ಆಳಾಗಿ ದುಡಿಯುವವರನ್ನು ಆಯ್ಕೆ ಮಾಡಿ: ಶ್ರುತಿ
ಶಹಾಪುರ: ಚುನಾವಣೆಯಲ್ಲಿ ಆಯ್ಕೆಯಾದ ನಂತರ ಮತದಾರರ ಕಡೆಗಣಿಸುವವರನ್ನು ಕೈ ಹಿಡಿಯದೇ, ಆಳಾಗಿ ಸೇವೆ ಮಾಡುವವರನ್ನು ಆಯ್ಕೆ ಮಾಡಿ ಎಂದು ಕೆಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಕರೆ ನೀಡಿದರು.
ಸಾಮಾಜಿಕ ಕಳಕಳಿ: ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಗುರುಪಾಟೀಲ ಶಿರವಾಳ ಪರ ಪ್ರಚಾರ ನಡೆಸಿದ ಅವರು, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಆಶಯಗಳನ್ನು ಪೂರೈಸಲು ಕೆಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ಬದಲಾವಣೆ ತರಬೇಕು. ಶಹಾಪುರ ಮತಕ್ಷೇತ್ರದ ಅಭ್ಯರ್ಥಿ ಯುವ ನಾಯಕನಾಗಿದ್ದು, ಸಭ್ಯ, ಸುಸಂಸ್ಕೃತ ಮನೆತನದ ಸಾಮಾಜಿಕ ಕಳಕಳಿಯುಳ್ಳವರಾಗಿದ್ದಾರೆ. ಇಂಥವರ ಆಯ್ಕೆಯಿಂದ ಮತಕ್ಷೇತ್ರ ಅಭಿವೃದ್ಧಿಯಲ್ಲಿ ಮುಂಚೂಣಿ ಬರುವುದರಲ್ಲಿ ಸಂಶಯವಿಲ್ಲ. ಈ ದಿಸೆಯಲ್ಲಿ ಅನ್ಯಪಕ್ಷಗಳನ್ನು ತಿರಸ್ಕರಿಸಿ ಬದಲಾವಣೆ ತನ್ನಿ ಎಂದರು.
ಅದಮ್ಯ ಉತ್ಸಾಹ: ಕೆಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಜಗದೀಶ ಹಿರೇಮನಿ ಮಾತನಾಡಿ, 70ರ ಇಳಿ ವಯಸ್ಸಿನಲ್ಲಿರುವ ಯಡಿಯೂರಪ್ಪನವರ ಅದಮ್ಯ ಉತ್ಸಾಹ, ಕಾರ್ಯಬದ್ಧತೆ ಜನತೆಗೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವ ಚಿಂತನೆಗೆ ರಾಜ್ಯದಲ್ಲಿನ ಮತದಾರರು ಸ್ಪಂದಿಸುತ್ತಿದ್ದಾರೆ. ಇದರಿಂದ ಕೆಜೆಪಿಗೆ ಹೊಸ ಉತ್ಸಾಹ ಬಂದಿದೆ ಎಂದರು.
ಅಭ್ಯರ್ಥಿ ಗುರುಪಾಟೀಲ ಶಿರವಾಳ ಮಾತನಾಡಿ, ಕ್ಷೇತ್ರದ ಜನತೆ ಮೊದಲಿನಿಂದಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅಧಿಕಾರ ಶಾಶ್ವತವೆನ್ನದೆ ಜನತೆಗಾಗಿ ಪ್ರಾಮಾಣಿಕ ಸೇವೆ ಮಾಡುವ ಉದ್ದೇಶವಿದ್ದು ತಾಲೂಕಿನ ಅಭಿವೃದ್ಧಿ ಗುರಿಯಾಗಿದೆ ಎಂದರು.
ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಡಾ.ಮಲ್ಲನಗೌಡ ಉಕ್ಕಿನಾಳ, ಮಲ್ಲಣ್ಣಮಡ್ಡಿ, ಡಾ.ಚಂದ್ರಶೇಖರ ಸುಬೇದಾರ, ಭೀಮಯ್ಯಗೌಡ ಕಟ್ಟಿಮನಿ, ಅಡಿವೆಪ್ಪ ಜಾಕಾ, ರಾಜಶೇಖರ ನಗನೂರ, ಲಾಲ ಅಹ್ಮದ ಖುರೇಶಿ, ಸಂತೋಷ ಗುತ್ತೆದಾರ, ಶ್ರೀಕಾಂತ ಸುಬೇದಾರ, ಬಸವರಾಜ ಆನೇಗುಂದಿ, ನಾಗಣ್ಣ ಸಾಹು, ರಾಜುಗೌಡ ಉಕ್ಕಿನಾಳ, ವಸಂತ ಸುರಪುರ,ಇಬ್ರಾಹಿಂ ಶಿರವಾಳ, ಮಹಾಂತಗೌಡ, ಗುರು ಮದ್ದಿನ, ಗುರುರಾಜ ದೇಶಪಾಂಡೆ, ದೇವಿಂದ್ರ ತೋಟಿಗೇರ ಇತರರು ಇದ್ದರು.
ರಾಜ್ಯದ ಅಭಿವೃದ್ಧಿಗಾಗಿ ಬಿಎಸ್ವೈ ಬೆಂಬಲಿಸಲು ಮನವಿ
ಯಾದಗಿರಿ: ನಾಲ್ಕು ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವುದು ನಮ್ಮ ಕಣ್ಮುಂದಿದೆ. ಆದರೆ ಅಲ್ಪ ಅವಧಿಯಲ್ಲೇ ಬಿ.ಎಸ್.ಯಡಿಯೂರಪ್ಪನವರು ಕನ್ನಡ ನಾಡನ್ನು ಇಡೀ ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುವಂತಹ ಕನಸು ಕಂಡು, ಅದಕ್ಕಾಗಿ ಶ್ರಮಿಸಿದ್ದರು. ಅವರ ಕನಸು ನನಸಾಗಬೇಕಾದರೆ ಮತದಾರರು ಅವರ ಕೈ ಬಲಪಡಿಸಬೇಕು ಎಂದು ಕೆಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಮನವಿ ಮಾಡಿದರು.
ನಗರದ ವೀರನಿಕೇತನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೆಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಾ.ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ಈಗಾಗಲೇ ಮತ ಕ್ಷೇತ್ರಾದ್ಯಂತ ಪ್ರಚಾರ ಕೈಗೊಳ್ಳಲಾಗಿದೆ. ಹೋದಲ್ಲೆಲ್ಲಾ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಪರ ಅಲೆಯಿದ್ದು, ಯಡಿಯೂರಪ್ಪನವರ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಲಿವೆ ಎಂದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅಸದ್ ಚಾವುಸ್, ಪ್ರಧಾನ ಕಾರ್ಯದರ್ಶಿ ಡಾ.ಶಿವಪುತ್ರರಡ್ಡಿ ಚಟ್ನಳ್ಲಿ, ಮುಖಂಡರಾದ ಡಾ.ಶರಣರಡ್ಡಿ ಕೋಡ್ಲಾ, ರುದ್ರಗೌಡ ಪಾಟೀಲ ಮಲ್ಲಾ, ಅಯ್ಯಣ್ಣ ಹುಂಡೇಕಾರ್, ವಿನೋದ ಜೈನ್, ನಾಗರಾಜ ಬೀರನೂರ ಇದ್ದರು.
ಗುರುಮಠಕಲ್ ಕ್ಷೇತ್ರಕ್ಕೆ ಬಿಎಸ್ವೈ ಕೊಡುಗೆ ಅಪಾರ
ಯಾದಗಿರಿ: ಜಿಲ್ಲೆಯ ಗಡಿಭಾಗ ಗುರಮಠಕಲ್ ಮತಕ್ಷೇತ್ರಕ್ಕೆ ಯಡಿಯೂರಪ್ಪ ಅವರ ಕೊಡುಗೆ ಅಪಾರ. ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಅವರನ್ನು ಆಯ್ಕೆ ಮಾಡುವ ಮೂಲಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಚಿತ್ರನಟಿ, ಕೆಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರುತಿ ಕರೆ ನೀಡಿದರು. ಕೊಂಕಲ್ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಗುರಮಠಕಲ್ ಮತಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದು, ಕ್ಷೇತ್ರದ ಶಾಸಕರನೆನಿಸಕೊಂಡವರು ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಶಾಸಕರು ಅವ್ಯವಹಾರ ನಡೆಸಿ, ಈ ಭಾಗದ ಜನತೆಗೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

