ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ: ರೆಡ್ಡಿ
ಗುಲ್ಬರ್ಗ: ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಾಲಿ ಶಾಸಕರು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಆರೋಪಿಸಿದರು.
ಈ ಕ್ಷೇತ್ರ ವ್ಯಾಪ್ತಿಯ ಅಯ್ಯರವಾಡಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕಳೆದ ನಾಲ್ಕು ಬಾರಿ ಕ್ಷೇತ್ರವನ್ನು ಆಳಿದ ಶಾಸಕರು ಒಂದು ಕಣ್ಣಿಗೆ ಸುಣ್ಣು ಮತ್ತೊಂದು ಕಣ್ಣಿಗೆ ಬೆಣ್ಣೆ ಹೆಚ್ಚಿದ್ದಾರೆ ಎಂದು ದೂರಿದರು.
ಅಭಿವೃದ್ಧಿಯಿಂದ ವಂಚಿತ: ಈಗಲೂ ಉತ್ತರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ಕ್ಷೇತ್ರದಲ್ಲಿ ಇನ್ನು ರಸ್ತೆಗಳಿಲ್ಲ. ಬಡವರು ನಿಜವಾಗಿಯೂ ಇಲ್ಲಿ ಅನಾಥರಾಗಿದ್ದಾರೆ. ಹಾಲಿ ಶಾಸಕ ಖಮರುಲ್ ಇಸ್ಲಾಂ ಈ ಕ್ಷೇತ್ರದ ಬಡವರ ಬಗ್ಗೆ ಒಮ್ಮೆಯೂ ಚಿಂತಿಸಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಆರಿಸಿ ಬಂದರೆ ತಾರತಮ್ಯ ನೀತಿ ಅನುಸರಿಸದೇ ಕ್ಷೇತ್ರದ ಎಲ್ಲ ಬಡಾವಣೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಅಧಿಕಾರ ನಡೆಸಿದ್ದು, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಗುಲ್ಬರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಗುಲ್ಬರ್ಗ ಅಭಿವೃದ್ಧಿಗಾಗಿ 200 ಕೋಟಿ ಬಿಡುಗಡೆ ಮಾಡಿದೆ. ಸಿಎಂ ಶೆಟ್ಟರ್ ಅವರ ಕೈ ಬಲಪಡಿಸುವುದಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ತಮ್ಮನ್ನು ಗೆಲ್ಲಿಸುವುದರೊಂದಿಗೆ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜೀವನರಾವ ವಾಗ್ಮೋರೆ, ಪ್ರತಾಪ ಕಾಕಡೆ, ಆನಂದ ಲಿಂಗನಮಡಿ, ರತನ ಮಾನೆ, ರತನ ಜಗಫತ್, ರವಿ ಉದನೂರ, ಮಡಿವಾಳಪ್ಪ ನರಿಬೋಳ, ಅಂಬಾದಾಸ ಕುಲಕರ್ಣಿ, ನಾಗೇಶ ವಾರದ, ಶಿವಾನಂದ ಯಾಳಗಿ, ಬಸರವಾಜ ಹಿರೇಮಠ ಸೇರಿದಂತೆ ಮುಖಂಡರು, ಹಾಗೂ ಬಡಾವಣೆಯ ನಾಗರಿಕರು, ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

