿನ-1, ನರೇಗಲ್ಲದ ಎಸ್.ಎ. ಪಪೂ ಕಾಲೇಜಿನ-1, ಗಜೇಂದ್ರಗಡ ಸರ್ಕಾರಿ ಪಪೂ ಕಾಲೇಜಿನ-1 ಒಟ್ಟು ನಾಲ್ವರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಸಮಾಜಶಾಸ್ತ್ರ ವಿಷಯಕ್ಕೆ 4885 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 4614 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 271 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಲೆಕ್ಕಶಾಸ್ತ್ರದಲ್ಲಿ 2273 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 2229 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 44 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಕಾರ್ಯಕ್ರಮ
ಹನುಮಸಾಗರ: ಹನುಮಸಾಗರದ ಶ್ರೀರುಕ್ಮಿಣಿಸಹಿತ ಪಾಂಡುರಂಗ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರುಕ್ಮಿಣಿಸಹಿತ ಪಾಂಡುರಂಗ ದೇವಸ್ಥಾನ ಸಮಿತಿ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಮಾ. 16ರಂದು ಹೋಳಿ ಹುಣ್ಣಿಮೆಯಂದು ಬೆಳಗ್ಗೆ 9 ಗಂಟೆಗೆ ರಥಾಂಗ ಹೋಮ, ಮಧ್ಯಾಹ್ನ 1 ಗಂಟೆಗೆ ತೀರ್ಥಪ್ರಸಾದ, ಸಂಜೆ 5-30ಕ್ಕೆ ಶ್ರೀರುಕ್ಮಿಣಿಸಹಿತ ಪಾಂಡುರಂಗ ದೇವರ ರಥೋತ್ಸವ ಜರುಗಲಿದೆ. ಮಾ. 17ರಂದು ಬೆಳಗ್ಗೆ 9 ಗಂಟೆಗೆ ಅವಭ್ರತ ಸ್ನಾನ (ಓಕುಳಿ), ಸಂಜೆ 6 ರಿಂದ 7 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಕು.ಹರಿಪ್ರಿಯಾ ಮತ್ತು ಕು.ಹರಿಣಿ ರಾಘವೇಂದ್ರ ಪಪ್ಪು ಸಹೋದರಿಯರಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಧರಣಿ 6ನೇ ದಿನಕ್ಕೆ
ಗಂಗಾವತಿ: ಆಟೋನಗರ ಅಭಿವೃದ್ಧಿಗಾಗಿ ರೂಪುಗೊಂಡ ಹೋರಾಟ ಸಮಿತಿ ಪ್ರಾರಂಭಿಸಿದ ಧರಣಿ 6ನೇ ದಿನಕ್ಕೆ ಕಾಲಿರಿಸಿದೆ. ಬೇಡಿಕೆ ಈಡೇರುವವರಿಗೆ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಸಮಿತಿಯವರು ತಿಳಿಸಿದ್ದಾರೆ. ಧರಣಿ 6ನೇ ದಿನದಂದು ಸ್ಥಳಕ್ಕೆ ಬಂದ ಕಾ. ಗಂಗಾಧರ, ರಾಜ್ಯಾಧ್ಯಕ್ಷರು, ಕ್ರಾಂತಿಕಾರಿ ಯುವಜನ ಫೇಡರೆಷನ್ ಮತ್ತು ಅಮಿನ್ ಪಾಷಾ ಸಿಂಧನೂರು ತಾಲೂಕು ಅಧ್ಯಕ್ಷರು, ಆರ್ವೈಎಫ್ಐ, ಬಿ. ಮೋಹನ್, ಎಐಸಿಸಿಟಿಯು, ಭಾಷಾ, ತಾಲೂಕು ಅಧ್ಯಕ್ಷರು, ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘ ಇವರೆಲ್ಲರೂ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಕಾ. ಗಂಗಾಧರ ಮಾತನಾಡುತ್ತಾ, ಆಟೋನಗರ ಸದಸ್ಯರ ಬೇಡಿಕೆ ಈಡೇರುವವರಿಗೆ ತಮ್ಮ ಸಂಘಟನೆ ಜೊತೆಗಿರುವುದಾಗಿ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದಾಗ ತಮ್ಮ ಸಂಘಟನೆ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳುವುದಾಗಿ ಹೇಳಿದರು. ಅಮಿನ್ ಪಾಷಾ, ಆಟೋನಗರದ ಸದಸ್ಯ ವಿಜಯನ್ ಮಾತನಾಡಿದರು. ಆಟೋನಗರದ ಅಭಿವೃದ್ಧಿ ಸಂಘದ ಸಂಚಾಲಕ ಭಾರದ್ವಾಜ್, ಹರಿ, ಬಡೆಸಾಬ್, ವಿಜಯ, ಖಾಜಾ ಹುಸೇನ್, ಶ್ರೀನಿವಾಸ, ವೆಂಕಟೇಶ್ವರರಾವ್, ಮಂಜುನಾಥ, ಯಾಕೋಬ್, ಕಟ್ಟಾರಾಜಾ ಮತ್ತೀತರ ಸದಸ್ಯರು ಪಾಲ್ಗೊಂಡಿದ್ದರು.
ರೇಣುಕಾಚಾರ್ಯ ಜಯಂತಿ
ಕುಕನೂರು: ನಗರದ ಜಂಗಮ ಸಮಾಜದವರು ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜಂಗಮ ಮತ ಸಂಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಸ್ಥಳೀಯ ಅನ್ನದಾನೇಶ್ವರ ಮಠದಲ್ಲಿ ಶುಕ್ರವಾರದಂದು ಆಚರಿಸಲಾಯಿತು. ನಂತರ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿದರು. ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಚನ್ನಬಸಯ್ಯ ಹಿರೇಮಠ, ವೀರಯ್ಯ ಹಿರೇಮಠ, ಮಹಾಲಿಂಗಯ್ಯ ಅಂಟಿ, ಬಸಯ್ಯ ಸರಗಣಾಚರ, ಸೋಮಲಿಂಗಯ್ಯ ಹಿರೇಮಠ, ಕಲ್ಲಯ್ಯ ಹಿರೇಮಠ, ಜಗದೀಶಯ್ಯ ಕಳ್ಳಿಮಠ, ಶಿವು ಎಸ್, ಪಂಚಯ್ಯ ಎಚ್. ಮಂಜುನಾಥ ಬಿ, ಮೃತ್ಯುಂಜಯ ಕೆ, ಶರಣಯ್ಯ ಎಸ್, ನೀಲಕಂಠಯ್ಯ ಹಾಗೂ ವೀರಶೈವ ಸಮಾಜದ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

