ಗುಲ್ಬರ್ಗಾ

ರಾಜುಗೌಡ ಕೈ ಹಿಡಿದ ನೂರಾರು ಕಾರ್ಯಕರ್ತರು

Published On :

ಸುರಪುರ: ತಾಲೂಕಿನ ವಿವಿಧ ಗ್ರಾಮಗಳ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಮಾಜಿ ಸಚಿವ ರಾಜುಗೌಡ ನೇತೃತ್ವದಲ್ಲಿ ಜಾತ್ಯತೀತ ಜನತಾ ದಳಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜುಗೌಡ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಕುತಂತ್ರ ನೀತಿಯನ್ನು ಸವಾಲಾಗಿ ಸ್ವೀಕರಿಸುವ ದೆಸೆಯಲ್ಲಿ ಕ್ಷೇತ್ರದ ಹಲವಾರು ಗ್ರಾಮಗಳ ಯುವಕರು ಜೆಡಿಎಸ್‌ನತ್ತ ನೂರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ ಎಂದರು. ವಿಶ್ವಾಸ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಈ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಮಾರಣ್ಣನ ನೇತೃತ್ವದಲ್ಲಿ ರಾಜ್ಯದ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸುರಪುರ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸೇರ್ಪಡೆ: ದೇವಿಕೇರಿ ಗ್ರಾಮದ ಕನಕ ಯುವ ಸೇನೆಯ ಕಾರ್ಯಕರ್ತರಾದ ಶಂಬು ಶೆಟಿಗೇರಿ, ಮೈಲಪ್ಪ ಪುಜಾರಿ, ಪರಮಣ್ಣ ಪುಜಾರಿ, ಹೈಯಾಳಪ್ಪ ಪೂಜಾರಿ, ಶಿವು ಪೂಜಾರಿ, ಮರೆಪ್ಪ ಪೂಜಾರಿ, ಆನಂದ ಪೂಜಾರಿ, ನಿಂಗಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಪ್ರಕಾಶ ನಿಂಗಪ್ಪ ಪೂಜಾರಿ, ದೇವಪ್ಪ ಕಬಾಡಗೇರಾ, ನಿಂಗಪ್ಪ ತೋಟದ, ಬಸವರಾಜ ತೋಟದ, ರವಿ ತೋಟದ, ಶಿವಪ್ಪ ತೋಟದ, ಶಂಕರ ಕಬಾಡಗೇರಾ, ಈರಪ್ಪ ಶೆಟ್ಟಗೇರಿ, ಮಲ್ಲಪ್ಪ ಕುಂಬಾರಪೇಟೆ, ನಿಂಗಪ್ಪ ಹೂಸೂರು, ಮಾರ್ಥಂಡಪ್ಪ , ಖಂಡೆಪ್ಪ ಜಾರ್ಜಬಂಡಿ ಹಲವಾರು ಜನರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಹಾವಿನಾಳ ಗ್ರಾಮದ ಚನ್ನಪ್ಪ ಕಲ್ಮನಿ, ಮಾನಪ್ಪ ಜಂಬಲದಿನ್ನಿ, ಭೀಮಪ್ಪ, ಪ್ರವೀಣ, ರಾಚಣ್ಣ ಕಲ್ಮನಿ, ಪರಮಪ್ಪ, ಹಣಮಂತ ಜಂಬಲದಿನ್ನಿ, ರಾಮಪ್ಪ ಸೇರ್ಪಡೆಯಾದರು. ಜಾಲಿಬೆಂಚಿ ಗ್ರಾಮದ ಶರೀಫಸಾಬ್, ಮೈನುದ್ದೀನ್ ದಖನಿ, ಮಕಬಲ್, ರಾಮು, ಮಲ್ಕಪ್ಪ, ದೇವಿಂದ್ರಪ್ಪ, ನಬೀಲಾಲ್, ಮಲ್ಲಿಕಾರ್ಜುನ, ಶರಣು ಸಾಹು, ಚಂದ್ರಶೇಖರ, ಅಂಬ್ರೇಶ, ಮೈಲಾರಪ್ಪ ಕಟ್ಟಿಮನಿ, ಮಲ್ಲಪ್ಪ, ಸಿದ್ದಪ್ಪ, ಭೀಮಣ್ಣ ಬೂದ್ನೂರು, ಗ್ಯಾನೋಜಿ ಮರಾಠಿ, ಮಾನಪ್ಪ ಮಾವಿನಮಟ್ಟಿ ಇತರರು ಸೇರ್ಪಡೆಯಾದ ಪ್ರಮುಖರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.