ಗುಲ್ಬರ್ಗಾ

ವಿಧಾನಸಭೆಗೆ ವೈಜನಾಥ ಕಳಿಸುವ ಗುರಿ: ಮದನಾ

Published On :

ಸೇಡಂ: ಮಾಜಿ ಸಚಿವ ವೈಜನಾಥ ಪಾಟೀಲರನ್ನು ಸೇಡಂ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ 371ನೇ ವಿಧಿ ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡುವುದೇ ನಮ್ಮ ಮೊದಲ ಗುರಿ ಎಂದು ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ತಿಳಿಸಿದರು.
ಇಲ್ಲಿನ ಕೆಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ, ಹೋರಾಟದ ಮೂಲಕ ದಾರಿ ತೋರಿಸಲು ಮುಂದಾಗಿರುವ ವೈಜನಾಥ ಪಾಟೀಲರ ಕಾರ್ಯ ಶ್ಲಾಘನೀಯವಾಗಿದ್ದು, 371ನೇ ವಿಧಿ ಜಾರಿ ಮಾಡಲು ಪಾಟೀಲರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಂ ಪಾಟೀಲ್, ಪರ್ವತರೆಡ್ಡಿ ನಾಮವಾರ, ಅನಂತೇಶ್ವರರೆಡ್ಡಿ ಪಾಟೀಲ್, ಶ್ರೀಶೈಲ್ ಎಂ.ಜಿ, ಜಗನ್ನಾಥರೆಡ್ಡಿ, ನಾಗರೆಡ್ಡಿ ದೇಶಮುಖ ಮದನಾ, ಈರಣ್ಣ ರೆಮ್ಮಣ್ಣಿ ಇದ್ದರು.
ಸೇರ್ಪಡೆ: ಯಡ್ಡಳ್ಳಿ ಗ್ರಾಮದ ಚಂದ್ರಶೇಖರ ಪಾಟೀಲ್, ಮಲ್ಲಿಕಾರ್ಜುನ ಕಾಕಲವಾರ, ಕಿಣಪ್ಪ ಹೈದ್ರಾಬಾದ್, ನಾಗರಾಜ ಪೋಚಮ್ಮ, ಜಾಕನಪಲ್ಲಿ, ನರಸಪ್ಪ, ರಮೇಶ, ಗೋಪಾಲರೆಡ್ಡಿ, ಸಂಗಾವಿ(ಟಿ) ಕಲ್ಲಪ್ಪಗೌಡ, ವೆಂಕಟಪ್ಪ, ಕಲ್ಯಾಣ, ದೌಲಖಾನ್ ತಮ್ಮ ಬೆಂಬಲಿಗರೊಂದಿಗೆ ಕೆಜೆಪಿ ಸೇರ್ಪಡೆಯಾದರು. ಸೇಡಂನ ಕೆಜೆಪಿ ಕಾರ್ಯಾಲಯದಲ್ಲಿ ವಿವಿಧ ಹಳ್ಳಿಗಳ ಮುಖಂಡರು ಕೆಜೆಪಿ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.