ಗುಲ್ಬರ್ಗಾ

ಉಷಸ್ಸು ಕಾರ್ಯಕ್ರಮ

Published On :

ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಏ.10 ರಂದು ಸಂಜೆ 5.15ಕ್ಕೆ ಯುಗಾದಿಯ ಉಷಸ್ಸು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಾ. ಮ.ಗು. ಬಿರಾದಾರ ಅಧ್ಯಕ್ಷತೆ ವಹಿಸುವರು. ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಭಾರತಿ ಸಾಲಿಮಠದ ಲಕ್ಷ್ಮೀ ಶಂಕರ ಜೋಶಿ ಯುಗಾದಿಯ ಹಾಡು ಹಾಡಲಿದ್ದಾರೆ. ಕವಿತಾ ವಾಚನದಲ್ಲಿ ಪ್ರೊ. ವಸಂತ ಕುಷ್ಟಗಿ, ಡಾ. ಚೆನ್ನಣ್ಣ ವಾಲೀಕಾರ, ಡಾ. ಕಾಶೀನಾಥ ಅಂಬಲಗೆ, ಡಾ.ಬಸವರಾಜ ಸಬರದ, ಏ.ಕೆ. ರಾಮೇಶ್ವರ, ಪ್ರೊ. ಸೂಗಯ್ಯ ಹಿರೇಮಠ, ಡಾ. ಸ್ವಾಮಿರಾವ ಕುಲ್ಕರ್ಣಿ, ಎಸ್.ಪಿ. ಸುಳ್ಳದ್, ಡಾ. ಪ್ರಭು, ನೀಲಾ, ಭ್ಯಾಗ್ಯಲತಾ, ಶಂಕ್ರಯ್ಯ, ಪ್ರಭಾಕರ್, ಪ್ರಮೀಳಾ ಪಾಲ್ಗೊಳ್ಳಲಿದ್ದಾರೆ.
ಫಲಿತಾಂಶ ವಿಳಂಬ
ಗುಲ್ಬರ್ಗ: ಬಿ.ಇಡಿ ಫಲಿತಾಂಶ ವಿಳಂಬವಾಗಿರುವುದರಿಂದ ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯ ದ್ವಿತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬಿ.ಇಡಿ ದ್ವಿತೀಯ ಸೆಮಿಸ್ಟರ್ ಪರೀಕ್ಷೆ ನಡೆಸಿ ಮೂರು ತಿಂಗಳ ಕಳೆದರೂ ಮತ್ತು ಎಲ್ಲ ಪರೀಕ್ಷೆಗಳು ಮೌಲ್ಯಮಾಪನವಾದರೂ ಗುಲ್ಬರ್ಗ ವಿಶ್ವವಿದ್ಯಾಲಯ ತನ್ನ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಪರೀಕ್ಷೆ ಪ್ರಕಟಿಸದೇ ಹಿಂದೇಟು ಹಾಕುತ್ತಿರುವುದು ತುಂಬಾ ಬೇಸರ ತಂದಿದೆ ಎಂದು ವಿದ್ಯಾರ್ಥಿ ಡಿ.ವಿ. ಭೀಮಾಶಂಕರ ಪಾಣೇಗಾಂವ ತಿಳಿಸಿದ್ದಾರೆ.
ಇಂದಿನಿಂದ ಜಾತ್ರೆ
ಗುಲ್ಬರ್ಗ: ನಗರದ ಸಂಗತ್ರಾಸವಾಡಿಯ ಮಹಾಕಾಳಿಕಾದೇವಿಯ 57ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಏ.10ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ. ವಿಶ್ವಕರ್ಮ ಏಕದಂಡಗಿ ಮಠಾಧಿಪತಿ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
6 ಡಿಬಾರ್
ಗುಲ್ಬರ್ಗ: ಜಿಲ್ಲೆಯಲ್ಲಿ ಏ.9ರಂದು ನಡೆದ ಎಸ್‌ಎಸ್‌ಎಲ್‌ಸಿ ಹಿಂದಿ ವಿಷಯದ ಪರೀಕ್ಷಾ ಸಮಯದಲ್ಲಿ ನಕಲು ನಡೆಸಿದ್ದಕ್ಕಾಗಿ 6 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಈ ಪರೀಕ್ಷೆಗೆ ಒಟ್ಟು 34818 ವಿದ್ಯಾರ್ಥಿಗಳ ಪೈಕಿ 32874 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1944 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಸತೀಶಗೆ ಸ್ವಾಗತ
ಗುಲ್ಬರ್ಗ: ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲೆಯ ಉದ್ಯಮಿ ಹಾಗೂ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಸತೀಶ ಗುತ್ತೇದಾರ ಅವರಿಗೆ ಹಿಂದುಳಿದ ವರ್ಗದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಮಾದಾರ ಸ್ವಾಗತಿಸಿದ್ದಾರೆ.
ಜೆಡಿಎಸ್‌ಗೆ ಆಯ್ಕೆ
ಗುಲ್ಬರ್ಗ: ಜೆಡಿಎಸ್ ಎಸ್‌ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಆನಂದರಾಯ ವಿ. ಬಿಲಗುಂದಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್‌ನ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ಧಾರ್ಥ ಸಿ. ಡಾಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.