ಗುಲ್ಬರ್ಗಾ

ಪ್ರತಿಯೊಬ್ಬರಿಗೂ ಸಮಾಜದ ಕಳಕಳಿ ಇರಲಿ: ಬೆಳಮಗಿ

Published On :

ಗುಲ್ಬರ್ಗ: ಪ್ರತಿಯೊಬ್ಬರಿಗೂ ಸಮಾಜದ ಕಳಕಳಿ ಇರಬೇಕು. ಆವರಿಸಿರುವ ಕತ್ತಲೆ ಓಡಿಸಿ ಬೆಳಕು ಮೂಡಿಸುವ ಕಾರ್ಯ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ನಗರದ ಗುಡ್ಲಕ್ ಹೋಟೆಲ್ನಲ್ಲಿ ಜಿಲ್ಲಾ ಗೊಂಡ, ಕಾಡುಕುರುಬ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಾಂತೇಶ ಎಸ್. ಕೌಲಗಿ ಅವರು ಬರೆದ ಗೊಂಡ ಕಾಡು ಕುರುಬ ಪಕ್ಷಿ ನೋಟ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೊಂಡ ಕಾಡು ಕುರುಬ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ ಎಸ್. ಕೌಲಗಿ ಪ್ರಾಸ್ತಾವಿಕ ಮಾನತಾಡಿ, ಗೊಂಡ ಹಾಗೂ ಕಾಡುಕುರುಬ ಬೇರೆ ಅಲ್ಲ. ಇವೆರಡೂ ಒಂದೇ.
 ಆಗಿನ ಕಾಲದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಗೊಂಡಾರಣ್ಯ ಇತ್ತು. ಈ ಪ್ರದೇಶದಲ್ಲಿ ಕುರಿ ಕಾಯುವ ಜನರಿಗೆ ಗೊಂಡ ಕುರುಬರೆಂದು ಹೆಸರು ಬಂದಿತ್ತು ಎಂದು ಅವರು ವಿವರಿಸಿದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ರೇವಣಸಿದ್ದಪ್ಪ ಸಾತನೂರ, ದಿಲೀಪ ಆರ್. ಪಾಟೀಲ್, ಮಲ್ಲಿಕಾರ್ಜುನ ಪೂಜಾರಿ, ಪ್ರಭು ಎಸ್. ಜಮ್ಮಣ್ಣ, ಪುಂಡಲಿಕ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೇವೇಂದ್ರಪ್ಪ ನಾಯ್ಕೊಡಿ ಸ್ವಾಗತಿಸಿದರು. ಧರ್ಮವೀರ ಎಸ್. ಪಟ್ಟಣ ನಿರೂಪಿಸಿದರು. ಪದ್ಮರಾಜ ರಾಸಣಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.