ಮೋಟ್ನಳ್ಳಿ: ಅನೇಕರು ಕೆಜೆಪಿಗೆ ಪಕ್ಷಾಂತರ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಮೋಟ್ನಳ್ಳಿ ಗ್ರಾಮದಲ್ಲಿ ಕೆಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ನೇತೃತ್ವದಲ್ಲಿ ಕೆಜೆಪಿ ಸೇರ್ಪಡೆಯಾದರು. ಕೊಟಗೇರಾ ಗ್ರಾಮದ ಕೋಲಿ ಸಮಾಜ ಅಧ್ಯಕ್ಷ ಸಾಬಣ್ಣ ತೆಳಗಂಡಿ, ಮೋಟ್ನಳ್ಳಿ ಗ್ರಾಮದ ಜಗದೇವಪ್ಪ ನಾಡೆಕರ್, ನಿಂಗಪ್ಪ ತಳವಾರ, ರಾಮು ನಾಯಕ ಸೇರಿದಂತೆ ಹತ್ತಾರು ಕಾರ್ಯಕರ್ತರು ಕೆಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸಿದ್ದಪ್ಪ ಹೊಟ್ಟಿ, ವೀರಣ್ಣ ಸಾಹು ಕೊಟಗೇರಾ, ದೇವಿಂದ್ರಪ್ಪ ಸೈದಾಪುರ, ರಾಮಲಿಂಗಪ್ಪ ಯರಗೋಳ, ಗುರುಮೂರ್ತಿ, ಬಸವರಾಜ ಮೋಟ್ನಳ್ಳಿ, ಶರಣಗೌಡ ಮಾಲಿಪಾಟೀಲ್ ಇದ್ದರು.
'ಎನ್ನೆಸ್ಸೆಸ್ನಿಂದ ಶಿಸ್ತು, ಸಂಯಮ'
ಯಾದಗಿರಿ: ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ತಾಳ್ಮೆಗಳನ್ನು ಕಲಿಸಿಕೊಡುತ್ತದೆ. ಸಮಾಜದಲ್ಲಿ ಸಮಾನತೆ ಭಾವದಿಂದ ಬದುಕುವ ದಾರಿಯನ್ನು ಇದು ತೋರಿಸುತ್ತದೆ ಎಂದು ಗುರುಮಠಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಭೀಮರಾಯ ಹೊಸಮನಿ ಹೇಳಿದರು. ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾ ಧೈರ್ಯ, ಸಾಹಸಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದರು. ಶಿಬಿರದ ಮೂಲಕ ಕೈಗೊಂಡ ಸೇವೆಯು ಜೀವನದುದ್ದಕ್ಕೂ ಪರಿಪಾಲಿಸಿದರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು. ಪ್ರಾಚಾರ್ಯ ರಾಜಪ್ಪ ಕೊನಿಮನಿ ಮಾತನಾಡಿ, ವಿದ್ಯಾರ್ಥಿಗಳು ಇತಿಹಾಸದ ಮಹಾ ಪುರುಷರ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪ್ರಾಮಾಣಿಕ, ನಿಷ್ಠೆಯಿಂದ ಕೈಗೊಂಡ ಸೇವೆ ಸಮಾಜಕ್ಕೆ ದೇಶಕ್ಕೆ ಸಮರ್ಪಿತವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ, ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿ ಜೀವನ ಹಾಳುಮಾಡಿಕೊಳ್ಳದೇ ಉತ್ತಮವಾಗಿ ಅಧ್ಯಯನ ಮಾಡಿದರೆ ಶಾಶ್ವತ ಸುಖ ಪ್ರಾಪ್ತವಾಗುತ್ತದೆ ಎಂದರು. ಶಿಬಿರಾರ್ಥಿಗಳಾದ ರೇಣುಕಾ, ಬನ್ನಮ್ಮ ಮತ್ತು ಗೀತಾ ಹಾಗೂ ಬಸವರಾಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಣಮಂತ ದಾಸನ್ ಸ್ವಾಗತಿಸಿ, ವರದಿ ವಾಚನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

