'ಕನಸು ಸಾಕಾರಕ್ಕೆ ಅವಕಾಶ ನೀಡಿ'
ಕನ್ನಡಪ್ರಭ ವಾರ್ತೆ, ಆಳಂದ, ಏ.2
ರಾಜಕೀಯ ಬದಲಾವಣೆ ಹಾಗೂ ಅಭಿವೃದ್ಧಿಯಿಂದ ವಂಚಿತಗೊಂಡ ತಾಲೂಕಿನ ಸಮೃದ್ಧಿಯ ಕನಸು ಕಂಡಿರುವ ನನಗೆ ಸಹಕಾರಗೊಳಿಸಲು ಮತದಾರರು ಅವಕಾಶ ನೀಡಬೇಕು ಎಂದು ಮಾಜಿ ಉಪಸಭಾಪತಿ, ಕೆಜೆಪಿ ರಾಜ್ಯ ವಕ್ತಾರ ಬಿ.ಆರ್. ಪಾಟೀಲ್ ಅವರು ಮತದಾರಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಕೆಜೆಪಿ ಯುವ ಘಟಕದಿಂದ ಸೋಮವಾರ ತಮಗೆ ಏರ್ಪಡಿಸಿದ್ದ ಅಭಿನಂದನಾ ಸ್ವೀಕರಿಸಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದರು.
ಸಹಕಾರಿ ಕೆಲಸ: ಕಡಿಮೆ ಅಧಿಕಾರವಧಿಯಲ್ಲಿ ದೂರದೃಷ್ಟಿ ಕೆಲಸಗಳಾಗಿವೆ. ಎಲ್ಲ, ಧರ್ಮ, ಜಾತಿಯ ಜನರು ಸಹಬಾಳ್ವೆಯ ವಾತಾವರಣ ಮೂಡಿಸಿ ಕಷ್ಟದಲ್ಲಿರುವ ಜನರ ಬದುಕಿಗೆ ದಾರಿಮಾಡಿಕೊಡಲು ಈ ಚುನಾವಣೆ ಸಕಾಲವಾಗಿದ್ದು, ಯಡಿಯೂರಪ್ಪ ಅವರು 350 ಕೋಟಿ ಅಲ್ಪಸಂಖ್ಯಾತರಿಗೆ ನೀಡಿದ್ದು ಅಲ್ಲದೆ ಎಲ್ಲ ವರ್ಗದ ಜನರಿಗೆ ಯಾರು ಮಾಡದ ಸಹಕಾರಿ ಕೆಲಸವನ್ನು ಮಾಡಿದ್ದಾರೆ ಎಂದರು.
ಪಟ್ಟಣದಲ್ಲೂ ತಂಡೋಪತಂಡವಾಗಿ ಮುಸ್ಲಿಂ ಬಾಂಧವರು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಆನೆ ಬಲಬಂದಂತಾಗಿದೆ. ಪುರಸಭೆಗೆ 10 ಕೋಟಿ ಅನುದಾನ ಬಂದರು ಅಭಿವೃದ್ಧಿ ಕೆಲಸ ಮಾಡದೆ ಶಾಸಕರು ಮತ್ತವರ ಸಂಬಂಧಿಕರೆ ಲೂಟಿ ಮಾಡಿದ್ದಾರೆಂದ ಅವರು, ಇಂಥ ಶಕ್ತಿಯ ಮಟ್ಟಹಾಕಿ ಜನಸೇವೆ ಮಾಡಲು ಅಧಿಕಾರ ಬೇಡುತ್ತಿದ್ದೇನೆ ಮತದಾರರು ತಮಗೆ ಆಶೀರ್ವದಿಸಬೇಕು ಎಂದರು.
ಮನವಿ: ಕೆಜೆಪಿ ರಾಜ್ಯ ಉಪಾಧ್ಯಕ್ಷ ಎಲ್.ಎಸ್. ರಾಠೋಡ, ಯುವ ಕಾರ್ಯದರ್ಶಿ ಶರಣು ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ತಾಲೂಕು ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ್, ಯುವ ಅಧ್ಯಕ್ಷ ಬಾಬಾಸಾಬ್ ಪಾಟೀಲ್, ಎಸಿಎಸ್ಟಿ ಘಟಕದ ಅಧ್ಯಕ್ಷ ಭೋಜರಾಜ ಜುಭ್ರೆ, ವಿಠ್ಠಲ್ ಶಿಂಧೆ, ರಮ್ಮು ಅನ್ಸಾರಿ, ಬಾಬುರಾವ ಅರುಣೋದಯ, ಭೀಮಾಶಂಕರ ಹಳಿಮನಿ, ಅಹ್ಮದ್ ಅಲಿ ಚುಲಬುಲ್, ರಮ್ಮು ಅನ್ಸಾರಿ, ಸತ್ತಾರ ಮುರುಮಕರ್, ಪುರಸಭೆ ಸದಸ್ಯ ಮಲ್ಲಪ್ಪ ಹತ್ತರಕಿ ಇತರರು ಮಾತನಾಡಿ, ಕೆಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಲು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

