ಗದಗ

ಪ್ರಗತಿ ಪಥದತ್ತ ಗ್ರಾಮಾಭಿವೃದ್ಧಿ ಯೋಜನೆ

Published On :

ಗದಗ: ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಎಂಬ ಧ್ಯೇಯಘೋಷದೊಂದಿಗೆ 30 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿ ಪಥದತ್ತ ಮುನ್ನುಗ್ಗುತ್ತಿದ್ದು, ಅದರಂತೆ ಕಳೆದ ಸಾಲಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಮುಟ್ಟಿಸುವ ಕಾರ್ಯ ಯಶಸ್ವಿಯಾಗಿದ್ದು, ಪ್ರಸಕ್ತ 2014-15ನೇ ಸಾಲಿಗೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
2013-14 ಯೋಜನೆಗಳು: ಜಿಲ್ಲೆಯಲ್ಲಿರುವ ಒಟ್ಟು 3 ಯೋಜನಾ ಕಚೇರಿಗಳು. 369 ಒಟ್ಟು ಪ್ರಗತಿ ಬಂಧು ಸಂಘಗಳು, 8587 ಸ್ವ-ಸಹಾಯ ಸಂಘ ಸೇರಿದಂತೆ ಒಟ್ಟು 8956 ಸಂಘಗಳ 100598 ಸದಸ್ಯರು, 330 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ಕೃಷಿ, ಕೃಷಿಯೇತರ ಚಟುವಟಿಕೆಗೆ ರು. 28.36 ಕೋಟಿ ವಿತರಿಸಲಾಗಿದೆ. ತರಬೇತಿ, ಮಾಹಿತಿ ಕಾರ್ಯಕ್ರಮಗಳು (ಕೃಷಿ, ಹೈನುಗಾರಿಕೆ, ಸ್ವ-ಉದ್ಯೋಗ, ಇತ್ಯಾದಿ) 384 ತರಬೇತಿಯಲ್ಲಿ 15258 ಜನ ಭಾಗವಹಿಸಿ ತರಬೇತಿ ಸದುಪಯೋಗ ಪಡೆದುಕೊಂಡಿದ್ದಾರೆ.
ಒಕ್ಕೂಟಗಳ ರಚನೆ, ಕೃಷಿ ಅಭಿವೃದ್ಧಿ ಕಾರ್ಯಕ್ರಮ, ಹೈನುಗಾರಿಕೆ, ಕೃಷಿ ಮಾಹಿತಿ, ತರಬೇತಿ ಶಿಬಿರಗಳು, ವಿಶೇಷ ಕೃಷಿ ಅಧ್ಯಯನ ಪ್ರವಾಸ, ಕೃಷಿ ಉತ್ಸವ, ಜನಜಾಗೃತಿ ಕಾರ್ಯಕ್ರಮ. ವಿಶೇಷ ಸ್ವಚ್ಛತಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ, ಜೀವನ ಮಧುರ ಕಾರ್ಯಕ್ರಮ, ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಿದಂತೆ ಇನ್ನೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ಹಮ್ಮಿಕೊಂಡು ಜನರಿಗೆ ಮುಟ್ಟಿಸುವ ಕಾರ್ಯ ಯಶಸ್ವಿಯಾಗಿವೆ.
2014-15ನೇ ಸಾಲಿನ ಯೋಜನೆಗಳು: 2015ರ ಮಾರ್ಚ್ ಅಂತ್ಯಕ್ಕೆ 8402 ಪ್ರಗತಿಬಂಧು ಸ್ವ-ಸಹಾಯ ಸಂಘಗಳು ಚಾಲ್ತಿ. ಬಡ ಕುಟುಂಬಗಳಿಗೆ ರು. 48 ಕೋಟಿ ಸಾಲ ಮೂಲಕ ವಿತರಿಸಲಾಗುವ ಪ್ರಗತಿನಿಧಿ, 1500 ಜಾನುವಾರುಗಳಿಗ ವಿಮಾ ಪಾಲಿಸಿ ಮಾಡಲಾಗುವುದು. 2500 ರಾಷ್ಟ್ರೀಯ ಪಿಂಚಣಿ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೃಷಿ, ಕೃಷಿಯೇತರ ಕಾರ್ಯಕ್ರಮವನ್ನು 11,190 ಕುಟುಂಬಗಳಲ್ಲಿ 1,155 ಎಕರೆಗಳಲ್ಲಿ ಅನುಷ್ಠಾನ ಮಾಡಲಾಗುವುದು. ಫಲಾನುಭವಿಗಳಿಗೆ ತರಬೇತಿ, ಪ್ರಾತ್ಯಕ್ಷಿಕೆ, ಶಾಲೆಗಳಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ, ನಾಗರಿಕ ಪ್ರಜ್ಞಾ ಅಭಿಯಾನದ 565 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ.
48 ಕೋಟಿ ಪ್ರಗತಿನಿಧಿ ನೀಡುವುದರ ಮೂಲಕ ಕೃಷಿ, ಹೈನುಗಾರಿಕೆ, ಸ್ವ-ಉದ್ಯೋಗ, ಮನೆ ರಿಪೇರಿ, ಶೌಚಾಲಯ, ವಿದ್ಯುತ್ ಸಂಪರ್ಕ, ಗೊಬ್ಬರ ಅನಿಲ ಸ್ಥಾವರ ಕುಟುಂಬಗಳಲ್ಲಿ, ಸೋಲಾರ್ ದೀಪ ಇತ್ಯಾದಿಗಳನ್ನು 10,800 ಕುಟುಂಬಗಳಲ್ಲಿ ಮಾಡಿಸುವ ಗುರಿ ಹೊಂದಲಾಗಿದೆ. ಮಾಸಾಶನವನ್ನು 100 ಕುಟುಂಬಗಳಿಗೆ ರು. 10 ಲಕ್ಷ ಅನುದಾನ ವಿತರಿಸುವ ಗುರಿ ಹೊಂದಲಾಗಿದೆ. ಕೃಷಿ, ಕೃಷಿಯೇತರ ಕಾರ್ಯಕ್ರಮಗಳಿಗೆ, ನೀರಾವರಿ ಕಾರ್ಯಕ್ರಮಗಳಿಗೆ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳಿಗೆ 60 ಲಕ್ಷ ಅನುದಾನ ಖರ್ಚು ಮಾಡಲಾಗುವುದು.
ಜಿಲ್ಲೆಯಲ್ಲಿ 5 ಹೊಸ ಶುದ್ಧಗಂಗಾ ಘಟಕಗಳನ್ನು ಪ್ರಾರಂಭಿಸಲಾಗುವುದು. 300 ವಿಶೇಷ ಸ್ವಚ್ಛತಾ ಕಾರ್ಯಕ್ರಮಗಳು ನಡೆಸಲಾಗುವುದು. 3 ಕೃಷಿ ಅಧ್ಯಯನ ರಾಜ್ಯ ಪ್ರವಾಸ ನಡೆಸಲಾಗುವುದು. ಕೃಷಿ ಮತ್ತು ಸ್ವ-ಉದ್ಯೋಗ ಕುರಿತಾಗಿ 51 ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮಗಳನ್ನು ನಡೆಸಲಾಗುವುದು. 3 ಸಾಧನಾ ಸಮಾವೇಶಗಳನ್ನು ನಡೆಸಲಾಗುವುದು. 5 ಸಾವಿರ ಶೌಚಾಲಯ ರಚನೆಗಳ ಗುರಿ ಹೊಂದಲಾಗಿದೆ. 6 ಮಧ್ಯವರ್ಜನ ಶಿಬಿರ ನಡೆಸಲಾಗುವುದು ಎಂದರು.ಹೈದ್ರಾಬಾದ್ ಕರ್ನಾಟಕದ ಪ್ರಾದೇಶಿಕ ನಿರ್ದೇಶಕ ಬೂದಪ್ಪಗೌಡ, ಜಿಲ್ಲೆಯ ಯೋಜನಾಧಿಕಾರಿ ದಿವಾಕರ ಕೆ, ಸಂಜೀವ ನಾಯ್ಕ, ಕೃಷ್ಣ ಟಿ. ಮಹೇಶ ಎಸ್. ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
---
ಬಾಲೆಹೊಸೂರು ದಿಂಗಾಲೇಶ್ವರ ಮಠದಲ್ಲಿ ಇಂದು ಹೆಲಿಕಾಪ್ಟರ್ ಮೂಲಕ ಫುಷ್ಪವೃಷ್ಟಿ
ಲಕ್ಷ್ಮೇಶ್ವರ: ಸಮೀಪದ ಬಾಲೆಹೊಸೂರಿನಲ್ಲಿ ನೂತನ ದಿಂಗಾಲೇಶ್ವರಮಠದ ಲೋಕಾರ್ಪಣೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ 3ನೇ ದಿನವಾದ ಮೇ 25ರಂದು ಬೆಳಗ್ಗೆ 8.30ಕ್ಕೆ 5001 ಮುತ್ತೈದೆಯರಿಗೆ ಉಡಿ ತುಂಬುವ ಮತ್ತು ಹೆಲಿಕಾಪ್ಟರ್ ಮೂಲಕ ಪುಷ್ಫವೃಷ್ಟಿ ಕಾರ್ಯಕ್ರಮ ಸಿರಿಗೆರೆಯ ತರಳುಬಾಳು ಬ್ರಹನ್ಮಮಠದ ಡಾ. ಶಿವಮೂರ್ತಿ ಶಿವಾಚಾರ್ಯರು, ಸುತ್ತೂರು ಸಂಸ್ಥಾನ ಮಠದ ಜ. ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಚಿತ್ರದುರ್ಗ ಮುರಘಾಮಠದ ಡಾ. ಜ. ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು, ಶಿರಹಟ್ಟಿ ಸಂಸ್ಥಾನ ಮಠದ ಶ್ರೀಗಳು, ಕೊಪ್ಪಳ ಗವಿಮಠದ ಶ್ರೀಗಳು, ಹರಿಹರದ ಪಂಚಮಸಾಲಿ ಮಠದ ಶ್ರೀಗಳು, ತುಮಕೂರು ಸಿದ್ದಗಂಗಾ ಕ್ಷೇತ್ರದ ಕಿರಿಯ ಶ್ರೀಗಳು ಸಾನ್ನಿಧ್ಯದಲ್ಲಿ ಜರುಗಲಿದೆ. ಉಡಿ ತುಂಬುವ ಕಾರ್ಯಕ್ರಮವನ್ನು ಹರಿದ್ವಾರದ ಪತಂಜಲಿ ಯೋಗಪೀಠದ ಬಾಬಾ ರಾಮದೇವ್ ಹಾಗೂ ಇನ್ಫೋಶಿಸ್‌ನ ಡಾ. ಸುಧಾ ಮೂರ್ತಿ ನೆರವೇರಿಸಲಿದ್ದಾರೆ. ಇದೇ ಸಂದರ್ಭ ದಾಸೋಹ ಭವನ ಉದ್ಘಾಟಿಸಲಾಗುವುದು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ತೋಟಗಾರಿಕಾ ಹಾಗೂ ಮಾರುಕಟ್ಟೆ ಸಚಿವ ಶಾಮನೂರ ಶಿವಶಂಕರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಚಿವ ಎಚ್.ಎಸ್. ಮಹಾದೇವಪ್ರಸಾದ, ಎಚ್.ಸಿ. ಮಹಾದೇವಪ್ಪ, ಬಾಬುರಾವ್ ಚಿಂಚನಸೂರ, ಸತೀಶ ಜಾರಕಿಹೊಳಿ, ಉಮಾಶ್ರೀ, ಶಾಸಕ ರಾಮಕೃಷ್ಣ ದೊಡ್ಡಮನಿ, ಬಸವರಾಜ ಶಿವಣ್ಣವರ, ವಿಪ ಸದಸ್ಯರಾದ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ ಆಗಮಿಸಲಿದ್ದು, ಮಾಜಿ ಶಾಸಕ ಎಸ್.ಎನ್. ಪಾಟೀಲ, ಗಂಗಣ್ಣ ಮಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಆಗಮಿಸುವರು. ವಿಜಯ ಸಂಕೇಶ್ವರ, ಅಶೋಕ ಖೇಣಿ, ಶಾಸಕ ಸಂತೋಷ ಲಾಡ್‌ರನ್ನು ಸನ್ಮಾನಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.