ಕೆಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಸಜ್ಜನ್
ಕನ್ನಡಪ್ರಭ ವಾರ್ತೆ ಚಿತ್ತಾಪುರ ಏ.19
ಪ್ರಾದೇಶಿಕ ಪಕ್ಷವಾದ ಕೆಜೆಪಿಯಿಂದ ಮಾತ್ರ ರಾಜ್ಯ ಹಾಗೂ ಕ್ಷೇತ್ರದ ಅಭೃವೃದ್ಧಿ ಸಾಧ್ಯ ಎಂದು ಕೆಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.
ಇಲ್ಲಿನ ಕೆಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಮತದಾರರು ತಿರಸ್ಕರಿಸಲಿದ್ದಾರೆ ಎಂದರು.
ಎಲ್ಲಡೆ ಕೆಜೆಪಿಯತ್ತ ಮತದಾರರು ಬೆಂಬಲಿಸಲಿದ್ದಾರೆ. ಇದರಿಂದಾಗಿ ಕೆಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗುಂಪಾ ಗ್ರಾಮದ ವಿಜಯಕುಮಾರ ಕಂಠಿ ನೇತೃತ್ವದಲ್ಲಿ ರಾಜಶೇಖರ ವಾಲಿ, ಗಂಗಣ್ಣ ಭರಮಶೆಟ್ಟಿ, ಬಸವರಾಜ ತಳಕೇರಿ, ನಾಗಪ್ಪ ಭಂಗಿ, ನಾಗಣ್ಣ ಬಾಗೋಡಿ, ದಶರಥ ಕಲಗುರ್ತಿ, ಪೀರ ಅಹ್ಮದ್ ಸೇಟ್ಸ್ ವರು ಕೆಜೆಪಿಗೆ ಸೇರ್ಪಡೆಯಾದರು.
ಕೆಜೆಪಿ ತಾಲೂಕು ಅಧ್ಯಕ್ಷ ಗೋಪಾಲ್ ರಾಠೋಡ, ಚಂದ್ರಶೇಖರ ಅವಂಟಿ, ಶಾಂತಕುಮಾರ ಮಳಖೇಡ, ಅಭ್ಯರ್ಥಿ ಸಿ. ಗುರುನಾಥ, ನಾಗರೆಡ್ಡಿ ಗೋಪಶೇನ್, ಶಿವಶರಣಪ್ಪ ಭಂಗಿ, ಅರ್ಜುನ ಗಂಗಾಣಿ, ದೀಪಕ ಹೊಸ್ಸೂರ ಇದ್ದರು.
ಸಜ್ಜನಶೆಟ್ಟಿ ಕಾಂಗ್ರೆಸ್ಗೆ ಸೇರ್ಪಡೆ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪ್ರಭಾವಿ ಕೆಜೆಪಿ ಮುಖಂಡ ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಸಜ್ಜನಶೆಟ್ಟಿ, ನಿವೃತ್ತ ಶಿಕ್ಷಕ ಶಾಮರಾವ ಗಾರಂಪಳ್ಳಿ, ಬಿಜೆಪಿ ಮುಖಂಡರಾದ ದುರ್ಗಪ್ಪ ಚಾಕರಿ ಬಂಕಲಗಾ, ಶಿವಕುಮಾರ ಕಲಬುರ್ಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಅವರ ನಾಯಕತ್ವವನ್ನು ಒಪ್ಪಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ್ ಕರದಾಳ, ಡಾ. ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ್, ಪಕ್ಷದ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

