ಗದಗ

ದುಷ್ಟರನ್ನು ಕ್ಷೇತ್ರದ ಜನತೆ ಸೋಲಿಸಿದ್ದಾರೆ

Published On :

ನರಗುಂದ: ಈ ಕ್ಷೇತ್ರದಲ್ಲಿನ ದುಷ್ಟರನ್ನು ಈಗಾಗಲೇ ಜನರು ಸೋಲಿಸಿ ಮನೆಗೆ ಕಳಿಸಿದ್ದರೂ ಅವರು ಸೋಲಿನ ಹತಾಶೆಯಿಂದ ಈಗ ಆಡಳಿತ ಪಕ್ಷದ ಶಾಸಕರು ದುಷ್ಟರೆಂದು ಕರೆಯುತ್ತಿರುವುದು ಖಂಡನೀಯ ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಪಕ್ಷದ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಈ ಕ್ಷೇತ್ರಕ್ಕೆ ಬಂದು ತಮ್ಮ ಅನುದಾನವನ್ನು ಇಚ್ಛಾನುಸಾರ ಬಿಡುಗಡೆ ಮಾಡಲಿಕ್ಕೂ ಅವರನ್ನು ನರಗುಂದಕ್ಕೆ ಬರಗೊಡದ ಕೀರ್ತಿ ಇವರಿಗೆ ಸಲ್ಲಬೇಕು. ಇನ್ನು ಇವರು ಪದೇ ಪದೆ ಪತ್ರಿಕೆ ಮುಖಾಂತರ ಈಗಿನ ಶಾಸಕರು ನಾನು ತಂದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರು ಹೇಳುವುದು ಸತ್ಯಕ್ಕೆ ದೂರವಾದದ್ದು. ಇವರ ಆರೋಗ್ಯದ ಬಗ್ಗೆ ಕ್ಷೇತ್ರದ ಜನತೆಗೆ ತಪ್ಪು ಸಂದೇಶ ನೀಡಿ ನಾವು ಚುನಾವಣೆಯಲ್ಲಿ ಗೆದ್ದಿಲ್ಲ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಸಿ.ಎಸ್. ಪಾಟೀಲ, ಶ್ರೀನಿವಾಸ ಬೋನಗೇರ ಸೇರಿದಂತೆ ಮುಂತಾದವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ, ಬೀಳಗಿ ಶಾಸಕ ಜೆ.ಟಿ. ಪಾಟೀಲ, ಪಕ್ಷದ ಅಭ್ಯರ್ಥಿ ಅಜಯಕುಮಾರ ಸರನಾಯ್ಕ, ಮಾಜಿ ಸಚಿವ ಆರ್.ಬಿ. ತಿಮ್ಮಪುರ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ರೋಣ ಶಾಸಕ ಜಿ.ಎಸ್. ಪಾಟೀಲ, ಐ.ಎಸ್. ಪಾಟೀಲ, ಎಂ.ಬಿ. ಪಾಟೀಲ, ಚಂಬಣ್ಣ ವಾಳದ, ದಶರಥ ಗಾಣಿಗೇರ, ಎಫ್.ವೈ. ದೊಡಮನಿ, ಗುರುಪಾದಪ್ಪ ಕುರಹಟ್ಟಿ, ಡಾ. ಸಂತೋಷ ಯಾವಗಲ್, ರಾಜು ಕಲಾಲ, ಸಿ.ಬಿ. ಪಾಟೀಲ, ವೆಂಕರಡ್ಡಿ ದೇವರಡ್ಡಿ, ದ್ಯಾಮಣ್ಣ ಸವದತ್ತಿ, ಶಿವನಗೌಡ ಹೆಬ್ಬಳ್ಳಿ, ಗಿರಯಪ್ಪಗೌಡ ಪಾಟೀಲ, ಡಿ.ಎಸ್. ಪಾಟೀಲ, ವಿಠಲ ಶಿಂಧೆ, ರಾಮಚಂದ್ರ ಪವಾರ, ಸಿ.ಎಸ್. ಪಾಟೀಲ, ಬಿ.ಆರ್. ಹಿರೇಗೌಡ್ರ, ಶ್ರೀನಿವಾಸ ಬೋನಗೇರಿ, ರವಿ ಯರಗಟ್ಟಿ, ಬಿ.ಸಿ. ಬ್ಯಾಳಿ, ದೀಪಕ ಗೋಡ್ಸ, ವಸಂತ ಪ್ರಭುಗೌಡ್ರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.