ಕೆಜೆಪಿ ಸುಳ್ಳು ಭರವಸೆ ನೀಡುವುದಿಲ್ಲ
ಕನ್ನಡಪ್ರಭ ವಾರ್ತೆ, ಬೀದರ್, ಏ. 9
ಬೇರೆ ಪಕ್ಷಗಳು ನೀಡುವಂತೆ ಸುಳ್ಳು ಭರವಸೆಗಳ ಪ್ರಣಾಳಿಕೆ ನಮ್ಮದಲ್ಲ. ನಮ್ಮದು (ಕೆಜೆಪಿ) ಭರವಸೆ ನೀಡಿ, ಕೆಲಸ ಮಾಡಿ ತೋರಿಸುವ ಪಕ್ಷ ಎಂದು ಕೆಜೆಪಿ ರಾಜ್ಯ ಉಪಾಧ್ಯಕ್ಷೆ, ಚಿತ್ರ ನಟಿ ಶೃತಿ ನುಡಿದರು.
ಬೀದರ್ನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನ ಹಾಗೂ ವೈಯಕ್ತಿಕ ಪ್ರಭಾವದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ವಿನಹ ಬಿಜೆಪಿಯಿಂದ ಅಲ್ಲ ಎಂದರು.
ಯಡಿಯೂರಪ್ಪ ಅವರು ಪಕ್ಷ ಬಿಟ್ಟ ಮೇಲೆ ಬಿಜೆಪಿ ಬೆಳಕು ಕಳೆದುಕೊಂಡು ಕತ್ತಲ್ಲಲ್ಲಿ ಇದೆ. ಬೇರೆ ಪಕ್ಷಗಳ ವೈಫಲ್ಯ, ಗೊಂದಲಗಳ ಬಗ್ಗೆ ಚರ್ಚೆ ಮಾಡಬೇಡಿ, ನಮ್ಮ ಪಕ್ಷ ಮಾಡಿದ ಸಾಧನೆ ಹಾಗೂ ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿ ಎಂದ ಅವರು, ಬೇರೆಯವರಿಗೆ ತೆಗಳುವುದಕ್ಕಿಂತ ನಮ್ಮ ಸಾಧನೆ ಬಗ್ಗೆ ಹೋಗಳುವುದು ಮುಖ್ಯ ಎಂದರು.
ಉತ್ತಮ ಬೆಂಬಲ: ಕೆಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಜಗದೀಶ್ ಹಿರೇಮನಿ ಮಾತನಾಡಿ, ಕರ್ನಾಟಕ ಜನತಾ ಪಕ್ಷ ಉದಯವಾದ ನಂತರ ರಾಜ್ಯದಲ್ಲಿ ಬಿಜೆಪಿ ಬರಿದಾಗುತ್ತಿದೆ. ಎಲ್ಲೆಡೆ ಕೆಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಖುರ್ಚಿಗಳ ಖಾಲಿ, ಖಾಲಿಯಾಗಿರುವುದನ್ನು ಕಂಡು ಬಿಜೆಪಿ ಮುಖಂಡರು ಭ್ರಮನಿರಸನಗೊಂಡು ಹೀನಾಯ ಸೋಲಿನ ಭೀತಿಯಲ್ಲಿದ್ದಾರೆ. ಕೆಜೆಪಿ ಶಕ್ತಿ ಏನಿದೇ ಎನ್ನುವುದು ಬರುವ ಚುನಾವಣೆಯಲ್ಲಿ ತಿಳಿಯುತ್ತದೆ ಎಂದರು.
ಪಣ ತೊಡಿ: ರಾಜ್ಯದ ಯುವಕರ ಹಾಗೂ ಜನರ ಆಧಾರದ ಮೇಲೆ ಯಡಿಯೂರಪ್ಪ ಅವರು ಪ್ರಾದೇಶಿಕ ಪಕ್ಷ ಕಟ್ಟಿದ್ದು ಮತ್ತೊಂದು ಬಾರಿ ಯಡಿಯೂರಪ್ಪ ಸಿಎಂ ಆಗುವುದನ್ನು ನೋಡಬೇಕಿದೆ. ಹೀಗಾಗಿ ಪಕ್ಷದ ಯುಕವರು ಹಗಲಿರುಳು ಶ್ರಮಿಸಿ ಅಭ್ಯರ್ಥಿಗಳ ಗೆಲವಿಗೆ ಪಣ ತೊಡಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಹಾಗೂ ಬೀದರ್ ಕ್ಷೇತ್ರದ ಅಭ್ಯರ್ಥಿ ಗುರುಪಾದಪ್ಪ ನಾಗಮಾರಪಳ್ಳಿ ಮಾತನಾಡಿ, ಯಡಿಯೂರಪ್ಪ ರಾಜ್ಯದ ಜನತೆ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಪಕ್ಷ ಕಟ್ಟಿದ್ದಾರೆಯೇ ಹೊರತು, ಬೇರೆಯವರು ಬರುತ್ತಾರೆ ಎಂದಲ್ಲ. ನಮ್ಮ ಪಕ್ಷಕ್ಕೆ ಜನರೇ ಜೀವಾಳ, ಯುವಕರೇ ಆಧಾರ ಎಂದರು. ಎಲ್ಲೆಡೆ ಕೆಜೆಪಿಯತ್ತ ಯುವಕರ ದಂಡೇ ಬರುತ್ತಿದೆ. ಜಿಲ್ಲೆಯ ಎಲ್ಲ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದರು.
ಕೆಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ ಕಣಜಿ, ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾರ ಅನೀಲಕುಮಾರ ಬೆಲ್ದಾರ್, ಝರಿಯಪ್ಪ ಮಮದಾಪುರೆ, ಬಸವರಾಜ ರಾಜೋಳೆ, ಶಶಿಕುಮಾರ ಪಾಟೀಲ್ ಸಂಗಮ್, ಅಶೋಕ ಕರಂಜಿ, ಸಂಗಮೇಶ ನಾಶೀಗಾರ, ಜಗದೀಶ್ ಬಿರಾದಾರ, ವಿಜಯಲಕ್ಷ್ಮೀ ಲಾಹೋರಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಲವರ ಸೇರ್ಪಡೆ: ವಿವಿಧ ಪಕ್ಷಗಳನ್ನು ತೊರೆದು ಹಲವಾರು ಮುಖಂಡರು ಕೆಜೆಪಿಗೆ ಸೇರ್ಪಡೆಯಾದರು. ಬಿಜೆಪಿಯ ಅರವಿಂದ ಪಾಟೀಲ್ ಚಿಲ್ಲರ್ಗಿ, ಭದ್ರಪ್ಪ ನಾರಾ, ಸಂತೋಷ ಚೊಂಡಿ, ಶಿವರಾಜ ನಾವದಗೇರಿ, ಸಂತೋಷ ಪಾಟೀಲ್ ಜ್ಯಾಂತಿ, ಸಂತೋಷ ಸೋರಾಳೆ, ದಿಲೀಪ ಧಬಾಲೆ, ಇಂದ್ರಜೀತ್ ಪಾಟೀಲ್, ಸಂಜು ಪಾಂಚಾಳ, ವೀರಶೆಟ್ಟಿ ಖ್ಯಾಮಾ ಸೇರಿದಂತೆ ಇತರರು ಪಕ್ಷಕ್ಕೆ ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

