ಗದಗ

ದೌರ್ಜನ್ಯದ ವಿರುದ್ಧ ಬೆಲ್ಚಿ ಹೋರಾಟದ ಅಸ್ತ್ರ: ನಾಗರಕಟ್ಟಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 21
ಸಿಜಿಕೆಯವರ ಬೆಲ್ಚಿ ನಾಯಕ ದೌರ್ಜನ್ಯದ ವಿರುದ್ಧ ಹೋರಾಡುವ ಒಂದು ಅಸ್ತ್ರವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಹೇಳಿದರು.
ಅವರು ಬುಧವಾರ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜರುಗಿದ ಸಿಜಿಕೆಯವರ ಸಂಸ ವು ಸಿಜಿಕೆ ರಂಗ ಹುಡುಕಾಟ 65 ದಿನಗಳು 200 ಪ್ರದರ್ಶನಗಳು ಎಂಬ ಕಾರ್ಯಕ್ರಮದ ಅಡಿಯಲ್ಲಿ ಬೆಲ್ಚಿ ಎಂಬ ಬೀದಿ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮೀನುದಾರರ ದೌರ್ಜನ್ಯದ ವಿರುದ್ಧದ ಹೊರಾಟಕ್ಕೆ ಮುಂಚಿನಿಂದಲೂ ಆಡಳಿತಶಾಯಿ ಹಾಗೂ ರಾಜಕೀಯದ ಬೆಂಬಲ ಇರುವುದು ದುರಂತದ ವಿಷಯ. ಮಾನವನ ಹಕ್ಕುಗಳನ್ನು ದಮನ ಮಾಡಿ ತಮ್ಮ ಸ್ವಾರ್ಥಕ್ಕೆ ಜನಸಾಮಾನ್ಯರನ್ನು ಶೋಷಿಸುವದು ಅಮಾನವಿಯ. ಈ ನಿಟ್ಟಿನಲ್ಲಿ ಬಿಹಾರದ ಬೆಲ್ಚಿ ಎಂಬಲ್ಲಿ ನಡೆದ ಘಟನೆಯೇ ಸಾಕ್ಷಿ. ಧನಿಕರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ತಮ್ಮ ಜೀವಗಳನ್ನೆ ಬಲಿ ಕೊಟ್ಟ ಜನರ ಕಥೆ ಆಧಾರರಿತ ಸಿಜಿಕೆ ಯವರ ಬೆಲ್ಚಿ ಎಂಬ ಬೀದಿ ನಾಟಕ ಅದ್ಭುತವಾಗಿದೆ. ಇದು ಭಾರತಿಯರ ಜನಮಾನಸದಲ್ಲಿ ದೌರ್ಜನ್ಯದ ಕುರಿತು ಮತ್ತೆ ನೆನಪು ಮಾಡುವಲ್ಲಿ ಸಂಸ ತಂಡವು ಯಶಸ್ವಿಯಾಗಿದೆ ಎಂದರು.
ಲಕ್ಕುಂಡಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ನಂದಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಗ್ರಾಪಂ ಸದಸ್ಯೆ ರೇಣವ್ವ ಮುಳ್ಳಾಳ, ಕರಿಬಸಪ್ಪ ಕರಿಯಲ್ಲಪ್ಪನವರ, ಶೇಖರಯ್ಯ ಗಂಧದ, ದಸ್ತಗೀರಸಾಬ ಮುಲ್ಲಾ, ಹನುಮಂತಪ್ಪ ಹಳ್ಯಾಳ, ಕುಬೇರಪ್ಪ ಕಮ್ಮಾರ, ಪ್ರಕಾಶ ಅರಹುಣಸಿ, ರುದ್ರಪ್ಪ ಮುಸಕಿನಭಾವಿ ಉಪಸ್ಥಿತರಿದ್ದರು.
ಪಂಚವಟಿ ಪ್ರತಿಷ್ಠಾನದ ಮರುಳಸಿದ್ದಪ್ಪ ದೊಡ್ಡಮನಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.