ಶಿವಪಂಚಾಕ್ಷರೇಶ್ವರರ ಪುಣ್ಯಾರಾಧನೆ 18ರಿಂದ
ಗುಲ್ಬರ್ಗ/ಶಹಾಬಾದ್: ಪೇಠಶಿರೂರ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತಮಠ ಸಂಸ್ಥಾನದಲ್ಲಿ ಲಿಂ. ಶಿವಪಂಚಾಕ್ಷರೇಶ್ವರರ 35ನೇ ಪಣ್ಯಾದಾಧನೆ ಹಾಗೂ ಸಿದ್ದಲಿಂಗ ಸ್ವಾಮಿಗಳ 4ನೇ ಪಟ್ಟಾಧಿಕಾರ ಮಹೋತ್ಸವ ಏ.18 ರಿಂದ 21ರವರೆಗೆ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ.
ಏ.18ರಂದು ರಾತ್ರಿ 8ಕ್ಕೆ ಪುರಾಣ ಉದ್ಘಾಟನೆ ಚಿತ್ತಾಪುರ ಹಿರಿಯ ನ್ಯಾಯಾಧೀಶರಾದ ಸಿ.ರಂಗೇಗೌಡರಿಂದ ನಡೆಯಲಿದೆ. ಸಿದ್ದಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಡಾ. ಟಿ.ಎ. ಪಾಟೀಲ್, ಉಪನ್ಯಾಸ ಡಾ. ಸೋಮಶಂಕರ ವಿಶ್ವನಾಥಮಠ, ಚಂದ್ರಶೇಖರ ಅವಂಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಿಜಾಪುರದ ಹತ್ತರಗಾ ವಿರಕ್ತ ಮಠದ ಮುರುಘೇಂದ್ರ ಸ್ವಾಮಿಗಳಿಂದ ಪುರಾಣ ನಡೆಯುವುದು.
ಏ.20ರಂದು ಪುರಾಣ ಮಂಗಲ ಸಾನ್ನಿಧ್ಯವನ್ನು ಚಿಕ್ಕಸೂಗೂರ ಚೌಕಿ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ, ರಾವೂರ ಸಿದ್ದಲಿಂಗ ಸ್ವಾಮೀಜಿ, ಗುರುಮಠಕಲನ ಶಾಂತವೀರ ಸ್ವಾಮೀಜಿ, ಗುಲ್ಬರ್ಗದ ಶಿವಾನಂದೇಶ್ವರ ಸ್ವಾಮೀಜಿ, ನಿಂಬರ್ಗಾದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಶಾಸಕಿ ಅರುಣಾ ಪಾಟೀಲ್, ಶಾಸಕ ಶರಣಪ್ರಕಾಶ ಪಾಟೀಲ್, ಅಲ್ಲಂಪ್ರಭು ಪಾಟೀಲ್, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಪ್ರಿಯಾಂಕ್ ಖರ್ಗೆ, ಅಜಯಸಿಂಗ್ ತಿವಾರಿ, ಜಿಪಂ ಸದಸ್ಯ ರಮೇಶ ಮರಗೋಳ, ನೀಲಕಂಠರಾವ ಮುಲಗಿ, ಪಾಷಾ ಪಟೇಲ್ ಉಪಸ್ಥಿತರಿರುವರು.
21ರಂದು ಮಹಾರುದ್ರಾಭಿಷೇಕ: ಏ. 21ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ, ಬೆ.10ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ, 11ಕ್ಕೆ ಮಹಾಪ್ರಸಾದ ವಿತರಣೆ, ಮ.12.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯುವುದು, ಸಂಜೆ 7ಕ್ಕೆ ನಡೆಯುವ ಧರ್ಮಸಭೆ ಸಾನ್ನಿಧ್ಯವನ್ನು ಗುಲ್ಬರ್ಗದ ರೇವಣಸಿದ್ದ ಸ್ವಾಮಿ, ಸೊನ್ನದ ಶಿವಾನಂದ ಸ್ವಾಮಿ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

