ಬರಿದಾಗುತ್ತಿದೆ ಜಲ ಸಂಪನ್ಮೂಲ
ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅತಿಯಾದ ಬೋರ್ವೆಲ್ ಕೊರೆಯಿಸಿದ ಪರಿಣಾಮ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇದರಿಂದ ಜನರಿಗೆ ಆತಂಕ ಮನೆಮಾಡಿದೆ.
ಗಜೇಂದ್ರಗಡ ಭಾಗದ 42ಕ್ಕೂ ಅಧಿಕ ಗ್ರಾಮಗಳ ನಾಗರಿಕರು ಕುಡಿಯಲು, ಬಳಕೆಗೆ ಹಾಗೂ ಕೃಷಿ ಚಟುವಟಿಕೆಗೆ ಕೊಳವೆ ಬಾವಿ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ವರ್ಷದಲ್ಲಿ ಮಳೆ ಪ್ರಮಾಣ ಕ್ರಮೇಣ ಕಡಿಮೆಯಾದ ಪರಿಣಾಮ ಅಂತರ್ಜಲ ತೀವ್ರಗತಿಯಲ್ಲಿ ಕುಸಿತ ಕಂಡಿದೆ. ಈ ಮೊದಲು 300 ಅಡಿ ಆಳದಲ್ಲಿ ಬೋರ್ವೆಲ್ ಕೊರೆಯಿಸಿದಾಗ ನೀರು ಸಿಗುತಿತ್ತು. ಈಗ 500-600 ಅಡಿ ಕೊರೆಯಿಸಿದರೂ ಜಲ ಲಭಿಸುತ್ತಿಲ್ಲ. ಹೀಗಾಗಿ ಮುಂದೇನು ಎನ್ನುವ ದುಗುಡ ಜನರನ್ನು ಕಾಡುತ್ತಿದೆ. ಇನ್ನೊಂದೆಡೆ ಪ್ರಸ್ತುತ ನೀರಿನ ಬೆಲೆ ಕಡಿಮೆ ಇರುವುದೇ ಅಂತರ್ಜಲ ಮಟ್ಟ ಕುಸಿಯುವಂತಹ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ನೀರು ಅಗ್ಗವಾಗಿದ್ದರಿಂದ ಮಿತವಾಗಿ ಬಳಕೆ ಮಾಡುತ್ತಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ.
ಮಿತಿಮೀರಿದ ನೀರು ತೆಗೆಯಲು ನಿರ್ಬಂಧಿಸಲಿ: ಈ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಸ್ವಲ್ಪವೇ ಖರ್ಚು ಮಾಡಿದರೂ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆ ಈಗಲೇ ಮಾಡದಿದ್ದರೆ ಮುಂದೆ ಕಾಯ್ದಿದೆ ದೊಡ್ಡ ಗಂಡಾಂತರ ಎಂದು ಎಚ್ಚರಿಕೆಗಳು ಕೂಡ ಕೇಳಿ ಬರುತ್ತಿವೆ. ಆದರೆ, ತಾಜಾ ನೀರೇ ಅಗ್ಗವಾಗಿದ್ದರಿಂದ ಈಗ ಏನೇನು ಮಾಡಲಿಕ್ಕೆ ಆಗಲ್ಲ ಎನ್ನುವ ಸ್ಥಿತಿ ಇದೆ. ಸದ್ಯದ ಬೋರ್ವೆಲ್ಗಳಿಂದ ಮಿತಿಮೀರಿದ ನೀರು ಹೊರ ತೆಗೆಯುವುದನ್ನು ನಿರ್ಬಂಧಿಸಲು ಯಾವುದೇ ನಿಯಮವಿಲ್ಲ. ಹೀಗೆ ಜಲಸಂಪನ್ಮೂಲ ಸಂರಕ್ಷಿಸುವ ಮೂಲ ಉದ್ದೇಶ ವಿಫಲಗೊಳ್ಳಲಿದೆ. ಈಗಾಗಲೇ ಕೊರೆಯಲಾಗಿರುವ ಬಹುತೇಕ ಬೋರ್ವೆಲ್ಗಳು ಶ್ರೀಮಂತ ಭೂ ಮಾಲೀಕರಿಗೆ ಸೇರಿವೆ. ಈ ಮೊದಲು ಬೋರ್ವೆಲ್ ಹೊಂದಲು ಅವರಲ್ಲಷ್ಟೆ ಹಣವಿತ್ತು. ಬಡವರು ತಡವಾಗಿ ತಮ್ಮ ತಲೆ ಮೇಲೆತ್ತಲು ಆರಂಭಿಸಿದರು. ಇಂಥ ಬಡ ಜನರು ಲೈಸೆನ್ಸ್ ವ್ಯವಸ್ಥೆಯಡಿ ಹೊಸದಾಗಿ ಬೋರ್ವೆಲ್ ಹೊಂದುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಶ್ರೀಮಂತರು ಅವ್ಯಾಹತವಾಗಿ ನೀರು ಹೊರತೆಗೆದುಕೊಳ್ಳುವುದನ್ನು ಮುಂದುವರಿಸಿದರೆ ಬಡವರು ಅಂತರ್ಜಲದ ಕೊರತೆಯ ನೆಪದಲ್ಲಿ ಭೂಮಿಯ ಸಂಪನ್ಮೂಲದಲ್ಲಿನ ತಮ್ಮ ಪಾಲಿನಿಂದ ವಂಚಿತಗೊಳ್ಳುವರು ಯಾರು ಮಿತಿಮೀರಿದ ಬಳಕೆಯಿಂದ ಅಭಾವವನ್ನು ಸೃಷ್ಟಿಸಿದರೋ ಅವರು ಮತ್ತಷ್ಟು ನೀರು ಬಳಸುವುದನ್ನು ಮುಂದುವರಿಸಿದರೆ ಮೊದಲಿನಿಂದಲೂ ವಂಚಿತರಾದವರೂ ಮುಂದೆಯೂ ನೀರಿಲ್ಲದವರಾಗುತ್ತಾರೆ.
ಕೊರೆಯಿಸಲು ಆಳ ಕಡ್ಡಾಯಗೊಳಿಸಲಿ: ಈ ಉದ್ದೆಶದಿಂದಾಗಿ ಬಡವರು ಎಂದೆಂದಿಗೂ ಬಡವರಾಗಿಯೇ ಉಳಿದುಕೊಳ್ಳಲಿದ್ದಾರೆ. ಲೈಸನ್ಸ್ ಮಾರ್ಗ ಆಯ್ದುಕೊಳ್ಳುವ ಬದಲಾಗಿ ಸರ್ಕಾರವೇ ಒಂದು ಪ್ರದೇಶದಲ್ಲಿ ಬೋರ್ವೆಲ್ ಕೊರೆಯುವುದರ ಗರಿಷ್ಠ ಆಳವನ್ನು ನಿಗದಿಪಡಿಸಲಿ. ಪರಿಸ್ಥಿತಿ ಹೇಗೆಯೇ ಇರಲಿ, ಪ್ರತಿ ಜಿಲ್ಲೆ, ಬ್ಲಾಕ್ ಇಲ್ಲವೇ ಕ್ಲಸ್ಟರ್ಗೂ ಅನುಕೂಲವಾಗುವ ಆಳವನ್ನು ಪ್ರಕಟಿಸುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸಬೇಕು. ಒಮ್ಮೆ ಸರ್ಕಾರ ಅನುಮತಿಸಿದ ಗರಿಷ್ಠ ಆಳ ನಿರ್ದಿಷ್ಟಪಡಿಸಿದಾಗ ಪ್ರತಿಯೊಬ್ಬರೂ ಆ ಆಳದವರೆಗೆ ಹೊಸ ಬೋರ್ವೆಲ್ ಕೊರೆಯಲು ಮುಕ್ತರಾಗುತ್ತಾರೆ. ಯಾವುದೇ ಲೈಸನ್ಸ್ ಬೇಕಾಗುವುದಿಲ್ಲ. ಆ ನಂತರ ಗ್ರಾಮಲೆಕ್ಕಿಗ ರೈತರಿಂದ ಹಣ ಹೀರುವುದಿಲ್ಲ. ತಡವಾಗಿ ಸ್ಥಿತಿವಂತರಾದ ಬಡವರು ಬದುಕಿಕೊಳ್ಳುತ್ತಾರೆ. ಜತೆಗೆ ಅಂತರ್ಜಲ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎನ್ನವುದು ಭೂಗರ್ಭ ತಜ್ಞರ ಅಭಿಮತ.
- ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

