ಗುಲ್ಬರ್ಗಾ

ಗುರಿ ಸಾಧನೆಗೆ ಶಿಸ್ತು, ಪರಿಶ್ರಮ ಅವಶ್ಯ: ಕೋರವಾರ

Published On :

ಕನ್ನಡಪ್ರಭ ವಾರ್ತೆ, ಚಿಂಚೋಳಿ, ಏ.12
ವಿದ್ಯಾರ್ಥಿಗಳು ದುಶ್ಚಟ ಮತ್ತು ಮಾದಕ ದ್ರವ್ಯಗಳಿಂದ ದೂರವಿರಬೇಕು. ತಮ್ಮ ಭವಿಷ್ಯದಲ್ಲಿ ಉನ್ನತ ಸ್ಥಾನಗಳಿಗೆ ಹೋಗಬೇಕಾದರೆ ಪ್ರತಿಯೊಬ್ಬರು ಪರಿಶ್ರಮ, ಶಿಸ್ತು ಗುರಿಯನ್ನಿಟ್ಟುಕೊಳ್ಳಬೇಕು ಎಂದು ಚಿಂಚೋಳಿ ಆರಕ್ಷಕ ಉಪಾಧೀಕ್ಷಕ ಪರಶುರಾಮ ಕೋರವಾರ ಹೇಳಿದರು.
ಪಟ್ಟಣದ ಚಂದಾಪುರ ನಗರದಲ್ಲಿರುವ ಹೈ-ಕ ಶಿಕ್ಷಣ ಸಂಸ್ಥೆಯ ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2012- 13ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ  ಮತ್ತು ಮಹಿಳಾ ವಸತಿ ನಿಲಯದ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶ್ರಮ ಪಟ್ಟರೆ ಗೌರವ: ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆಯಿದೆ. ತಮ್ಮದೇ ಆದ ಗುರಿಯನ್ನಿಟ್ಟುಕೊಂಡು ಅದರಲ್ಲಿ ಸಾಧನೆ ಮಾಡಬೇಕು. ಯಾವುದೇ ರೀತಿಯಲ್ಲಿ ಜೀವನದಲ್ಲಿ ಹತಾಶೆ, ಜಿಗುಪ್ಸೆ ಹೊಂದಬಾರದು. ಛಲ ಮತ್ತು ಪರಿಶ್ರಮ ಪಟ್ಟರೆ ನಮಗೆ ಸಿಗಬೇಕಾದ ಗೌರವ ಸಿಗಲಿದೆ ಎಂದು ಎಂದರು.
ಸಮಾರಂಭದಲ್ಲಿ ಪ್ರೊ. ಎಸ್.ಎಚ್. ಹೊಸಮನಿ, ಪ್ರೊ. ಎಸ್.ಎನ್. ನಜೀರ್, ವಿದ್ಯಾರ್ಥಿ ಸಂಘದ ವೀರೇಶ ಎಸ್. ಫರಹಾ ಬೇಗಂ, ಆನಂದ ಮಲ್ಲಿಕಾರ್ಜುನ, ಆನಂದಕುಮಾರ ಬಸವರಾಜ್, ಪೂಜಾ ಮಾಣಿಕರಾವ, ಪ್ರಭು ಹಣಮಂತ, ಶ್ರೀನಿವಾಸ ಧಾವಜಿ, ಸುಖಿಯಾ ಬೇಗಂ ಮುಂತಾದವರು ಉಪಸ್ಥಿತರಿದ್ದರು.
ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಮಾಜಿ ಶಾಸಕ ನಾಗರೆಡ್ಡಿ ಪಾಟೀಲ್ ಮಾತನಾಡಿದರು. ಪ್ರಾಂಶುಪಾಲ ಡಾ. ವಿಜಯಲಕ್ಷ್ಮಿ ಕೋಸಗಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಚೆನ್ನಮಲ್ಲಪ್ಪ ಕಲಬುರ್ಗಿ ಸ್ವಾಗತಿಸಿದರು. ಮಾಣಿಕರಾವ ಅಡವಾಲ್ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎನ್.ಜಿ ಅವರಾದಿ ವಂದಿಸಿದರು. ಇದೇ ವೇಳೆ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಪಾರಿತೋಷಕ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.