ಗುಲ್ಬರ್ಗಾ

ದಿಗ್ಗಾಂವದಲ್ಲಿ ಪ್ರಿಯಾಂಕ್ ಬಿರುಸಿನ ಪ್ರಚಾರ

Published On :

ಚಿತ್ತಾಪುರ: ತಾಲೂಕಿನ ಅಭಿವೃದ್ಧಿಗಾಗಿ, ಸ್ವಚ್ಛ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿ ಮಿತಿಮೀರಿದ ಭ್ರಷ್ಟಾಚಾರ ನಡೆಸುವ ಮೂಲಕ ಜೈಲು ಹಾಗೂ ಬೇಲು ಎನ್ನುತ್ತ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಅರೋಪಿಸಿದರು.
ಕೆಜೆಪಿಯು ಬಿಜೆಪಿಯ ಪಾಪದ ಕೂಸು, ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು 5 ವರ್ಷಗಳಿಂದ ಬಿಜೆಪಿಗೆ ಅಭಿವೃದ್ಧಿ ಮಾಡಲಿಕ್ಕೆ ಆಗದೆ ಇದ್ದವರು ಕೆಜೆಪಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅವರು ಜೈಲಿಗೆ ಹೋಗುವುದು ತಪ್ಪಿಸಿಕೊಳ್ಳಲಿ ಎಂದು ಹೇಳಿದರು.
ಸೇರ್ಪಡೆ: ಗ್ರಾಪಂ ಸದಸ್ಯ ಸಿದ್ದು ಸಜ್ಜನಶೆಟ್ಟಿ, ದೇವಿಂದ್ರ ಚೌದರಿ, ರಜನಿಕಾಂತ ಪೂಜಾರಿ, ಮಲ್ಲಿನಾಥ ಅಚ್ಚಲಿ, ಶರಣಪ್ಪ ಹಣ್ಣಿಕೇರಿ, ಮಹಾದೇವಪ್ಪ ಹಣ್ಣಿಕೇರಿ, ದೇವಿಂದ್ರಪ್ಪ ಗುಂಡಗುರ್ತಿ, ಶಾಮು ಸಂಗಾವಿ, ಶಂಭು ಹಡಪದ, ಸೂರ್ಯಕಾಂತ ಜಮಶೆಟ್ಟಿ, ಶರಣಪ್ಪ ಹಾಗರಗಿ, ಶರಣಪ್ಪ ಪಲ್ಲೆದ, ಚಂದ್ರಶೇಖರ ಸಂಗಾವಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್ ಕರದಾಳ, ಡಾ. ಪ್ರಭುರಾಜ ಕಾಂತಾ, ನಾಗಯ್ಯ ಗುತ್ತೇದಾರ, ಸೋಮಶೇಖರ ಬೆಳಗುಂಪಾ, ಮುಕ್ತಾರ ಪಟೇಲ್, ರವೀಂದ್ರ ಸಜ್ಜನಶೆಟ್ಟಿ, ಶರಣು ಸಜ್ಜನ್, ಬಸವರಾಜ ಸಂಗಾವಿ, ಮಲ್ಲಿನಾಥ ಭಾಗೋಡಿ, ವಿಠ್ಠಲ್‌ಗೌಡ, ಸಿದ್ದಣಗೌಡ ಆರ್.ಡಿ, ದೇವಿಂದ್ರ ಜಮಶೆಟ್ಟಿ, ಸಿದ್ದಣಗೌಡ ಮಾಲಿಪಾಟೀಲ್, ದೇವಿಂದ್ರ ಹಣ್ಣಿಕೇರಿ, ಪಾಶಾಮಿಯ್ಯ ಬಂಕಲಗಿ ಉಪಸ್ಥಿತರಿದ್ದರು.
ಶಿವರುದ್ರ ಭೀಣಿ ನಿರೂಪಿಸಿದರು. ತಿಪ್ಪಣ್ಣ ಸಂಗಾವಿ ಸ್ವಾಗತಿಸಿದರು. ಶ್ರೀಮಂತ ಗುತ್ತೇದಾರ ವಂದಿಸಿದರು.

'ಪಕ್ಷೇತರಕ್ಕೆ ಮತ ನೀಡಿ'
ಚಿತ್ತಾಪುರ: ಎಲ್ಲ ಪಕ್ಷಗಳು 'ಕಳಂಕ' ಎಂಬ ಹಣೆಪಟ್ಟಿ ಹಂಚಿಕೊಂಡು ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಮತದಾರರನ್ನು ವಂಚಿಸುತ್ತ ಅಧಿಕಾರ ಅನುಭವಿಸಿದ್ದಾರೆ ಎಂದು ಕರವೇ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಹೇಶ ಕಾಶಿ ಆರೋಪಿಸಿದ್ದಾರೆ.
   ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಸರ್ಕಾರ ಶಾಶ್ವತ ಉದೋಗ್ಯ, ಶಿಕ್ಷಣ,  ಆರೋಗ್ಯ, ಬೆಳಗಾವಿ ಸಮಸ್ಯೆ, ಕಾವೇರಿ ನದಿ ನೀರಿನ ವಿವಾದ ಬಗೆಹರಿಸಲು ಸಾಧ್ಯವಾಗಿಲ್ಲ. ಹಣ ಲೂಟಿ ಮಾಡಿ ಜನರನ್ನು ವಂಚಿಸಿ ವೋಟ್ ಬ್ಯಾಂಕ್  ನಿರ್ಮಿಸಿಕೊಳ್ಳಲು ಸುಳ್ಳು ಆಶ್ವಾಸನೆ ನೀಡಿ ಮತದಾರರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.