ಯಾದಗಿರಿ ಜನತೆ ಬದಲಾವಣೆ ಬಯಸ್ತಾರೆ: ಮುದ್ನಾಳ
ಕ.ಪ್ರ. ವಾರ್ತೆ, ಯಾದಗಿರಿ, ಏ.5
ಯಾದಗಿರಿ ಮತಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಹಾಲಿ ಶಾಸಕರ ವಿರೋಧಿ ಅಲೆ ಎಲ್ಲೆಡೆ ಬೀಸುತ್ತಿದ್ದು, ಮತಕ್ಷೇತ್ರದ ಅಭಿವೃದ್ಧಿ ಹಾಗೂ ಉಳಿವಿಗಾಗಿ ಬದಲಾವಣೆ ಅಗತ್ಯವಾಗಿದೆ ಎಂದು ಕೆಜೆಪಿ ಅಭ್ಯರ್ಥಿ ಡಾ. ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಸಕ ಡಾ. ಮಾಲಕರೆಡ್ಡಿ ವಿರುದ್ಧ ಹರಿಹಾಯ್ದರು. ಶಾಸಕ ಡಾ. ಎ.ಬಿ. ಮಾಲಕರಡ್ಡಿ ಅವರು ಬರೀ ಉತ್ಸಮೂರ್ತಿ ಇದ್ದಂತೆ. ಅಧಿಕಾರ ಮಾತ್ರ ಬೇರೆಯವರು ನಡೆಸುತ್ತಿದ್ದಾರೆ. ಇದನ್ನು ಅವರ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಯಾವುದೇ ಸಣ್ಣ ಕೆಲಸ ಆಗಬೇಕಿದ್ದರೂ ಗುಲ್ಬರ್ಗಕ್ಕೆ ಹೋಗಿ ಮಾಡಿಸಿಕೊಂಡು ಬರಬೇಕು. ಶಾಸಕರಿಗೆ ಅಧಿಕಾರ ಕೊಟ್ಟರೂ ಬೇರೆಯವರು ಅದನ್ನು ಚಲಾಯಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಹೀಗಿದ್ದ ಮೇಲೆ ಅವರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡಿ ತಪ್ಪು ಮಾಡಬಾರದೆಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಮಾಲಕರಡ್ಡಿ ವಿರೋಧಿ ಅಲೆ: ಶಾಸಕ ಡಾ. ಮಾಲಕರಡ್ಡಿ ವಿರೋಧಿ ಅಲೆ ಎಲ್ಲೆಡೆ ಇದೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಇವುಗಳತ್ತ ಗಮನಹರಿಸುವ ಬದಲಾಗಿ ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಮತ್ತು ಸಚಿವರಾಗಿ ಕೂಡ ಮಾಲಕರಡ್ಡಿ ಸಾಧನೆ ಶೂನ್ಯ. ಇದರಿಂದಾಗಿ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಬೇಸತ್ತು ಕೆಜೆಪಿಯತ್ತ ವಾಲುತ್ತಿದ್ದಾರೆ ಎಂದರು.
ಸಿದ್ಧಣ್ಣಗೌಡ ಕಾಡಂನೋರ್, ಖಂಡಪ್ಪ ದಾಸನ್, ಚಂದ್ರಶೇಖರಗೌಡ ಪಾಟೀಲ್, ಡಾ. ಶರಣರಡ್ಡಿ ಕೋಡ್ಲಾ, ಚೆನ್ನಾರೆಡ್ಡಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

