ಈವರೆಗೆ ಮಾಡಿದ ಅಭಿವೃದ್ಧಿಯೇ ಗೆಲವಿಗೆ ದಾರಿ
ಕೆಂಭಾವಿ: ಕಳೆದ ಎರಡು ಬಾರಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಮಾಡಿದ ಅಬಿವೃದ್ಧಿ ಕಾರ್ಯಗಳೇ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ರಹದಾರಿಯಾಗಿದೆ ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
ಸಮೀಪದ ಮುದನೂರು ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅರು, ಮುದನೂರು ದಾಸಿಮಯ್ಯನ ಕ್ಷೇತ್ರ ಹಿಂದೆಂದೂ ಕಾಣದ ಅಭಿವೃದ್ದಿ ಹೊಂದಿದೆ. ಸುಮಾರು 9 ಕೋಟಿ ರುಪಾಯಿ ಕಾಮಗಾರಿಗಳನ್ನು ಈ ಗ್ರಾಮದಲ್ಲಿ ಮಾಡಿದ್ದೇನೆ. ಸುವರ್ಣ ಗ್ರಾಮ, ಕ್ರೀಡಾಂಗಣ, ಸಿಸಿ ರಸ್ತೆ, ಚರಂಡಿ, ಬಹುದಿನಗಳಿಂದೆ ನೆನೆಗುದಿಗೆ ಬಿದ್ದಿದ್ದ ಮಲ್ಲಾ ನಾರಾಯಣಪುರ ರಸ್ತೆ, ಕುಸಿತಕ್ಕೊಳಗಾಗಿ ಹಾನಿಯಾಗುತ್ತಿದ್ದ ಕಾಲುವೆ ನವೀಕರಣ ಸೇರಿದಂತೆ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ದಾಸಿಮಯ್ಯನ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಈಗಾಗಲೇ ನಡೆದಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನನ್ನನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಪ್ರವಾಸಿ ತಾಣ: ಕ್ಷೇತ್ರವು ಜಿಲ್ಲೆಯಲ್ಲಿ ಪ್ರವಾಸಿ ತಾಣವಾಗಿ ಮಾಡುವ ಬಯಕೆ ನನಗಿದೆ. ತಿಂಥಣಿ ಮೌನೇಶ್ವರ, ಕೊಡೇಕಲ್ ಬಸವಣ್ಣನ ಕ್ಷೇತ್ರಗಳು ಕೂಡಾ ಪ್ರವಾಸಿ ತಾಣಗಳಾಗಿ ಪ್ರವಾಸಿಗಳನ್ನು ಆಕರ್ಷಿಸುವ ಕೇಂದ್ರಗಳಾಗಲಿವೆ. ಕಳೆದ 10 ವರ್ಷದಲ್ಲಿ ಅನೇಕ ಅಭಿವೃದ್ಧಿ ಕೆಸಗಳನ್ನು ಮಾಡಿದ್ದೇನೆ. ನನ್ನನ್ನು ಟೀಕಿಸುವ ನೈತಿಕ ಹಕ್ಕು ವಿರೋಧ ಪಕ್ಷದವರಿಗಿಲ್ಲ. ಎಲ್ಲ ವರ್ಗದವರಿಗೆ ಸಮಾನವಾಗಿ ಅಧಿಕಾರ ನೀಡುವ ಮೂಲಕ ಆದ್ಯತೆ ನೀಡಿದ್ದೇನೆ.
ಈ ಬಾರಿಯೂ ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸಿ. ಅಭಿವೃದ್ಧಿ ಬಗ್ಗೆ ನನ್ನ ಕೈಹಿಡಿದು ಕೇಳಿ. ನಾನು ನಿಮ್ಮ ಮನೆಯಾಳಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜಾ ಹನುಮಪ್ಪ ನಾಯಕ, ನಾಗರಡ್ಡೆಪ್ಪ ಚೌದ್ರಿ, ಸಲೀಮ್ ವರ್ತಿ, ಭೀಮರಾಯ ಹೊಟ್ಟಿ, ಸುಬ್ಬಣ್ಣ ಚೌದ್ರಿ, ಸಂಗಾರಡ್ಡಿ ಚೌದ್ರಿ, ಬಾಬಾಗೌಡ ಅಗತೀರ್ಥ, ಸಿದರಾಮರೆಡ್ಡಿ ಚೌದ್ರಿ, ಸಿದ್ದನಗೌಡ ಕರಿಬಾವಿ, ರಮೇಶ ಚೌದ್ರಿ, ಶಿವಪುತ್ರಪ್ಪ ಅಲಿಪುರ, ಶಂಕರ ಪಡಶೆಟ್ಟಿ, ಮಡಿವಾಳಪ್ಪಗೌಡ ಜಂಗಳಿ, ಮಡಿವಾಳಪ್ಪಗೌಡ ಬಳವಾಟ, ಸಂಜೀವ ಧೊರಿ ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

