ನಾಳೆ ಛಬ್ಬಿ ಗ್ರಾಮದ ಹೊರ ದುರ್ಗಮ್ಮದೇವಿ ಜಾತ್ರೆ
ಶಿರಹಟ್ಟಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಹೊರ ದುರ್ಗಮ್ಮದೇವಿ ಜಾತ್ರೆ ಮಾ. 18 ಹಾಗೂ 19ರಂದು ಜರುಗಲಿದೆ. ಮಾ. 18ರಂದು ಬೆಳಗ್ಗೆ 4ಕ್ಕೆ ದೇವಿಯನ್ನು ಪ್ರತಿಷ್ಠಾಪಿಸುವುದು. ಮಾ. 19ರಂದು ಬೆಳಗ್ಗೆ 8ಕ್ಕೆ ದೇವಿಗೆ ಉಡಿ ತುಂಬುವುದು. ಸಕಲ ಬಾಜಾ, ಭಜಂತ್ರಿ, ಡೊಳ್ಳು ವಾದ್ಯಗಳೊಡನೆ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ. ಅಂದೇ ದೇವಿಗೆ ದೀಡ್‌ನಮಸ್ಕಾರ್, ಹರಕೆ, ಎಡೆ ಕೊಡುವುದು, ಹಣ್ಣು, ಕಾಯಿ, ನೈವೇದ್ಯ ಸಲ್ಲಿಸುವ ಕಾರ್ಯಕ್ರಮ ಜರುಗುವುದು. ಸಂಜೆ 4ಕ್ಕೆ ಪೋತರಾಜರಿಂದ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಹೊರ ದುರ್ಗಮ್ಮದೇವಿ ಪಂಚ ಕಮಿಟಿಯವರು ತಿಳಿಸಿದ್ದಾರೆ.
ಸಾಲಬಾಧೆ: ವ್ಯಕ್ತಿ ಆತ್ಮಹತ್ಯೆ
ಬ್ಯಾಡಗಿ: ಮಾಡಿದ ಸಾಲ ತೀರಿಸಲಾಗದೇ ಮಾನಸಿಕ ಹಿಂಸೆಗೊಳಗಾದ ವ್ಯಕ್ತಿಯೊಬ್ಬ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ಮೋಟೆಬೆನ್ನೂರ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಅದೇ ಗ್ರಾಮದ ಪುಟ್ಟಪ್ಪ ಬೆಟ್ಟಪ್ಪ ಬನ್ನಿಹಟ್ಟಿ (45) ಎಂದು ಗುರುತಿಸಲಾಗಿದ್ದು, ಈತ ಗ್ರಾಮದಲ್ಲಿ ಖಾಸಗಿ ಜನರಿಂದ ಸುಮಾರು ರು. 10 ಲಕ್ಷಗಳಿಗೂ ಹೆಚ್ಚು ಸಾಲ ಪಡೆದಿರುವುದಾಗಿ ತಿಳಿದು ಬಂದಿದೆ. ಸಾಲ ತೀರಿಸುವುದಕ್ಕಾಗಿ ತನ್ನ ಅಲ್ಪಸ್ವಲ್ಪ ಜಮೀನನ್ನು ಇತ್ತೀಚೆಗೆ ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನಲಾಗುತ್ತಿದೆ. ಅದಾಗ್ಯೂ ಸಾಲ ಉಳಿದಿದ್ದು ಇದರಿಂದ ಮನನೊಂದ ಪುಟ್ಟಪ್ಪ ಮನೆಯಲ್ಲಿನ ತೊಲೆಗೆ ಹಗ್ಗಹಾಕಿ ನೇಣು ಹಾಕಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

