ಬಿಜೆಪಿಗೆ ಒಮ್ಮೆ ಅವಕಾಶ ನೀಡಿ: ಮಲ್ಲಾಬಾದಿ
ಶಹಾಪುರ: ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಕೆಲವರ ಸ್ವಯಂಕೃತ ಅಪರಾಧಗಳಿಂದ ಪಕ್ಷದ ವರ್ಚಸ್ಸಿಗೆ ಸ್ವಲ್ಪಮಟ್ಟಿನ ಹಾನಿಯಾಗಿರಬಹುದು. ಆದರೆ ಬಿಜೆಪಿ ಸಾಧನೆಗಳನ್ನು ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಶಹಾಪುರ ಮತಕ್ಷೇತ್ರದಲ್ಲಿ ಒಮ್ಮೆ ಬಿಜೆಪಿಗೆ ಅವಕಾಶ ಕೊಟ್ಟು ನೋಡಿ ಎಂದು ಅಭ್ಯರ್ಥಿ ವೀರಣ್ಣಗೌಡ ಮಲ್ಲಾಬಾದಿ ಹೇಳಿದರು.
ಪಟ್ಟಣದ ವಿವಿಧ ವಾರ್ಡುಗಳಲ್ಲಿ ಪ್ರಚಾರ ಕೈಗೊಂಡು ಅವರು ಮತಯಾಚಿಸಿದರು. ಕೆಲವರು ಅಧಿಕಾರ ದಾಹಕ್ಕಾಗಿ ಮನಸ್ಸಿಲ್ಲದ ಮನಸ್ಸಿನಿಂದ ಬಿಜೆಪಿ ಸೇರಿ ಲಾಭ ಮಾಡಿಕೊಂಡು ಸದ್ಯ ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಇದರಿಂದ ಬಿಜೆಪಿಗೆ ಲಾಭವಾಗಿದೆಯೇ ವಿನಃ ಹಾನಿಯಾಗಿಲ್ಲ ಎಂದರು. ಸದ್ಯ ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿದ್ದು ಎಲ್ಲ ವರ್ಗದವರ ಹಿತ ಕಾಪಾಡುವಲ್ಲಿ ಕಟಿಬದ್ಧವಾಗಿದೆ. ಮತಕ್ಷೇತ್ರದ ಹಲವು ಗ್ರಾಮೀಣ ಪ್ರದೇಶಗಳು ಇನ್ನೂ ಹಲವು ಸೌಕರ್ಯದಿಂದ ವಂಚಿತವಾಗಿವೆ. ಹಿಂದೆ ಆಳಿದವರು ಏನನ್ನೂ ಮಾಡದೇ ಕೇವಲ ಎಲ್ಲ ವರ್ಗದವರನ್ನು ಮತ ಬ್ಯಾಂಕಾಗಿ ಪರಿವರ್ತಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಲ್ಪನೆ ಹೊಂದಿದ ಪಕ್ಷವಾಗಿದ್ದು, ಸಮಪಾಲು, ಸಮಬಾಳು ಎನ್ನುವುದು ಧ್ಯೇಯವಾಗಿದೆ. ಮತದಾರರು ಆಶೀರ್ವದಿಸಬೇಕು ಎಂದರು.
ಈ ಸಂದರ್ಭದಲ್ಲಿ ಭೀಮರಾಯ ಜಂಗಳಿ, ದೇವು ಕೋನೇರ, ಮಲ್ಲಿಕಾರ್ಜುನ ಚಿಲ್ಲಾಳ, ಬಸವರಾಜ ಅರುಣಿ, ಶಾಂತಕುಮಾರ ಪಾಟೀಲ್, ಹುಲಗಪ್ಪ, ದೇವಿಂದ್ರಪ್ಪ, ಅಯ್ಯಣ್ಣ, ದೇವು, ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

