ಗದಗ

ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ: ಜಯಶ್ರೀ

Published On :

ಲಕ್ಷ್ಮೇಶ್ವರ: ಬಿಡುವಿನ ವೇಳೆಯ ಸದುಪಯೋಗದ ಜತೆಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಬೇಸಿಗೆ ಶಿಬಿರಗಳು ನಡೆಯುತ್ತಿರುವುದರಿಂದ ಮಕ್ಕಳ ಸೃಜನಶೀಲತೆ ವಿಕಾಸಕ್ಕೆ ಅನುಕೂಲವಾಗುತ್ತದೆ ಎಂದು ಸಮನ್ವಯಾಧಿಕಾರಿ ಜಯಶ್ರೀ ಗುಡಿ ತಿಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕಲರವ ಮಕ್ಕಳ ಸಂಸ್ಥೆ, ಮಕ್ಕಳ ರಕ್ಷಣಾ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿ ಶಿರಹಟ್ಟಿ ಹಾಗೂ ಸೃಜನ ಬಳಗ ಲಕ್ಷ್ಮೇಶ್ವರ ಆಶ್ರಯದಲ್ಲಿ ಪಟ್ಟಣದ ಸೃಜನ್ ಬಳಗದಲ್ಲಿ ಚಿಣ್ಣರ ಕಲರವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಕಲರವ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಅಕಾಡೆಮಿಯ ಎನ್.ಬಿ. ನಾಯಕ ಮಾತನಾಡಿ, ನಾಡಿನ ಮಕ್ಕಳಿಗಾಗಿ ಸಮರ್ಪಿತವಾಗಿರುವ ಅಕಾಡೆಮಿ ಹಲವಾರು ಕಾರ್ಯಕ್ರಮಗಳ ಮೂಲಕ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ಇಲ್ಲಿ ನಡೆದ ಶಿಬಿರ ವಿಶಿಷ್ಟವಾದದ್ದು ಎಂದರು.
ಕಲರವ ಬಳಗದ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಅಧೀಕ್ಷಕಿ ಸುಲೋಚನಾ, ಸಂಪನ್ಮೂಲ ವ್ಯಕ್ತಿ ರವಿ ದೇವರಡ್ಡಿ, ಬಸವರಾಜ ನೆಲಜೇರಿ, ಮಧುಕೇಶ ಯರ್ಲಗಟ್ಟಿ, ಶಿಕ್ಷಕಿ ಡಿ.ಎಫ್. ಪಾಟೀಲ ಇತರರಿದ್ದರು.
ರವಿ ದೇವರಡ್ಡಿ ಅವರಿಂದ ಪವಾಡ ಬಯಲು ಕಾರ್ಯಕ್ರಮ ಜರುಗಿತು. ನಂತರ ಮಕ್ಕಳಿಂದ ಸೊನ್ನೆಯ ಸಮರ್ಥ ನಾಯಕ ಎಂಬ ನಾಟಕ ಅಭಿನಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.