ಒಡೆದ ಪೈಪ್ಲೈನ್: ಅಪಾರ ಪ್ರಮಾಣದ ನೀರು ಪೋಲು
ಗದಗ: ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ಗದಗ ಜನತೆಗೆ 21 ದಿನಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ಇದಕ್ಕೆ ಅವರು ನೀಡೋ ಕಾರಣ ನದಿಯಲ್ಲಿ ನೀರಿಲ್ಲ ಅಂತ. ಆದ್ರೆ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದ್ದರೂ ನಗರಸಭೆಯ ಯಾವ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.
ಗದಗ ನಗರದ ರೋಟರಿ ಸರ್ಕಲ್ ಬಳಿ ಕುಡಿವ ನೀರು ಸರಬರಾಜು ಮಾಡುವ ಪೈಪ್ ಒಡೆದು ಬುಧವಾರ ಸಂಜೆಯಿಂದಲೇ ನೀರು ಚರಂಡಿ ಪಾಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿ ಹೇಳಿದರೂ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ. ಸುಮಾರು 2 ಅಡಿ ಅಗಲ ಮುಖ್ಯ ಪೈಪ್ ಒಡೆದು 2 ಗಂಟೆಗೂ ಹೆಚ್ಚು ಕಾಲ ನೀರು ಹರಿಯುತ್ತಿದ್ದರೂ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದಿರಲಿಲ್ಲ. ನೀರು ಹರಿದಿದ್ದರಿಂದ ರಸ್ತೆಯಲ್ಲಿ ಪಾದಚಾರಿಗಳಿಗೆ, ವಾಹನಗಳಿಗೆ ಕಿರಿಕಿರಿ ಉಂಟಾಗಿತ್ತು. ರೋಟರಿ ಸರ್ಕಲ್ನಿಂದ ಹಳೆಯ ಬಸ್ ನಿಲ್ದಾಣ ಹಾಗೂ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿನ ರಸ್ತೆಯಲ್ಲಿಯೇ ನೀರು ಹರಿದಿದ್ದರಿಂದ ಸಂಚರಿಸಲು ಸಮಸ್ಯೆಯಾಯಿತು. ನಗರಸಭೆಯವರು 20 ದಿನಕ್ಕೊಮ್ಮೆ ಕುಡಿವ ನೀರು ಕೊಡುತ್ತಿದ್ದು, ಹೀಗೆ ನೀರು ಚರಂಡಿ ಪಾಲಾಗುತ್ತಿದೆ ಎಂದು ತಿಳಿಸಿದರೂ ಯಾರೂ ಇತ್ತ ಬರುತ್ತಿಲ್ಲ ಎಂದು ಗದಗ ಜನ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

