ರಾಜುಗೌಡ ನಾಮಪತ್ರ ಸಲ್ಲಿಕೆಗೆ ಜನಸ್ತೋಮ
ಸುರಪುರ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸೋಮವಾರ ಮಾಜಿ ಸಚಿವ ರಾಜುಗೌಡರು ನಾಮಪತ್ರ ಸಲ್ಲಿಸುತ್ತಾರೆ ಎಂಬ ಸುದ್ದಿ ತಿಳಿದ ಅವರ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಜನಸ್ತೋಮವೇ ಹರಿದು ಬಂದಿತ್ತು.
ಮಾಜಿ ಸಚಿವರು ತಿಂಥಣಿ ಮೌನೇಶ್ವರ, ಕೊಡೇಕಲ್ ಬಸವಣ್ಣ, ದೇವರಗಡ್ಡಿಯ ಗಡ್ಡೆಮ್ಮ, ಕಕ್ಕೇರಾ ಸೋಮನಾಥೇಶ್ವರ, ವೇಣುಗೋಪಾಲಸ್ವಾಮಿ ದೇವರನ್ನು ನೆನೆದ ಅವರು ಸುಮಾರು 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಸೋಮವಾರ ಬೆ.11 ಗಂಟೆಗೆ ತಮ್ಮ ನಿವಾಸದಿಂದ ಪಾದಯಾತ್ರೆ ಹೊರಟರು. ಹನುಮಾನ ಟಾಕೀಸ್ ರಸ್ತೆಯ ಮೂಲಕ ಗಾಂಧಿ ವೃತ್ತಕ್ಕೆ ತೆರಳಿ ಮಹಾತ್ಮ ಗಾಂಧೀಜಿಗೆ ಮಾಲಾರ್ಪಣೆ ಮಾಡಿ ಮಿನಿ ವಿಧಾನಸೌಧಕ್ಕೆ ತೆರಳಿದರು. ಅಲ್ಲಿ ತಮ್ಮ ತಾಯಿಯ ಪಾದಕ್ಕೆ ನಮಸ್ಕರಿಸಿ ಜೆಡಿಎಸ್ನಿಂದ ಮೂರು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಕಿಶೋರಚಂದ ಜೈನ್, ಯಲ್ಲಪ್ಪ ಕುರುಕುಂದಿ, ನಿಂಗಣ್ಣ ಬಾದ್ಯಾಪುರ, ನಾಗಣ್ಣ ಸಾಹು ದಂಡಿನ್, ಬಸವರಾಜ ಸ್ಥಾವರಮಠ, ಚಂದ್ರಶೇಖರ ದಂಡಿನ್, ಸಲೀಂ ವರ್ತಿ, ಮಲ್ಲಿಕಾರ್ಜುನ ಹಿರೇಮಠ, ಭೀಮಾಶಂಕರ ಬಿಲ್ಲವ್, ಪರಮಣ್ಣ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

