ಕೆಂಭಾವಿ; ಚಾಲುಕ್ಯರ ಕಾಲದ ಅಪರೂಪದ ವಿಗ್ರಹ ಪತ್ತೆ
ಕನ್ನಡಪ್ರಭ ವಾರ್ತೆ, ಕೆಂಭಾವಿ, ಏ.5
ಪಟ್ಟಣದ ಲಿಂಗನಗೌಡ ಮಾಲಿಪಾಟೀಲ ಅವರ ಬಾವಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಪುರಾತನ ವಿಗ್ರಹ ಪತ್ತೆಯಾಗಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಮೂರು ದೇವತೆಗಳ ದೊಡ್ಡಗಾತ್ರದ ಈ ಶಿಲೆಯು ನೋಡಲು ತುಂಬಾ ಪುರಾತವೆಂದು ಕಾಣುತ್ತದೆ. ಪಟ್ಟಣಕ್ಕೆ ತನ್ನದೇ ಆದ ಇತಿಹಾಸವಿದ್ದು, ಚಾಲುಕ್ಯರ ಕಾಲದಲ್ಲಿ ಸುಪ್ರಸಿದ್ಧ ಅಗ್ರಹಾರವಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಅಲ್ಲದೆ, ಚಂದಿಮರಸನೆಂಬ ರಾಜನು ಇಲ್ಲಿ ಆಡಳಿತ ನಡೆಸಿದ ಬಗ್ಗೆಯೂ ಕುರುಹುಗಳು ಇಲ್ಲಿ ದೊರೆತಿವೆ. ಇವೆಲ್ಲವನ್ನು ಗಮನಿಸಿದರೆ ಈ ಶಿಲೆಯು ಚಾಲುಕ್ಯರ ಕಾಲದ್ದಾಗಿರಬಹುದು ಎಂದು ಊಹಿಸಲಾಗಿದೆ.
ಸಪ್ತಮಾತ್ರಿಕೆಗಳು?: ಈ ಶಿಲಾಶಾಸನ ಸಪ್ತಮಾತ್ರಿಕೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಆದರೆ ಶಿಲೆಯ ಒಂದೇ ಕಲ್ಲಿನಲ್ಲಿ ನಾಲ್ಕು ದೇವತೆಗಳು ಹಾಗೂ ಒಂದು ಗಣಪತಿ ವಿಗ್ರಹ ಇರುವುದರಿಂದ ಇದು ಸಪ್ತಮಾತ್ರಿಕೆ ಇರಬಹುದು ಎಂದು ಸಂಶೋಧಕ ಎಂ.ಎಂ. ಕಲಬುರ್ಗಿ ಹೇಳುತ್ತಾರೆ. ಇದರಲ್ಲಿನ ಇನ್ನುಳಿದ ಎರಡು ವಿಗ್ರಹಗಳು ಭಿನ್ನವಾಗಿರಬಹುದೆಂದು ಊಹಿಸಿದ್ದಾರೆ.
ಪಟ್ಟಣದ ಮಧ್ಯದಲ್ಲಿರುವ ಲಿಂಗನಗೌಡ ಮಾಲಿಪಾಟೀಲರ ಮನೆಯಲ್ಲಿರುವ ಪುರಾತ ಬಾವಿಯನ್ನು ಸ್ವಚ್ಛಗೊಳಿಸಲಾಗುತ್ತಿದ್ದಾಗ ಶುಕ್ರವಾರ ಈ ಶಿಲಾದ ಮೂರ್ತಿ ದೊರಕಿದೆ. ಈ ಕೆಲ ತಿಂಗಳ ಹಿಂದೆ ಭೋಗೇಶ್ವರ ದೇವಸ್ಥಾನದಲ್ಲಿ ಆರು ಅಡಿ ಎತ್ತರದ ಲಿಂಗವೊಂದು ಪತ್ತೆಯಾಗಿತ್ತು. ಪುರಾತನ ದೇವಾಲಯವೆಂದೇ ಹೆಸರಾಗಿರುವ ರೇವಣಸಿದ್ದೇಶ್ವರ ದೇವಸ್ಥನವೂ ಇಲ್ಲಿದ್ದು, ಇಲ್ಲಿಯ ಇತಿಹಾಸವನ್ನು ಎತ್ತಿ ತೋರಿಸುತ್ತದೆ.
ಸಂಶೋಧನೆ ಅಗತ್ಯ: ಸಂಶೋಧನೆ ಕೈಗೊಂಡರೆ ಇನ್ನೂ ಮಾಹಿತಿ ದೊರಕಲಿದೆ ಎಂದು ಅನೇಕರು ಹೇಳುತ್ತಾರೆ. ಮೂರ್ತಿ ಪತ್ತೆಯಾಗಿರುವ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಜನ ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

